ರೋಟರಿ ಕ್ಲಬ್ ಪುತ್ತೂರುನಿಂದ ಹಿರಿಯ ಸದಸ್ಯ, ನಿವೃತ್ತ ಪಶುವೈದ್ಯ ಡಾ.ಎಂ‌.ಸದಾಶಿವ ಭಟ್ ರವರ  ಹುಟ್ಟುಹಬ್ಬ “ಸದಾಶಿವ 80”, ಕುಟುಂಬ ಸಾಂಸ್ಕೃತಿಕ ಸಮ್ಮಿಲನ 

0

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ವತಿಯಿಂದ ರೋಟರಿ ಹಿರಿಯ ಸದಸ್ಯರೂ, ನಿವೃತ್ತ ಪಶುವೈದ್ಯ ಡಾ.ಎಂ‌.ಸದಾಶಿವ ಭಟ್ ರವರ ಎಂಭತ್ತನೇ ವರ್ಷದ ಹುಟ್ಟುಹಬ್ಬ “ಸದಾಶಿವ 80” ಹಾಗೂ ಕುಟುಂಬ ಸಾಂಸ್ಕೃತಿಕ ಸಮ್ಮಿಲನ ಕಾರ್ಯಕ್ರಮವು ಫೆ.23 ರಂದು ಬೊಳ್ವಾರು ಮಹಾವೀರ ವೆಂಚರ್ಸ್ ನಲ್ಲಿ ಸಂಜೆ ಜರಗಿತು.

ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ಕ್ಲಬ್ ಅಧ್ಯಕ್ಷೆ ಅಶ್ವಿನಿಕೃಷ್ಣ ಮುಳಿಯರವರ ನೇತೃತ್ವದಲ್ಲಿ ಡಾ.ಎಂ.ಎಸ್ ಭಟ್ ರವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಗುರು ಕೊಳತ್ತಾಯರವರ ನೇತೃತ್ವದಲ್ಲಿ ಹುಟ್ಟುಹಬ್ಬ ಆಚರಿಸಿದ ಡಾ.ಎಂ.ಎಸ್ ಭಟ್ ರವರ ಜೀವನ ವೃತ್ತಾಂತ ಕುರಿತು ಎಲ್.ಇ.ಡಿ ಸ್ಕ್ರೀನ್ ನಲ್ಲಿ ಪ್ರಸ್ತುತಪಡಿಸಲಾಯಿತು.ಡಾ.ಎಂ.ಎಸ್ ಭಟ್ ರವರ ಮೊಮ್ಮಗಳು ಡಾ.ಎಂ.ಎಸ್ ಭಟ್ ರವರ ಬಗ್ಗೆ ಮಾತನಾಡಿ ಶುಭಾಶಯ ಸಲ್ಲಿಸಿದರು. ಕ್ಲಬ್ ನಿಕಟಪೂರ್ವ ಅಧ್ಯಕ್ಷ ಉಮಾನಾಥ್ ಪಿ.ಬಿ, ನಿಯೋಜಿತ ಅಧ್ಯಕ್ಷ ಡಾ|ಶ್ರೀಪತಿ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ಲಬ್ ಅಧ್ಯಕ್ಷ ಜೈರಾಜ್ ಭಂಡಾರಿರವರು ಸ್ವಾಗತಿಸಿ, ಪ್ರಸ್ತುತ ತಿಂಗಳಿನಲ್ಲಿ ಹುಟ್ಟುಹಬ್ಬ ಆಚರಿಸಿದ ಹಾಗೂ ವೈವಾಹಿಕ ಜೀವನವನ್ನು ಆಚರಿಸಿದವರಿಗೆ ಹೂ ನೀಡಿ ಅಭಿನಂದಿಸಲಾಯಿತು.

ಹುಟ್ಟುಹಬ್ಬ ಆಚರಿಸಿದ ಡಾ.ಎಂ.ಎಸ್ ಭಟ್ ರವರ ಪತ್ನಿ, ಇನ್ನರ್ ವ್ಹೀಲ್ ಕ್ಲಬ್ ಸದಸ್ಯೆ ಶಂಕರಿ ಎಂ.ಎಸ್ ಭಟ್ ಸ್ವಾಗತಿಸಿ, ಕು|ಶಾಯರಿ ಕೊಳತ್ತಾಯ ಪ್ರಾರ್ಥಿಸಿ, ರೋಟರಿ ಪುತ್ತೂರು ಕಾರ್ಯದರ್ಶಿ ಸುಜಿತ್ ರೈ ಡಿ ವರದಿ ಮಂಡಿಸಿದರು.ಡಾ.ಶ್ರೀಪ್ರಕಾಶ್ ಬಿ. ಸನ್ಮಾನಿತರ ಸನ್ಮಾನ ಪತ್ರ ವಾಚಿಸಿದರು. ನಿವೃತ್ತ ಶಿಕ್ಷಕ ಹಾಗೂ ರೋಟರಿ ಪುತ್ತೂರು ಹಿರಿಯ ಸದಸ್ಯ ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಕ್ಲಬ್ ಸದಸ್ಯ ದತ್ತಾತ್ರೇಯ ರಾವ್ ರವರ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಮತ್ತೊಬ್ಬರ ಜೀವನಕ್ಕೆ ಬೆಳಕಾಗುವುದರಿಂದ ಮನೋತೃಪ್ತಿ…
ನನ್ನ ಹುಟ್ಟುಹಬ್ಬ ಆಚರಿಸಿದ ರೋಟರಿ ಕುಟುಂಬ, ಇನ್ನರ್ ವೀಲ್ ಕುಟುಂಬ ಜೊತೆಗೆ ನಮ್ಮ ಕುಟುಂಬ ವರ್ಗಕ್ಕೆ, ಹಿತೈಷಿಗಳಿಗೆ ಕೃತಜ್ಞತೆಗಳು. ನನ್ನ ಇತಿಮಿತಿಯೊಳಗೆ ರೋಟರಿಯಲ್ಲಿ ಕಾರ್ಯನಿರ್ವಹಿಸಿದ್ದೇನೆ. ನಮ್ಮಿಂದ ಫಲಾನುಭವಿಗಳಿಗೆ ನೆರವು ಸಿಕ್ಕಿದ್ದಾಗ ಅವರ ಮುಖದಲ್ಲಿ ಕಾಣುವ ಸಂತೋಷ ನನಗೆ ತುಂಬಾ ಸಂತೋಷ ಕೊಡುತ್ತಿತ್ತು. ಮತ್ತೊಬ್ಬರ ಜೀವನಕ್ಕೆ ಬೆಳಕಾಗುವುದು ಉತ್ತಮ ವಿಚಾರ ಜೊತೆಗೆ ಮನೋತೃಪ್ತಿ ಬೇರೆ. ರೋಟರಿಯಿಂದ ಸಮಾಜಸೇವೆ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತದೆ. ರೋಟರಿಗೆ ಬಂದ ಮೇಲೆ ಹೊರಗಿನ ಪ್ರಪಂಚದ ಅನುಭವವಾಯಿತು. ವೃತ್ತಿಜೀವನದಲ್ಲಿ ದನ ಸಾಕುವವರಿಗೆ ಮಾರ್ಕೆಟ್ ಮಾಡಿಕೊಟ್ಟು ಶ್ರಮ ಪಟ್ಟಿದ್ದೇನೆ. ರೈತಾಪಿ ಜನರ ಅಭಿಮಾನ ಈಗಲೂ ಇದೆ, ಮುಂದಕ್ಕೂ ಇದೆ. ನಿಮ್ಮೆಲ್ಲರ ಆಶೀರ್ವಾದ ನಮಗೆ ಇದೆ.-|
ಡಾ‌.ಎಂ.ಎಸ್ ಭಟ್, ನಿವೃತ್ತ ಪಶುವೈದ್ಯರು 

LEAVE A REPLY

Please enter your comment!
Please enter your name here