ಸಾಜ: ಸೌಜನ್ಯ ಯುವಜನ ಸಂಘದ ಆಶ್ರಯದಲ್ಲಿ ಮುಕ್ತ ವಾಲಿಬಾಲ್ ಪಂದ್ಯಾಟ-ಪಟ್ಲ ಫ್ರೆಂಡ್ಸ್ ಕಲ್ಲೇಗ ಪ್ರಥಮ-ಶ್ರೀ ವಿಷ್ಣು ಉಪ್ಪಳಿಗೆ ದ್ವಿತೀಯ

0

ಪುತ್ತೂರು: ಸೌಜನ್ಯ ಯುವಜನ ಸಂಘ, ಸಾಜ ಇದರ ಆಶ್ರಯದಲ್ಲಿ ಫೆ.18 ರಂದು ಸಂಘದ ಅಧ್ಯಕ್ಷ ಯೂಸುಫ್ ಗೌಸಿಯ ಅಧ್ಯಕ್ಷತೆಯಲ್ಲಿ ಮುಕ್ತ ವಾಲಿಬಾಲ್ ಪಂದ್ಯಾಟ ನಡೆಯಿತು. ವಿವಿಧ ಜಿಲ್ಲೆಗಳಿಂದ ಬಂದ 12 ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದವು. ಬಲ್ನಾಡ್ ಗ್ರಾಮ ಪಂಚಾಯತ್ ಅಧ್ಯಕ್ಷೆ ಪರಮೇಶ್ವರಿ ಭಟ್ ಬಬ್ಬಲಿ ಪಂದ್ಯಾಟಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಇದ್ದುಕುಂಇಿ ಹಾಜಿ, ಮೊಹಮ್ಮದ್ ಶರೀಫ್ ರೋಯಲ್, ಅಬ್ದುಲ ಹಕಿಮ್ ಸುಪ್ರೀಂ, ರವಿಚಂದ್ರ, ಗಣೇಶ್ ಭಟ್, ಅಂಬ್ರೋಸ್ ಡಿಸೋಜಾ, ಈಶ್ವರ್ ನಾಯ್ಕ, ಅಣ್ಣು ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಷನ್ ಸದಸ್ಯ ಇಬ್ರಾಹಿಂ ಗೋಳಿಕಟ್ಟೆ, ರಾಷ್ಟ್ರೀಯ ವಾಲಿಬಾಲ್ ತರಬೇತಿದಾರ ಪಿ ವಿ ನಾರಾಯಣನ್, ಪುತ್ತೂರು ಭೂ ನ್ಯಾಯ ಮಂಡಳಿ ಸದಸ್ಯ ಕೃಷ್ಣಪ್ರಸಾದ್ ಆಳ್ವ, ಸೌಜನ್ಯ ಸಂಘದ ಗೌರವ ಸಲಹೆಗಾರ ರಾಧಾಕೃಷ್ಣ ಆಳ್ವ ಸಾಜ, ಬೆಟ್ಟoಪಾಡಿ ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶ್ ರೈ ಬೈಲಾಡಿ, ಚಂದಪ್ಪ ಪೂಜಾರಿ ಕಾಡ್ಲ, ಮುರಳಿ ಕೃಷ್ಣ ಹಸಂತಡ್ಕ, ಪ್ರಜ್ವಲ್ ರೈ ಆಲಂದಡ್ಕ, ಸುಬೋದ್ ರೈ ಸಾಜ ಅತಿಥಿಗಳಾಗಿ ಭಾಗವಹಿಸಿದ್ದರು. ಪಂದ್ಯಾಕೂಟದ ಪ್ರಥಮ ಬಹುಮಾನ, ನಗದು ಮತ್ತು ಪ್ರಶಸ್ತಿಯನ್ನು ಪಟ್ಲ ಫ್ರೆಂಡ್ಸ್ ಕಲ್ಲೇಗ ಹಾಗೂ ದ್ವೀತಿಯ ಬಹುಮಾನ, ನಗದು ಮತ್ತು ಟ್ರೋಫಿಯನ್ನು ಶ್ರೀ ವಿಷ್ಣು ಉಪ್ಪಳಿಗೆ ತಂಡ ಪಡೆದುಕೊಂಡಿತ್ತು. ಗುಜರಾತಿನ ದಾದ್ರಾ ನಗರದ ಬೀಚಿನಲ್ಲಿ ನಡೆದ ರಾಷ್ಟ ಮಟ್ಟದ ಬೀಚ್ ವಾಲಿಬಾಲ್ ಪಂದ್ಯಾವಳಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದ ಸಂಘದ ಸದಸ್ಯ ಮೊಹಮ್ಮದ್ ಅಜಿಮ್ ಸಾಜ ಮತ್ತು ಪವಿತ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಹಮೀದ್ ಸಾಜ ಸ್ವಾಗತಿಸಿ‌, ಪ್ರತೀಕ್ ಕಾಡ್ಲ ವಂದಿಸಿದರು. ಶಶಿಕಾಂತ್ ಅಟ್ಲಾರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here