ಪುತ್ತೂರು: ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ರೋಟರಿ ಕ್ಲಬ್ ಪುತ್ತೂರು ಯುವದಿಂದ ಮಧ್ಯಾಹ್ನದ ಉಚಿತ ಭೋಜನ ವ್ಯವಸ್ಥೆಗೆ ಸ್ಪಂದಿಸಿರುತ್ತಾರೆ.

ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ|ಸುಬ್ಬಪ್ಪ ಕೈಕಂಬರವರು, ಕನ್ನಡ ಸಾಹಿತ್ಯ ಪರಿಷತ್ತಿನ ಪುತ್ತೂರು ಘಟಕದ ಅಧ್ಯಕ್ಷ ಗೆಳೆಯ ಉಮೇಶ್ ನಾಯಕ್ ರವರು ಫೋನ್ ಮಾಡಿ ಕಾಲೇಜಿನ ಲೊಕೇಶನ್ ಕಳಿಸಿಕೊಡಿ ಅಂತ ಕೇಳಿದರು. ಅವರಿಗೆ ಬರುವ ದಾರಿ ಹೇಳಿದೆ. 20 ನಿಮಿಷದಲ್ಲಿ ಬರುತ್ತೇನೆ ಎಂದು ಹೇಳಿದರು. ಬರುವಾಗ ರೋಟರಿ ಕ್ಲಬ್ ಪುತ್ತೂರು ಯುವದ ಅಧ್ಯಕ್ಷ ಕುಸುಮರಾಜ್, ಕಾರ್ಯದರ್ಶಿ ಅಭೀಷ್, ಸುದರ್ಶನ್ ಜೊತೆಗಿದ್ದರು. ಜೊತೆಗೆ 250 ಕೆ.ಜಿ ಅಕ್ಕಿ, ಸಕ್ಕರೆ, ಮಸಾಲೆ ಪದಾರ್ಥಗಳು ನಮ್ಮ ಮಧ್ಯಾಹ್ನದ ಉಚಿತ ಊಟಕ್ಕೆ ಇದು ಸುದ್ದಿ ಇಲ್ಲದೆ ಸದ್ದಿಲ್ಲದೆ ಮಾಡಿದ ಕೆಲಸ ಎಂದ ಅವರು ಗೆಳೆಯ ಉಮೇಶ್ ನಾಯಕ್ ಅವರ ಸಹೃದಯತೆಗೆ, ಅವರೊಂದಿಗೆ ಕೈಜೋಡಿಸಿದ ರೋಟರಿ ಕ್ಲಬ್ ಯುವದ ಅಧ್ಯಕ್ಷ ಕುಸುಮರಾಜ್ ಮತ್ತು ಸಹೃದಯಿ ಸದಸ್ಯರಿಗೆ ಕಾಲೇಜಿನ ವಿದ್ಯಾರ್ಥಿ ಸಮೂಹ ಆಭಾರಿಯಾಗಿದೆ. ನಮ್ಮ ಮಕ್ಕಳ ಸುಮಾರು ಒಂದು ತಿಂಗಳ ಊಟದ ಅಕ್ಕಿ ಒದಗಿಸಿದ ನಿಮ್ಮ ಪ್ರೀತಿಗೆ ನಾವೆಲ್ಲ ಶರಣು ಎಂದು ಅವರು ಸುದ್ದಿಗೆ ಪ್ರತಿಕ್ರಿಯಿಸಿದ್ದಾರೆ.
120 ವಿದ್ಯಾರ್ಥಿಗಳು ಕಾಲೇಜಿನಲ್ಲಿ ವಿದ್ಯಾರ್ಜನೆಗೈಯುತ್ತಿದ್ದು ಹಲವರು ದಾನಿಗಳು ವಿವಿಧ ರೀತಿಯಲ್ಲಿ ಕೊಡುಗೆಯನ್ನು ನೀಡುವ ಮೂಲಕ ಸ್ಪಂದಿಸಿದ್ದು ಇತ್ತೀಚೆಗೆ ಹೊಟೇಲ್ ಅಶ್ವಿನಿ ರೆಸ್ಟೋರೆಂಟ್ ನ ಮಾಲಕ ಕರುಣಾಕರ್ ರೈ ದೇರ್ಲ ದಂಪತಿ ರೋಟರಿ ಪುತ್ತೂರು ಸಿಟಿ ಮುಖೇನ 2000ಲೀಟರಿನ ನೀರಿನ ಟಾಂಕಿಯನ್ನು ಕೊಡುಗೆಯಾಗಿ ನೀಡಿದ್ದರು.