ಕಲ್ಲರ್ಪೆಯಲ್ಲಿ ಅಪಘಾತದಿಂದ ತೀವ್ರ ಗಾಯಗೊಂಡ ಮುಕ್ವೆ ನಿವಾಸಿ ಸಫ್ವಾನ್ ಮಂಗಳೂರು ಆಸ್ಪತ್ರೆಯಲ್ಲಿ ಮೃತ್ಯು

0

ಪುತ್ತೂರು : ಕಲ್ಲರ್ಪೆ ಸಮೀಪ ಫೆ.21 ರಂದು  ಟಿಪ್ಪರ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ತೀವ್ರ ಗಾಯಗೊಂಡಿದ್ದ ಮುಕ್ವೆ ನಿವಾಸಿ ಸಫ್ವಾನ್ ಮಂಗಳೂರು‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಫೆ.21ರಂದು ಸಂಜೆ ಟಿಪ್ಪರ್‌ ಹಾಗೂ ಬೈಕ್‌ ನಡುವೆ ಡಿಕ್ಕಿ ಸಂಭವಿಸಿದ್ದು ಬೈಕ್‌ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಪುತ್ತೂರು ಹೊರವಲಯದ ಕಲ್ಲರ್ಪೆ ಬಳಿ ನಡೆದಿತ್ತು. ಗಾಯಗೊಂಡ ಯುವಕನ ಕಾಲು ಮತ್ತು ತಲೆಗೆ ಗಂಭೀರವಾದ ಗಾಯವಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ .

LEAVE A REPLY

Please enter your comment!
Please enter your name here