ಪುತ್ತೂರಿನ ಬೊಳುವಾರು ನಿವಾಸಿ ಪ್ರಜ್ವಲ್ ಕರ್ಪೇ ಮಿಸ್ಟರ್ ಬೋರಿ ತುಳು ಚಿತ್ರದ ಮೂಲಕ ಬೆಳ್ಳಿತೆರೆಗೆ

0

ಪುತ್ತೂರು: ಇಲ್ಲಿನ ಪುತ್ತೂರಿನ ಬೊಳುವಾರು ನಿವಾಸಿ ಪ್ರಜ್ವಲ್ ಕರ್ಪೇ ಮಿಸ್ಟರ್ ಬೋರಿ ತುಳು ಚಲನಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಹಿಂದೆ ಇವರು ಹಲವಾರು ಕಿರುಚಿತ್ರ ಮತ್ತು ಆಲ್ಬಂ ಹಾಡುಗಳಲ್ಲಿ ಕೆಲಸ ಮಾಡಿದ್ದು ಇವರು ನಿರ್ದೇಶಿಸಿದ ಮೌನ ಮಾತಾದಾಗ ಮತ್ತು ಓಂ ಸಾಯಿ ರಾಮ್ ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ ಮತ್ತು ರಾಜ್ಯಪ್ರಶಸ್ತಿಗಳ ಜೊತೆಗೆ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

ಬೋರಿ ತುಳು ಚಿತ್ರದ ಮೂಲಕ ಮೊಟ್ಟ ಮೊದಲ ಬಾರಿಗೆ ದೊಡ್ಡ ಪರದೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಮ್ಯಾನೇಜ್‌ಮೆಂಟ್‌ನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದು , ಕನ್ನಡ ತಮಿಳು ಮಲೆಯಾಳಂ ಮೂರು ಭಾಷೆಯಲ್ಲಿ ಏಕಕಾಲಕ್ಕೆ ನಿರ್ಮಾಣ ಆಗಲಿರುವ ಒಂದು ಸಿನಿಮಾದಲ್ಲಿ ಅವಕಾಶ ಸಿಕ್ಕಿದ್ದು ಅಲ್ಲಿಯೂ ಉತ್ತಮ ಪಾತ್ರ ಲಭಿಸಿದ್ದು ಕಲೆಗೊಂದು ಬೆಲೆ ಸಿಕ್ಕಿದೆ.

LEAVE A REPLY

Please enter your comment!
Please enter your name here