ಇರ್ದೆ-ಪಳ್ಳಿತ್ತಡ್ಕ ಮಖಾಂ ಉರೂಸ್ ಉದ್ಘಾಟನೆ

0


ಔಲಿಯಾಗಳು ಅಲ್ಲಾಹನ ತೃಪ್ತಿ ಸಂಪಾದಿಸಿದ್ದರು – ಮಶ್ಹೂದ್ ಸಖಾಫಿ

ಪುತ್ತೂರು: ಇರ್ದೆ-ಪಳ್ಳಿತ್ತಡ್ಕ ದರ್ಗಾ ಶರೀಫ್‌ನಲ್ಲಿ 48ನೇ ಉರೂಸ್ ಪ್ರಯುಕ್ತ ಧಾರ್ಮಿಕ ಮತ ಪ್ರಭಾಷಣ ಕಾರ್ಯಕ್ರಮ ಉದ್ಘಾಟನೆ ಫೆ.22ರಂದು ನಡೆಯಿತು. ಅಸ್ಸಯ್ಯದ್ ಹಾಶಿಂ ಬಾಅಲವಿ ತಂಙಳ್ ಕೊರಿಂಗಿಲ ದುವಾ ನೆರವೇರಿಸಿದರು. ಕೊರಿಂಗಿಲ ಜುಮಾ ಮಸೀದಿ ಅಧ್ಯಕ್ಷ ಮಹಮ್ಮದ್ ಕುಂಞಿ ಹಾಜಿ ಕೊರಿಂಗಿಲ ಅಧ್ಯಕ್ಷತೆ ವಹಿಸಿದ್ದರು.

ನೂತನವಾದಿಗಳ ಆಶಯಕ್ಕೆ ಬಲಿಯಾಗದಿರಿ:
ಉದ್ಘಾಟಿಸಿದ ಕೊರಿಂಗಿಲ ಜುಮಾ ಮಸೀದಿ ಖತೀಬ್ ಬಿ.ಎಚ್ ಅಯ್ಯೂಬ್ ವಹಬಿ ಗಡಿಯಾರ ಮಾತನಾಡಿ, ಅಲ್ಲಾಹನ ಔಲಿಯಾಗಳನ್ನು ಗೌರವಿಸುವುದು, ಅವರ ಸನ್ನಿಧಿಯಲ್ಲಿ ಬಂದು ಪ್ರಾರ್ಥಿಸುವುದು ಪುಣ್ಯದ ಕಾರ್ಯವಾಗಿದೆ. ಸುನ್ನತ್ ಜಮಾಅತ್‌ನ ಆಶಯ ಆದರ್ಶಗಳು ಪರಿಪೂರ್ಣವಾಗಿದ್ದು ನೂತನವಾದಿಗಳ ಯಾವುದೇ ಆಶಯಗಳಿಗೆಯ ಯಾರೂ ಬಲಿಯಾಗಬಾರದು ಎಂದು ಹೇಳಿದರು.

ಔಲಿಯಾಗಳು ಅಲ್ಲಾಹನ ಇಷ್ಟದಾಸರು:
ಡೆಮ್ಮಂಗರ ಕೆ.ಕೆ ಮಸ್ಜಿದ್‌ನ ಮುದರ್ರಿಸ್ ಅಬ್ಬಾಸ್ ಸಅದಿ ಮಾತನಾಡಿ, ಔಲಿಯಾಗಳು ಅಲ್ಲಾಹನ ಇಷ್ಟದಾಸರಾಗಿದ್ದು ಅಂತಹ ಮಹಾನುಭಾವರ ದರ್ಗಾದಲ್ಲಿ ಬಂದು ಪ್ರಾರ್ಥನೆ ಸಲ್ಲಿಸಿದಾಗ ಅದು ಅಲ್ಲಾಹನಿಗೆ ಇಷ್ಟದಾಯಕ ಕಾರ್ಯವಾಗುತ್ತದೆ, ಇಂದೋ, ನಾಳೆಯೋ ಈ ಲೋಕದಿಂದ ವಿದಾಯ ಹೇಳಬೇಕಾದ ನಾವು ಅಲ್ಲಾಹು ತೋರಿಸಿಕೊಟ್ಟ ಹಾದಿಯಲ್ಲಿ ಜೀವನ ನಡೆಸಬೇಕು ಎಂದು ಅವರು ಹೇಳಿದರು.

ಔಲಿಯಾಗಳು ಅಲ್ಲಾಹನ ತೃಪ್ತಿ ಸಂಪಾದಿಸಿದ್ದರು:
ʻಮಹಾನ್ಮಾರೋಡುಲ್ಲ ಬಂಧಂ’ ಎನ್ನುವ ವಿಷಯದಲ್ಲಿ ಮುಖ್ಯ ಪ್ರಭಾಷಣ ನಡೆಸಿದ ಹಾಫಿಲ್ ಮಶ್ಹೂದ್ ಸಖಾಫಿ ಗೂಡಲ್ಲೂರುರವರು 24ಗಂಟೆಯೂ ಅಲ್ಲಾಹನ ತೃಪ್ತಿಯಲ್ಲಿ ಜೀವನ ನಡೆಸಿದ ಅಲ್ಲಾಹನ ಔಲಿಯಾಗಳು ಪರಿಶುದ್ದ ಜೀವನದ ಮೂಲಕ ಅಲ್ಲಾಹನಿಗೆ ಹತ್ತಿರವಾಗಿದ್ದರು, ಅವರ ಸನ್ನಿಧಿಗೆ ಬಂದು ಪ್ರಾರ್ಥನೆ ಮಾಡುವುದು ಅತ್ಯಂತ ಶ್ರೇಷ್ಠವೂ ಪುಣ್ಯವೇರಿದ ಕಾರ್ಯವೂ ಆಗಿದೆ ಎಂದು ಹೇಳಿದರು. ನಮ್ಮ ಜೀವನವನ್ನು ಧನ್ಯತೆಯಿಂದ ನಡೆಸಬೇಕು, ಯಾರೊಂದಿಗೂ ದ್ವೇಷ, ವೈರಾಗ್ಯ ಇಟ್ಟುಕೊಳ್ಳಬಾರದು, ನಮ್ಮ ಹೃದಯ ಶುದ್ದಿಯಾಗದ ಹೊರತು ಯಾವ ಸತ್ಕರ್ಮವೂ ಸ್ವೀಕಾರ್ಹವಲ್ಲ, ಹಾಗಾಗಿ ಕ್ಷಣಿಕ ಜೀವನವನ್ನು ಪರಿಶುದ್ಧ ಹೃದಯದ ಮೂಲಕ ನಡೆಸಿದಾಗ ನಮ್ಮ ಜೀವನ ಸಾರ್ಥಕವಾಗಲಿದೆ ಮತ್ತು ಅಲ್ಲಾಹನಿಗೆ ಇಷ್ಟವಾಗಲಿದೆ ಎಂದು ಅವರು ಹೇಳಿದರು.

ವೇದಿಕೆಯಲ್ಲಿ ಕೊರಿಂಗಿಲ ಜುಮಾ ಮಸೀದಿಯ ಸದರ್ ಮುಅಲ್ಲಿಂ ಮನ್ಸೂರ್ ಅಸ್ಲಮಿ, ಕೊರಿಂಗಿಲ ಜುಮಾ ಮಸೀದಿಯ ಉಪಾಧ್ಯಕ್ಷ ಇಸ್ಮಾಯಿಲ್ ಹಾಜಿ ಎಂಪೆಕಲ್ಲು, ಕೋಶಾಧಿಕಾರಿ ಮಹಮ್ಮದ್ ಹಾಜಿ ಶಾಲಾಬಳಿ, ಎಂಪೆಕಲ್ಲು ತ್ವಾಹಾ ಮಸ್ಜಿದ್ ಇಮಾಂ ಫಾರೂಕ್ ಹಿಮಮಿ, ಇರ್ದೆ-ಪಳ್ಳಿತ್ತಡ್ಕ ಉರೂಸ್ ಕಮಿಟಿ ಅಧ್ಯಕ್ಷ ಶಾಫಿ ಕೇಕನಾಜೆ, ಪ್ರ.ಕಾರ್ಯದರ್ಶಿ ಅಬ್ದುಲ್ ಅಝೀಝ್ ಟಿ.ಎಂ, ಕೊರಿಂಗಿಲ ಜುಮಾ ಮಸೀದಿ ಸಹ ಅಧ್ಯಾಪಕ ಉಮರುಲ್ ಫಾರೂಕ್ ಮುಸ್ಲಿಯಾರ್, ಕೊರಿಂಗಿಲ ಜುಮಾ ಮಸೀದಿ ಪ್ರ.ಕಾರ್ಯದರ್ಶಿ ಮೂಸಕುಂಞಿ ಬೆಟ್ಟಂಪಾಡಿ, ಶಾಹುಲ್ ಹಮೀದ್, ಆಲಿಕುಂಞಿ ಹಾಜಿ ಇಂಜಿನಿಯರ್, ಪತ್ರಕರ್ತ ಯೂಸುಫ್ ರೆಂಜಲಾಡಿ, ಅಬ್ದುಲ್ಲ ಕುಂಞಿ ಉಸ್ತಾದ್ ಉಪಸ್ಥಿತರಿದ್ದರು.
ಮೂಸ ಮದನಿ ಬೀಂತಡ್ಕ ಸ್ವಾಗತಿಸಿದರು. ಕೊರಿಂಗಿಲ ಜಮಾಅತ್ ಕಮಿಟಿಯವರು, ಉರೂಸ್ ಕಮಿಟಿಯವರು, ಕೊರಿಂಗಿಲ ಅಶ್ಬಾಲುಲ್ ಇಸ್ಲಾಂ ವೆಲ್ಫೇರ್ ಅಸೋಸಿಯೇಶನ್ ಕಮಿಟಿಯವರು, ಕೊರಿಂಗಿಲ ಮಿಸ್ಬಾಹುಲ್ ಇಸ್ಲಾಂ ಸ್ಟೂಡೆಂಟ್ಸ್ ಅಸೋಸಿಯೇಶನ್ ಕಮಿಟಿಯವರು ಹಾಗೂ ಗಲ್ಫ್ ವಿಂಗ್ಸ್ ಕೊರಿಂಗಿಲ ಜಮಾಅತ್ ಕಮಿಟಿಯವರು ಸಹಕರಿಸಿದರು. ಮತ ಪ್ರಭಾಷಣದ ಮೊದಲು ಸ್ಥಳೀಯ ಮದ್ರಸ ವಿದ್ಯಾರ್ಥಿಗಳಿಂದ ಬುರ್ದಾ ಮಜ್ಲಿಸ್ ನಡೆಯಿತು.

LEAVE A REPLY

Please enter your comment!
Please enter your name here