ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಅರಿಯಡ್ಕ ಗ್ರಾಮ ಪಂಚಾಯತ್ ವತಿಯಿಂದ ಸ್ವಾಗತ

0

ಅರಿಯಡ್ಕ: ಕರ್ನಾಟಕ ಸರ್ಕಾರ,ಸಮಾಜ ಕಲ್ಯಾಣ ಇಲಾಖೆ ಪುತ್ತೂರು ಇದರ ನೇತೃತ್ವದಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಅರಿಯಡ್ಕ ಗ್ರಾಮ ಪಂಚಾಯತ್ ವತಿಯಿಂದ ಅದ್ದೂರಿ ಸ್ವಾಗತ ನೀಡಲಾಯಿತು.

ಕಾರ್ಯಕ್ರಮವನ್ನು ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿಯವರು ದೀಪ ಬೆಳಗಿಸಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಮಾಲಾರ್ಪಣೆ ಮಾಡಿ ಗೌರವಿಸಿದರು ಮತ್ತು ಪಂಚಾಯತ್ ಉಪಾಧ್ಯಕ್ಷೆ ಮೀನಾಕ್ಷಿ ಪಾಪೆಮಜಲು ಸದಸ್ಯರಾದ ದಿವ್ಯಾ ನಾಥ ಶೆಟ್ಟಿ ಕಾವು, ಸೌಮ್ಯ ಬಾಲಸುಬ್ರಹ್ಮಣ್ಯ,ಪಿ.ಡಿ.ಓ ಸುನೀಲ್ ಎಚ್.ಟಿ ಮುಂತಾದವರು ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವಿಸಿದರು.ಪಂಚಾಯತ್ ವ್ಯಾಪ್ತಿಯ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ಜಾಥಾಕ್ಕೆ ಮೆರುಗು ನೀಡಿದರು.ಸರಕಾರಿ ಪ್ರೌಢ ಶಾಲೆ ಪಾಪೆಮಜಲು ಇಲ್ಲಿ ಯ ದೈಹಿಕ ಶಿಕ್ಷಣ ಶಿಕ್ಷಕೆ ಸಂವಿಧಾನದ ಪ್ರಸ್ತಾವನೆ ಬಗ್ಗೆ ಪ್ರಮಾಣ ವಚನ ಬೋಧಿಸಿದರು.

ಶಿಕ್ಷಕ ಹರಿಪ್ರಸಾದ್ ಮತ್ತು ಸಮಾಜ ಕಲ್ಯಾಣ ಇಲಾಖೆಯ ಮ್ಯಾನೇಜರ್ ಕೃಷ್ಣ ಬಿ ಸಂವಿಧಾನದ ಬಗ್ಗೆ ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಬೀದಿ ನಾಟಕ ಪ್ರದರ್ಶನ ನೀಡಲಾಯಿತು.ಈ ಸಂದರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷೆ ಮೀನಾಕ್ಷಿ ಪಾಪೆಮಜಲು ಸದಸ್ಯರಾದ ದಿವ್ಯಾ ನಾಥ ಶೆಟ್ಟಿ, ಹರೀಶ್ ರೈ ಜಾರುತ್ತಾರು, ಸದಾನಂದ ಮಣಿಯಾಣಿ, ಲೋಕೇಶ್ ಚಾಕೋಟೆ, ಸಾವಿತ್ರಿ ಪೊನ್ನೆತ್ತಳ್ಕ,ಪುಷ್ಪಲತಾ ಮರತ್ತಮೂಲೆ, ರೇಣುಕಾ ಸತೀಶ್ ಕರ್ಕೇರಾ ಮಡ್ಯಂಗಳ,ವಿನೀತಾ ಕೆ ವಿ, ರಾಜೇಶ್ ಮಣಿಯಾಣಿ ತ್ಯಾಗ ರಾಜೆ, ಹೇಮಾವತಿ ಚಾಕೋಟೆ, ಸೌಮ್ಯ ಬಾಲಸುಬ್ರಹ್ಮಣ್ಯ , ಅನಿತಾ ಆಚಾರಿ ಮೂಲೆ, ಅಬ್ದುಲ್ ರಹಿಮಾನ್ ಕಾವು, ಪ್ರವೀಣ್ ಅಮ್ಚೀನಡ್ಕ ,ಕಾವು ಕ್ಲಸ್ಟರ್ ಸಿ.ಆರ್.ಪಿ ಕೆ.ಎಲ್.ಎನ್ ಪ್ರಸಾದ್,ವಿದ್ಯಾ ಸಂಸ್ಥೆಗಳ ಮುಖ್ಯಸ್ಥರಾದ ಜಯಲತಾ, ಜಯಂತಿ, ಸಂತೋಷ್ ಮಿಕ್ಸೆತ್ ಶಿಕ್ಷಕಿಯರಾದ ಸ್ವಾತಿ ಕೆ , ವನಿತಾ, ಪ್ರೇಮ ಲತಾ , ಸರ್ಕಾರಿ ಪ್ರೌಢಶಾಲೆ ಪಾಪೆಮಜಲು ಇದರ ಕಾರ್ಯಾಧ್ಯಕ್ಷ ಇಕ್ಬಾಲ್ ಹುಸೇನ್ ಕೌಡಿಚ್ಚಾರು, ಪ್ರಾಥಮಿಕ ಆರೋಗ್ಯ ಸುರಕ್ಷಾಣಾಧಿಕಾರಿ ನವ್ಯಾ.ಕೆ ಸಮುದಾಯ ಆರೋಗ್ಯ ಅಧಿಕಾರಿ ಚೇತನ.ಕೆ ಮತ್ತು ಅಶ್ವಿನಿ. ಕೆ ಹಾಗೂ ಪಂಚಾಯತ್ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸಾರ್ವಜನಿಕರು ಉಪಸ್ಥಿತರಿದ್ದರು.ಪಂಚಾಯತ್ ಕಾರ್ಯದರ್ಶಿ ಶಿವರಾಮ ಮೂಲ್ಯ ಸ್ವಾಗತಿಸಿ,ವಂದಿಸಿದರು.

LEAVE A REPLY

Please enter your comment!
Please enter your name here