ಪುತ್ತೂರು: ನೋವಾ ಐವಿಎಫ್ ಫರ್ಟಿಲಿಟಿ ಇದರ ವತಿಯಿಂದ ಅಂತರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ನಾಲ್ಕರ ರೋಟರಿ ಕ್ಲಬ್ ಬೆಳ್ತಂಗಡಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಳ್ತಂಗಡಿ ಇದರ ಸಹಯೋಗದಲ್ಲಿ ಬಂಜೆತನದ ಬಗ್ಗೆ ಉಚಿತ ಮಾಹಿತಿ ಮತ್ತು ಸಮಾಲೋಚನಾ ಶಿಬಿರವು ಮಾ.2ರಂದು ಬೆಳ್ತಂಗಡಿ ಉಜಿರೆ ಕಾಶಿಬೆಟ್ಟು ರೋಟರಿ ಸೇವಾ ಭವನ ಅರಳಿ ರೋಡ್ ನಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಜರಗಲಿದೆ.
ಬಂಜೆತನ ಎನ್ನುವುದು ಚಿಕಿತ್ಸೆ ನೀಡಬಹುದಾದ ಮತ್ತೊಂದು ವಿಧದ ಚಿಕಿತ್ಸೆಯಾಗಿದ್ದು ಈ ಬಂಜೆತನ ತಜ್ಞರೊಂದಿಗೆ ಫಲಾನುಭವಿಗಳು ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ. ನೋವಾ ಐವಿಎಫ್ ಫರ್ಟಿಲಿಟಿ ಇದರ ತಜ್ಞೆ ಡಾ.ಶ್ರೀಮತಿ ಶವೀಝ್ ಫೈಝಿರವರು ಫಲಾನುಭವಿಗಳಿಗೆ ಸೂಕ್ತ ಸಲಹೆ-ಸೂಚನೆಗಳನ್ನು ನೀಡಲಿರುವರು ಎಂದು ನೋವಾ ಐವಿಎಫ್ ಫರ್ಟಿಲಿಟಿ ಸಂಸ್ಥೆಯ ಪ್ರಕಟಣೆ ತಿಳಿಸಿದೆ.