ಬನ್ನೂರು ಡಂಪಿಂಗ್ ಯಾರ್ಡ್‌ನಲ್ಲಿ ಅನುಷ್ಠಾನವಾಗುತ್ತಿರುವ ಬಯೋಗ್ಯಾಸ್ ಯೋಜನೆಯ ಪ್ರಥಮ ಹಂತದ ಚಟುವಟಿಕೆಗಳಿಗೆ ಚಾಲನೆ

0

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಪೂರ್ವ ಸ್ವಚ್ಚ ಭಾರತ್ ಟ್ರಸ್ಟ್‌ನ ಸಂಯೋಜಕತ್ವದಲ್ಲಿ ಪುತ್ತೂರು ನಗರಸಭೆಯ ಬನ್ನೂರು ಡಂಪಿಂಗ್ ಯಾರ್ಡ್‌ನಲ್ಲಿ ಅನುಷ್ಠಾನ ಆಗುತ್ತಿರುವ ಬಯೋಗ್ಯಾಸ್ ಯೋಜನೆಯ ಪ್ರಥಮ ಹಂತದ ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು.
ಹಸಿಕಸವನ್ಹು ಬಳಸುವ ಮೊದಲು ಬೃಹತ್ ಟಾಂಕಿಗೆ 200 ಟನ್ ಸೆಗಣಿಯನ್ನು ತುಂಬಿಸಬೇಕಾಗಿದ್ದು, ಅದರ ಚಾಲನೆಯನ್ನು ನೆರವೇರಿಸಲಾಯಿತು. ರೋಟರಿಕ್ಲಬ್ ಪುತ್ತೂರು ಪೂರ್ವ ಸ್ವಚ್ಚ ಭಾರತ್ ಟ್ರಸ್ಟ್‌ನ ಅಧ್ಯಕ್ಷ ಕೃಷ್ಣ ನಾರಾಯಣ ಮುಳಿಯ, ರೋಟರಿ ಕ್ಲಬ್ ಪುತ್ತೂರು ಪೂರ್ವದ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಯೋಜನಾ ನಿರ್ದೇಶಕ ಡಾ.ರಾಜೇಶ್ ಬೆಜ್ಜಂಗಳ, ಅನುಷ್ಠಾನ ಸಂಸ್ಥೆ ರೆಟಾಪ್ ಸೊಲ್ಯುಷನ್‌ನ ನಿರ್ದೇಶಕಿ ಡಾ. ದಿವ್ಯ ಪ್ರಶಾಂತ್ ಈ ಕಾರ್ಯಕ್ರಮವನ್ನು ನೆರವೇರಿಸಿದರು.

LEAVE A REPLY

Please enter your comment!
Please enter your name here