ಮುಳಿಯ ಜ್ಯುವೆಲ್ಸ್ ನಿಂದ ಶ್ರೀ ರಾಮಲಲ್ಲಾ ಮತ್ತು ಶ್ರೀರಾಮ್ ಪರಿವಾರ್ ಶ್ರೇಣಿಯ ಆಭರಣಗಳ ಅನಾವರಣ-ಗಮನ ಸೆಳೆದ ರಾಮ ಪರಿವಾರದ ಹಾರ

0

ಪುತ್ತೂರು: ವನವಾಸ ಮುಗಿಸಿ ಅರಮನೆಗೆ ಬಂದ ರಾಮನಿಗೆ ಪಟ್ಟಾಭಿಷೇಕದ ಸಂಭ್ರಮದಲ್ಲಿ ಹೇಗೆ ರತ್ನ ಖಚಿತ ವಜ್ರ ವೈಡೂರ್ಯಗಳಿಂದ ಅಲಂಕಾರ ನಡೆದಿತ್ತೋ ಅದೇ ರೀತಿ ಅಯೋಧ್ಯೆ ರಾಮಲಲ್ಲಾ ಮೂರ್ತಿಗೂ ಅಲಂಕಾರ ಮಾಡಲಾಗಿದೆ. ರಾಮಲಲ್ಲಾ ಮೂರ್ತಿಯಲ್ಲಿರುವ ಪ್ರತಿಯೊಂದು ಆಭರಣಗಳಿಗೂ ಅದರದೇ ಆದ ಮಹತ್ವವಿದೆ. ಈ ಆಭರಣಗಳು ಬಾಲರಾಮನ ವಿಗ್ರಹದ ಸೌಂದರ್ಯ ಮುಗ್ಧತೆ, ದೈವತ್ವ ಹಾಗೂ ರಾಜಸ ಗುಣಗಳ ಮಿಶ್ರಣದ ಪ್ರತೀಕವಾಗಿದ್ದು, ಅಯೋಧ್ಯೆಯ ರಾಮಮಂದಿರದ ಲೋಕಾರ್ಪಣೆಯ ನಂತರ “ರಾಮಲಲ್ಲಾʼ’ ಅಲಂಕಾರದಿಂದ ಸ್ಪೂರ್ತಿ ಪಡೆದ ಮುಳಿಯ ಜ್ಯುವೆಲ್ಲರ್ಸ್‌ ಸಂಸ್ಥೆ ಶ್ರೀರಾಮ್ ಮತ್ತು ಶ್ರೀರಾಮ್ ಪರಿವಾರ ಎಂಬ ವಿನೂತನ ಆಭರಣಗಳನ್ನು ಮಡಿಕೇರಿ ಶೋರೂಂ ನಲ್ಲಿ ಬಿಡುಗಡೆ ಮಾಡಿದೆ.

ಶ್ರೀರಾಮ್ ಶ್ರೇಣಿ ಆಭರಣಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅನಿಲ್ ಹೆಚ್.ಟಿ, ದೈವ ಭಕ್ತರು ಈ ಆಭರಣಗಳನ್ನು ಧರಿಸಿಕೊಂಡಾಗ ಅವರಲ್ಲಿ ಗಾಂಭೀರ್ಯ ಮತ್ತು ಶಕ್ತಿ ಹೆಚ್ಚುವುದು ಹಾಗೆಯೇ ಅವರು ಹೆಚ್ಚು ಸಂತೋಷವಾಗಿರುವರು ಎಂದರು. ಸಂಸ್ಥೆಯ ಸಿಎಂಡಿ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ಅಯೋಧ್ಯೆಯಲ್ಲಿ ಶ್ರೀರಾಮನಿಗೆ ತೊಡಿಸಿರುವ ಕಂಠಿ ಹಾರದಂತೆಯೇ ಭಕ್ತರು ಕೊರಳಲ್ಲಿ ಧರಿಸಿ ಕಂಗೊಳಿಸುವಂತೆ ಕಂಠಿ ಹಾರವನ್ನು ತಯಾರಿಸಲಾಗಿದೆ ಎಂದರು. ಸಂಸ್ಥೆಯ ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ ಮಾತನಾಡಿ, ಶ್ರೀರಾಮನ ನಡೆ ಮತ್ತು ಶ್ರೀ ಕೃಷ್ಣನ ನುಡಿ ಚೆಂದ ಎಂಬ ಮಾತಿನಂತೆ ಶ್ರೀರಾಮನ ಜೀವನ ಆದರ್ಶ ಮತ್ತು ಶ್ರೀಕೃಷ್ಣನ ಭಗವದ್ಗೀತೆಯ ಕೃಷ್ಣೋಪದೇಶದ ನುಡಿಗಳನ್ನು ನಮ್ಮ ಜೀವನಕ್ಕೆ ಆದರ್ಶ ಪ್ರಾಯವಾಗಬೇಕೆಂದು ಕರೆ ನೀಡಿದರು. ಪುಟಾಣಿ ಮಕ್ಕಳು ಶ್ರೀರಾಮ, ಸೀತೆ, ಲಕ್ಷ್ಮಣ, ಹನುಮಂತನ ಪಾತ್ರ ಧರಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಸಂಸ್ಥೆಯ ಮಾರುಕಟ್ಟೆ ವಿಭಾಗದ ಸಂಜೀವ ಮತ್ತು ಶಾಖಾ ಪ್ರಬಂಧಕ ತೀತಿಮಾಡ ಸೋಮಣ್ಣ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.‌

ಇತ್ತೀಚೆಗೆ ದೇಶ ವಿದೇಶದಲ್ಲಿ ಶ್ರೀರಾಮ ಶ್ರೇಣಿಯ ಆಭರಣಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಈ ಬೇಡಿಕೆಗಳ ಪೂರೈಕೆಗಾಗಿ ಗ್ರಾಹಕರ ಮನೆ ಮಾತಾಗಿರುವ ಪ್ರಸಿದ್ಧ ಚಿನ್ನಾಭರಣಗಳ ಮಳಿಗೆ ಮುಳಿಯ ಜುವೆಲ್ಲರ್ಸ್ ಶ್ರೀರಾಮ್ ಆಭರಣಗಳ ಶ್ರೇಣಿಯನ್ನು ಬಿಡುಗಡೆಗೊಳಿಸಿದೆ. ಮುಳಿಯ ಜ್ಯವೆಲ್ಲರ್ಸ್‌ ಶೋರೂಂ ಗೆ ಭೇಟಿ ನೀಡಿ ಶ್ರೀರಾಮ್ ಶ್ರೇಣಿಯ ಆಭರಣಗಳನ್ನು ನೋಡಿ ಆನಂದಿಸಬಹುದಾಗಿದ್ದು, ಈ ವಿಶೇಷ ಆಭರಣಗಳು ನಿಮಗೆ ಇಷ್ಟವಾದಲ್ಲಿ ತಮ್ಮ ಆಯ್ಕೆಯನ್ನು ಮುಂಗಡ ಬುಕ್ಕಿಂಗ್ ಮಾಡಬಹುದಾಗಿದೆ.

ಮುಳಿಯ ಜ್ಯುವೆಲ್ಲರ್ಸ್ ನ ಶ್ರೀರಾಮ್ ಜ್ಯುವೆಲ್ಲರಿ ಶ್ರೇಣಿಯಲ್ಲಿ ಪ್ರಮುಖವಾಗಿ ರಾಮ ಪರಿವಾರ ಹಾರ ಹೆಚ್ಚು ಗಮನ ಸೆಳೆಯುತ್ತಿದೆ. ಈ ಹಾರಗಳಲ್ಲಿ ರಾಮ, ಸೀತೆ, ಲಕ್ಷ್ಮಣ ಹಾಗೂ ರಾಮಭಕ್ತ ಹನುಮಂತ ಎದ್ದು ಕಾಣುತ್ತಾನೆ. ಈ ಹಾರಕ್ಕೆ ನೈಸರ್ಗಿಕ ಮುತ್ತುಗಳನ್ನು ಬಳಸಲಾಗಿದ್ದು ತ್ರೀಡಿ ಟೆಕ್ನಾಲಜಿ ಬಳಸಿ ತಯಾರಿಸಲಾಗಿದೆ. ಪರ್ಲ್ ವಿಥ್ ಎಮರಾಲ್ಡ್ ಕಾಂಬಿನೇಷನ್ ನಲ್ಲಿ ಇದು ಶೋಭಿಸುತ್ತಿದೆ. ಇದರ ಜೊತೆಗೆ ರಾಮ, ಸೀತೆ ಇರುವ ಜುಮ್ಕಿಗಳು, ಶ್ರೀರಾಮ, ಹನುಮಂತನ ಲಾಕೆಟ್/ ಪೆಂಡೆಂಟ್ ಗಳು, ರಾಮ ಪರಿವಾರದ ವಂಕಿ ಮತ್ತು ಬ್ರಾಸ್ಲೈಟ್, ರಾಮ, ಲಕ್ಷ್ಮಣ ,ಸೀತೆ ಮತ್ತು ಹನುಮಂತನ ಗೋಲ್ಡ್ ಶೀಟ್ ಫೋಟೋ ಸೇರಿದಂತೆ ರಾಮನ ಬೆಳ್ಳಿ ಮೂರ್ತಿ ಹಾಗೂ ಚಾಮರಗಳೂ ಮುಳಿಯದಲ್ಲಿ ಲಭ್ಯವಿದೆ. ರೂ 30,000 ದಿಂದ ಆರಂಭವಾಗುವ ಈ ಶ್ರೀರಾಮ್ ಆಭರಣಗಳ ಶ್ರೇಣಿ ಕೈಗೆಟಕುವ ಬೆಲೆಯಲ್ಲಿ ನಿಮ್ಮದಾಗಿಸಿಕೊಳ್ಳಬಹುದಾಗಿದೆ. ಜನಾಕರ್ಷಣೆ ಪಡೆದಿರುವ ಈ ಆಭರಣಗಳು ಮಡಿಕೇರಿ ಮುಳಿಯ ಶೋರೂಂನಲ್ಲಿ ಲಭ್ಯವಿದೆ.

LEAVE A REPLY

Please enter your comment!
Please enter your name here