ಕುಂತೂರು: ಒಮ್ನಿ, ಬೈಕ್ ಡಿಕ್ಕಿ-ಇಬ್ಬರಿಗೆ ಗಂಭೀರ ಗಾಯ

0

ಕಡಬ: ಒಮ್ನಿಗೆ ಹಿಂದಿನಿಂದ ಬೈಕ್ ಡಿಕ್ಕಿಯಾದ ಪರಿಣಾಮ ಬೈಕ್‌ನಲ್ಲಿದ್ದ ಇಬ್ಬರು ಹಾಗೂ ಒಮ್ನಿಯಲ್ಲಿದ್ದ ಪ್ರಯಾಣಿಕರೊಬ್ಬರು ಗಾಯಗೊಂಡಿರುವ ಘಟನೆ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕುಂತೂರು ಕೆಳಗಿನಪೇಟೆಯಲ್ಲಿ ಫೆ.19ರಂದು ಬೆಳಿಗ್ಗೆ ನಡೆದಿದೆ.


ಕಡಬದಿಂದ ಆಲಂಕಾರು ಕಡೆಗೆ ಹೋಗುತ್ತಿದ್ದ ಒಮ್ನಿ(ಕೆಎ21, ಎನ್9615)ಯನ್ನು ಅದರ ಚಾಲಕ ನೌಶಾದ್ ಎಂಬವರು ರಾಜ್ಯ ಹೆದ್ದಾರಿಯ ಕುಂತೂರು ಕೆಳಗಿನ ಪೇಟೆಯಲ್ಲಿ ಯಾವುದೇ ಸೂಚನೆ ನೀಡದೇ ಏಕಾಏಕಿ ಬಲಕ್ಕೆ ತಿರುಗಿಸಿದ ಪರಿಣಾಮ ಹಿಂದಿನಿಂದ ಹಮೀದ್ ಎಂಬವರು ಸವಾರನಾಗಿ, ಮಹಮ್ಮದ್ ಅತಿಜ್ ಎಂಬವರು ಸಹಸವಾರನಾಗಿ ಬರುತ್ತಿದ್ದ ಹೊಂಡಾ ಶೈನ್ ಬೈಕ್(ಕೆಎ21, ಡಿ6133) ಡಿಕ್ಕಿಯಾಗಿದೆ. ಘಟನೆಯಲ್ಲಿ ಬೈಕ್ ಸವಾರ ಹಮೀದ್ ಮತ್ತು ಸಹಸವಾರ ಮಹಮ್ಮದ್ ಅತೀಜ್‌ರವರು ಬೈಕ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಓಮ್ನಿ ಕಾರಿನ ಮುಂದುಗಡೆ ಸೀಟಿನಲ್ಲಿ ಕುಳಿತಿದ್ದ ಇಬ್ರಾಹಿಂ ಎಂಬವರ ತಲೆಗೆ ಗಾಯವಾಗಿದೆ. ಗಾಯಾಳು ಇಬ್ರಾಹಿಂರವರು ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಬೈಕ್ ಸಹಸವಾರ ಮಹಮ್ಮದ್ ಅತಿಜ್‌ರವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಬೈಕ್ ಸವಾರ ಹಮೀದ್‌ರವರು ಸಣ್ಣಪುಟ್ಟ ಗಾಯಗೊಂಡಿರುವುದಾಗಿ ವರದಿಯಾಗಿದೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಕೇಸು ದಾಖಲಾಗಿದೆ.

LEAVE A REPLY

Please enter your comment!
Please enter your name here