ಕಾಣಿಯೂರು: ಕುದ್ಮಾರು ಗ್ರಾಮದ ಬೇರಿಕೆ ಶ್ರೀ ನಾಗಬ್ರಹ್ಮ ಆದಿ ಮುಗೇರ್ಕಳ ಮತ್ತು ಕೊರಗಜ್ಜ ದೈವಸ್ಥಾನ ಬೇರಿಕೆ, ಆದಿಮುಗೇರ್ಕಳ ದೈವಸ್ಥಾನ ಟ್ರಸ್ಟ್ ವತಿಯಿಂದ 4ನೇ ವರ್ಷದ ಶ್ರೀ ನಾಗಬ್ರಹ್ಮ ಆದಿ ಮುಗೇರ್ಕಳ ದೈವದ ಹಾಗೂ ಕೊರಗಜ್ಜ ದೈವದ ನೇಮೋತ್ಸವ ಫೆ.17 ಮತ್ತು ಫೆ.18ರಂದು ಕುವೆತ್ತೋಡಿ ಬ್ರಹ್ಮಶ್ರೀ ನರಸಿಂಹ ಪ್ರಸಾದ ಪಾಂಗಣ್ಣಾಯ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.
ಫೆ.17ರಂದು ಬೆಳಿಗ್ಗೆ ಶುದ್ಧ ಕಲಶ ತಂಬಿಲ, ಶ್ರೀ ನಾಗಬ್ರಹ್ಮ ಆದಿ ಮುಗೇರ್ಕಳ ದೈವದ ಭಂಡಾರ ತೆಗೆಯುವುದು, ಗುಳಿಗ ದೈವದ ನೇಮ ನಡೆದು, ಬಳಿಕ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ವಿಟ್ಲ ಉಪತಹಶೀಲ್ದಾರ್ ವಿಜಯ್ವಿಕ್ರಂ ಜಿ ರಾಮಕುಂಜ ಉದ್ಘಾಟಿಸಲಿದ್ದಾರೆ. ಸುಳ್ಯ ಶಾಸಕಿ ಭಾಗಿರಥಿ ಮುರುಳ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಂತಿಮೊಗರು ಶ್ರಿ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಗೌರವ ಸಮರ್ಪಿಸಲಿದ್ದಾರೆ. ಚಂದ್ರಕಲಾ ಜಯರಾಮ್ ಅರುವಗುತ್ತು ಅಶಕ್ತರಿಗೆ ಧನಸಹಾಯ ವಿತರಣೆ ಮಾಡಲಿದ್ದಾರೆ. ಬೆಳಂದೂರು ಗ್ರಾ.ಪಂ.ಅಧ್ಯಕ್ಷೆ ಪಾರ್ವತಿ ಮರಕ್ಕಡ, ಬೇರಿಕೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಉಮೇಶ್ ಕೆ.ಎನ್ ಕಾರ್ಲಾಡಿ, ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಠಲ ಗೌಡ ಬರೆಪ್ಪಾಡಿ, ಬೆಳಂದೂರು ಗ್ರಾ.ಪಂ.ಸದಸ್ಯರಾದ ಲೋಹಿತಾಕ್ಷ ಕೆಡೆಂಜಿಕಟ್ಟ, ತಾರಾ ಅನ್ಯಾಡಿ, ಆಡಳಿತ ಸಮಿತಿ ಜತೆ ಕಾರ್ಯದರ್ಶಿ ಬಾಬು ಮುಗೇರ ಜನತಾಗೃಹ ಕುದ್ಮಾರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶೋಕ್ ಗೌಡ ಅವರಿಗೆ ಗೌರವ ಸಮರ್ಪಣೆ ನಡೆಯಲಿದೆ. ರಾತ್ರಿ ಅನ್ನ ಸಂತರ್ಪಣೆ, ಬಳಿಕ ಶ್ರೀ ನಾಗಬ್ರಹ್ಮ ಆದಿ ಮುಗೇರ್ಕಳ ಗರಡಿ ಇಳಿಯುವುದು, ತನ್ನಿ ಮಾಣಿಗ ಗರಡಿ ಇಳಿಯುವುದು, ಫೆ.18ರಂದು ಬೆಳಿಗ್ಗೆ ಹರಕೆ ಮತ್ತು ಗಂಧ ಪ್ರಸಾದ, ಕೊರಗಜ್ಜ ದೈವದ ಹರಕೆ ನೇಮ ಹಾಗೂ ಕೊರಗಜ್ಜ ದೈವದ ಕಾಲಾವಧಿ ನೇಮೋತ್ಸವ ನಡೆಯಲಿದೆ ಎಂದು ದೈವಸ್ಥಾನದ ಅಭಿವೃದ್ದಿ ಸಮಿತಿ, ಆಡಳಿತ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.