ಶಾಂತಿ ಸೌಹಾರ್ದತೆಯ ಶ್ರದ್ಧಾಕೇಂದ್ರ ಇರ್ದೆ – ಪಳ್ಳಿತ್ತಡ್ಕ ದರ್ಗಾ ಶರೀಫ್‌ನಲ್ಲಿ ಫೆ. 22 ರಿಂದ 48ನೇ ವರ್ಷದ ಉರೂಸ್ – 7 ದಿವಸಗಳ ಧಾರ್ಮಿಕ ಮತ ಪ್ರಭಾಷಣ

0

ಪುತ್ತೂರು: ಸುಮಾರು 400 ವರ್ಷಗಳ ಹಿಂದಿನ ಇತಿಹಾಸ ಇರುವ ಈ ವಲಿಯುಲ್ಲಾಹಿ ಅವರ ಹೆಸರಿನಲ್ಲಿ ಶಾಂತಿ ಸೌಹಾರ್ದತೆಯ ಶ್ರದ್ಧಾಕೇಂದ್ರ ಆಗಿರುವ ಇರ್ದೆ ಪಳ್ಳಿತ್ತಡ್ಕ ದರ್ಗಾ ಶರೀಫ್ ನಲ್ಲಿ ಆಚರಿಸಿಕೊಂಡು ಬರುತ್ತಿರುವ 48ನೇ ವರ್ಷದ ಉರೂಸ್ ಸಮಾರಂಭವು 7 ದಿವಸಗಳ ಧಾರ್ಮಿಕ ಮತ ಪ್ರಭಾಷಣದೊಂದಿಗೆ ಇರ್ದೆ ಪಳ್ಳಿತ್ತಡ್ಕ ದರ್ಗಾ ಶರೀಫ್ ವಠಾರದಲ್ಲಿ ಜರುಗಲಿದೆ.


ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಕೊಂಗಿಲ ಜುಮಾ ಮಸೀದಿ ಅಧ್ಯಕ್ಷ ಮಹಮ್ಮದ್ ಕುಂಞಿ ಹಾಜಿ ಅವರು ಮಾತನಾಡಿ ಉರೂಸ್ ಮುಬಾರಕ್ ಹಾಗೂ 7 ದಿವಸಗಳ ಧಾರ್ಮಿಕ ಮತ ಪ್ರಭಾಷಣವು ಅಲ್‌ಹಾಜ್ ಅಸ್ಸಯದ್ ಕೆ. ಎಸ್. ಆಟಕೋಯ ತಂಙಳ್ ಕುಂಬೋಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಪ್ರತಿ ದಿನ ರಾತ್ರಿ ಮುಖ್ಯ ಪ್ರಭಾಷಣ ನಡೆಯಲಿದೆ.

ಫೆ. 22ರಂದು ರಾತ್ರಿ ಕೊರಿಂಗಿಲ ಜುಮಾ ಮಸೀದಿಯ ಖತೀಬರಾಗಿರುವ ಅಲ್‌ಹಾಜ್ ಜಿ. ಎಚ್. ಅಯ್ಯೂಬ್ ವಹಬಿ ಗಡಿಯಾರ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ’ಮಹಾನ್ ಮಾರೋಡುಲ್ಲ ಬಂದಂ’ ವಿಷಯವಾಗಿ ಹಾಫಿಳ್ ಮಶ್ಹೂದ್ ಸಖಾಫಿ ಗುಡಲ್ಲೂರು ಮತಪ್ರಭಾಷಣ ಮಾಡಲಿರುವರು. ಫೆ. 23ರಂದು ’ರಮಾಳಾನಿಂಡೆ ಮುನ್‌ವರಿಕ್ಕಂಙಳ್’ ವಿಷಯದ ಬಗ್ಗೆ ಅಬೂಬಕ್ಕರ್ ಸಿದ್ದೀಕ್ ಅಝ್‌ಹರಿ ಪಯ್ಯನ್ನೂರು ಮಾತನಾಡಲಿರುವರು.

ಫೆ. 24 ರಂದು ’ಮಾತಾಫಿದಾಕಲ್ ವೃದ್ದಾಶಾರಮತ್ತಿಲ್ ಕೈಯುಂಬೋಳ್’ ವಿಚಾರವಾಗಿ ಶಮೀರ್ ದಾರಿಮಿ ಕೂಲ್ಲಂ ಪ್ರಭಾಷಣ ಮಾಡಲಿರುವರು. ಫೆ. 25ರಂದು ’ಉಹುದ್ ಸಹಾಬಿಗಳುಡೆ ಚರಿತ್ರಂ’ ವಿಷಯವಾಗಿ ಖಾರಿಹ್ ಮುಸ್ತಫಾ ಸಖಾಫಿ ತೆನ್ನಲ ಮಲಪ್ಪುರಂ ಅವರು ಮಾತನಾಡಲಿರುವರು. ಫೆ. 26ರಂದು ಮರ್‌ಹೂಂ ಖಾಸಿಂ ಕೇಕನಾಜೆ ಅವರ ಅನುಸ್ಮರಣಾ ಕಾರ್ಯಕ್ರಮದ ಬಳಿಕ ’ಉಬ್ಬುರ್ರಸೂಲ್’ ವಿಷಯವಾಗಿ ಅನ್ವರ್ ಮುಹ್ಯದ್ದೀನ್ ಹುದವಿ ಆಲಪುಝು ಮಾತನಾಡಲಿರುವರು. ಫೆ. 27ರಂದು ಅಲ್ ಹಾಜ್ ಅಸ್ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ದುಃವಾ ಆಶೀರ್ವಚನ ನೀಡಲಿರುವರು. ’ಇಸ್ಲಾಮಿಲೆ ಆಜಾರವುಂ ಅನಾಜಾರವುಂ’ ವಿಷಯವಾಗಿ ನೌಫಿಲ್ ಸಖಾಫಿ ಕಳಸ ಪ್ರಭಾಷಣ ಮಾಡಲಿರುವರು.

ಫೆ. 28ರಂದು ಸಂಜೆ ಕೊರಿಂಗಿಲ ಜುಮಾ ಮಸೀದಿ ಖತೀಬ ಅಲ್‌ಹಾಜ್ ಜಿ. ಎಚ್. ಅಯ್ಯೂಬ್ ವಹಬಿ ನೇತೃತ್ವದಲ್ಲಿ ಮೌಲೂದ್ ಪಾರಾಯಣ ನಡೆಯಲಿದೆ. ಸಂಜೆ 7 ಗಂಟೆಗೆ ಸೌಹಾರ್ದ ಸಂಗಮ ಕಾರ್ಯಕ್ರಮದಲ್ಲಿ ಅಲ್‌ಹಾಜ್ ಅಸ್ಸಯ್ ಹಾಶಿಂ ಬಾಅಲವಿ ತಂಙಳ್ ಕೊರಿಂಗಿಲ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ರಾಜ್ಯ ತರಬೇತುದಾರ ಇಕ್ಬಾಲ್ ಬಾಳಿಲ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಮಂಗಳೂರಿನ ನ್ಯಾಯವಾದಿ ರಾಧಾಕೃಷ್ಣ ರೈ ಆನಾಜೆ, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಕರ್ನಾಟಕ ಸರಕಾರದ ಮಾಜಿ ಪೌರಾಡಳಿತ ಸಚಿವ ವಿನಯ ಕುಮಾರ್ ಸೊರಕೆ, ಮಂಜೇಶ್ವರದ ಶಾಸಕ ಅಶ್ರಫ್ ಎ. ಕೆ. ಎಂ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಬಿ. ವಿಶ್ವನಾಥ ರೈ, ಕೆ. ಪಿ. ಸಿ. ಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್, ಕೊಂಬೆಟ್ಟು ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಹೇಮನಾಥ್ ಶೆಟ್ಟಿ ಕಾವು, ಬೆಟ್ಟಂಪಾಡಿ ಗ್ರಾ. ಪಂ ಮಾಜಿ ಸದಸ್ಯ ರಕ್ಷಣ್ ರೈ ಆನಾಜೆ, ದ.ಕ ಜಿಲ್ಲಾ ಪಂ. ಮಾಜಿ ಸದಸ್ಯ ಎಂ. ಎಸ. ಮಹಮ್ಮದ್, ಪುತ್ತೂರು ತಾಲೂಕು ಪಂ. ಮಾಜಿ ಸದಸ್ಯ ಮುಹಮ್ಮದ್ ಬಡಗನ್ನೂರು, ಮುಂತಾದವರು ಉಪಸ್ಥಿತರಿರುವರು.

ರಾತ್ರಿ ಅಲ್ ಹಾಜ್ ಅಸ್ಸಯ್ಯದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಲ್ ಅವರ ಅಧ್ಯಕ್ಷತೆಯಲ್ಲಿ ಕೊರಿಂಗಿಲ ಮಸೀದಿಯ ಅಲ್‌ಹಾಜ್ ಜಿ.ಹೆಚ್ ಅಯ್ಯೂಬ್ ವಹಬಿ ಅವರು ಉರೂಸ್ ಸಮಾರಂಭ ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭ ’ಸ್ವರ್ಗಂ ಸತ್ಯವಿಶ್ವಾಸಿಗಳುಡೆ ತರವಾಡ್’ ವಿಷಯವಾಗಿ ಕಾಸರಗೋಡಿನ ಖಲೀಲ್ ಹುದವಿ ಪ್ರಭಾಷಣ ನೀಡಲಿರುವರು ಎಂದವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಉರೂಸ್ ಕಮಿಟಿ ಅಧ್ಯಕ್ಷ ಶಾಫಿ ಕೇಕನಾಜೆ, ಸಿವಿಲ್ ಇಂಜಿನಿಯರ್ ಅಲಿಕುಂಞಿ ಹಾಜಿ ಕೊರಿಂಗಿಲ, ಕೊರಿಂಗಿಲ ಜುಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಮೂಸಕುಂಞಿ ಬೆಟ್ಟಂಪಾಡಿ, ಪಳ್ಳಿತ್ತಡ್ಕ ಉರೂಸ್ ಕಮಿಟಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಟಿ. ಎಂ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here