ಈಶ್ವರಮಂಗಲ ಪಂಚಲಿಂಗೇಶ್ವರ ದೇವಸ್ಥಾನ ವರ್ಷಾವಧಿ ಜಾತ್ರೆಯ ಗೊನೆ ಮುಹೂರ್ತ

0

ಈಶ್ವರಮಂಗಲ: ಈಶ್ವರಮಂಗಲ ಶ್ರೀಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೆಯು ಮಾ.6 ರಿಂದ ಮಾ.13 ರರವರೆಗೆ ಮತ್ತು ಮಾ.14ರಂದುಕಿನ್ನಿಮಾಣಿ,ಪೂಮಾಣಿ, ಪಿಲಿಚಾಮುಂಡಿ ದೈವಗಳ ನೇಮೋತ್ಸವ ನಡೆಯಲಿದ್ದು ಇದರ ಗೊನೆ ಮುಹೂರ್ತ ಫೆ.23 ರಂದು ಶ್ರೀಪಂಚಲಿಂಗೇಶ್ವರ ದೇವಸ್ಥಾನದ ಪವಿತ್ರಪಾಣಿ ಗೋಪಾಲಕೃಷ್ಣ ಕುಂಜತ್ತಾಯ ಮೆಣಸಿನಕಾನ ರವರ ಮನೆಯ ತೋಟದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಪ್ರದಾನ ಅರ್ಚಕ ರವೀಂದ್ರ ಮಾಣಿಲತ್ತಾಯ, ಆಶೀಶ್ ಕುಂಜತ್ತಾಯ ಮೆಣಸಿನಕಾನ ದೇವಸ್ಥಾದ ಸಹಾಯಕ ಸುಬ್ರಹ್ಮಣ್ಯ ರಾವ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಮಂಜುನಾಥ ರೈ ಸಾಂತ್ಯ, ಕಾರ್ಯದರ್ಶಿ ಮೋಹನದಾಸ್ ಶೆಟ್ಟಿ ನೂಜಿಬೈಲು, ಕೋಶಾಧಿಕಾರಿ ದೀಪಕ್ ಕುಮಾರ್ ಮುಂಡ್ಯ,ಉಪಾಧ್ಯಕ್ಷರುಗಳಾದ ಸದಾಶಿವ ರೈ ನಡುಬೈಲು,ನಾಗಪ್ಪ ಗೌಡ ಬೊಮ್ಮೆಟ್ಟಿ, ರತನ್ ಕುಮಾರ್ ನಾಕ್ ಕರ್ನೂರು ಗುತ್ತು, ಜಯಪ್ರಕಾಶ್ ರೈ ನೂಜಿಬೈಲು, ಜೋತೆ ಕಾರ್ಯದರ್ಶಿಗಳಾದ ವಿಕ್ರಂ ರೈ ಸಾಂತ್ಯ, ನಾರಾಯಣ ರೈ ಅಂಕೊತ್ತಿಮಾರ್, ಗ್ರಾ.ಪಂ ಮಾಜಿ ಅಧ್ಯಕ್ಷ ರಮೇಶ್ ರೈ ಸಾಂತ್ಯ, ಜಾತ್ರೋತ್ಸವ ಮಿತಿಯ ಸದಸ್ಯರುಗಳಾದ ಗಿರೀಶ್ ರೈ ಮರಕ್ಕಡ, ರಾಮಣ್ಣ ನಾಯ್ಕ, ಅಚ್ಚುತ ಮಣಿಯಾಣಿ ಸಾಂತ್ಯ, ಶಂಕರ ಪಟ್ರೋಡಿ, ಪೂರ್ಣಚಂದ್ರ ರೈ ನೆಲ್ಲಿತ್ತಡ್ಕ, ರಾಜೇಶ್ ಮೆಣಸಿನಕಾನ, ದೇವಪ್ಪ ತಲೆಬೈಲು ಉಪಸ್ಥಿತರಿದ್ದರು.ದೇವಳದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here