ನಿಡ್ಪಳ್ಳಿ: ಕೃಷಿ ವಿಜ್ಞಾನ ಕೇಂದ್ರ ಮಂಗಳೂರು,ಪುತ್ತೂರು ಅಂಬೇಡ್ಕರ್ ಆಪತ್ ಭಾಂದವ ಟ್ರಸ್ಟ್, ಹಾಗೂ ಪುತ್ತೂರು ಸಾಯ ಎಂಟರ್ ಪ್ರೈಸಸ್ ಇವರ ಸಹಭಾಗಿತ್ವದಲ್ಲಿ ಕೃಷಿ ಮಾಹಿತಿ ಶಿಬಿರ ಹಾಗೂ ಸರಕಾರದ ಸವಲತ್ತುಗಳ ವಿತರಣೆ ಕಾರ್ಯಕ್ರಮ ಫೆ.16 ರಂದು ಪುತ್ತೂರು ಸಾಯ ಎಂಟರ್ ಪ್ರೈಸಸ್ ಆವರಣದಲ್ಲಿ ನಡೆಯಿತು.
ಅಂಬೇಡ್ಕರ್ ಆಪತ್ಬಾಂಧವ ಸಂಘಟನೆಯ ಜಿಲ್ಲಾ ಅಧ್ಯಕ್ಷ ರಾಜು ಹೊಸಮಠ ಅಧ್ಯಕ್ಷತೆ ವಹಿಸಿದ್ದರು. ಸುಮಾರು 26ಕ್ಕೂ ಹೆಚ್ಚು ಪರಿಶಿಷ್ಟ ಜಾತಿಯ ಫಲಾನುಭವಿಗಳಿಗೆ ಪರಿಶಿಷ್ಟ ಜಾತಿ ಉಪಯೋಜನೆ ಅಡಿಯಲ್ಲಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಕೃಷಿ ಪರಿಕರಗಳನ್ನು ವಿತರಿಸಲಾಯಿತು.ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಇದರ ಮಣ್ಣು ವಿಜ್ಞಾನಿ ಡಾ.ಮಲ್ಲಿಕಾರ್ಜುನ ಇವರು ಕಾರ್ಯಕ್ರಮ ಸಂಯೋಜಿಸಿ ಕೃಷಿ ಮಾಹಿತಿ ನೀಡಿದರು.ಹಿರಿಯ ವಿಜ್ಞಾನಿ ಹಾಗೂ ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ರಮೇಶ್ ,ಸಾಯ ಎಂಟರ್ ಪ್ರೈಸಸ್ ಮಾಲಕ ಗೋವಿಂದ ಪ್ರಕಾಶ್ ಹಾಗೂ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.