ಪುತ್ತೂರು: ನಗರದ ಹೊರವಲಯದ ಮುರದ ಎಂಪಿಎಂ ಸ್ಕೂಲ್ ಬಳಿ ಡಿಯೋ ಸ್ಕೂಟರ್ ಮತ್ತು ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿದೆ. ಸ್ಕೂಟರ್ ನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯವಾಗಿದ್ದು ಚಿಂತಾಜನಕ ಸ್ಥಿತಿಯಲ್ಲಿ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕೆಎ 21 ಡಬ್ಲೂ 0247 ನಂಬರಿನ ಸ್ಕೂಟರ್ ಪುತ್ತೂರಿನಿಂದ ಕಬಕ ಕಡೆಗೆ ವೇಗವಾಗಿ ಹೋಗುತ್ತಿದ್ದ ವೇಳೆ ಕಬಕದಿಂದ ಪುತ್ತೂರ ಕಡೆ ಬರುತ್ತಿದ್ದ ಟಿಪ್ಪರ್ ಮುಖಾಮುಖಿ ಡಿಕ್ಕಿ ಹೊಡೆದಿದೆ.
ಸ್ಕೂಟರ್ ನಲ್ಲಿದ್ದ ಯುವಕರನ್ನು ಮುರ ನಿವಾಸಿ ತೇಜಸ್(24) ಮತ್ತು ಗೋಳಿತೊಟ್ಟಿನ ಪವನ್ ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ತೇಜಸ್ ಪುತ್ತೂರು ಆಸ್ಪತ್ರೆಗೆ ಕರೆದೊಯ್ಯುವ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾನೆ. ಪವನ್ ಗೆ ಚಿಕಿತ್ಸೆ ಮುಂದುವರಿದಿದೆ.