ಬಲಮುರಿ ವಿದ್ಯಾಗಣಪತಿ ದೇವಸ್ಥಾನದಲ್ಲಿ ಯಕ್ಷಗಾನ ತಾಳಮದ್ದಳೆ

0

ಪುತ್ತೂರು: ಬನ್ನೂರು ಕರ್ಮಲ ಶ್ರೀ ಬಲಮುರಿ ವಿದ್ಯಾಗಣಪತಿ ದೇವಸ್ಥಾನದಲ್ಲಿ ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ವತಿಯಿಂದ ತಿಂಗಳ ಸರಣಿ ಯಕ್ಷಗಾನ ತಾಳಮದ್ದಳೆ ಪಾರ್ತಿಸುಬ್ಬ ವಿರಚಿತ ರಾಮಾಯಣದ ” ಉಂಗುರ ಸಂಧಿ ” ಫೆ. 27ರಂದು ನಡೆಯಿತು.


ಹಿಮ್ಮೇಳದಲ್ಲಿ ಯಲ್ ಯನ್ ಭಟ್, ಆನಂದ ಸವಣೂರು, ಶ್ರೀಪತಿ ಭಟ್ ಉಪ್ಪಿನಂಗಡಿ, ಅಚ್ಯುತ ಪಾಂಗಣ್ಣಾಯ ಕೋಡಿಬೈಲು, ಮಾ.ಪರೀಕ್ಷಿತ್ ಪುತ್ತೂರು ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ರಾಮ( ಭಾಸ್ಕರ್ ಬಾರ್ಯ ), ಲಕ್ಷ್ಮಣ ( ಚಂದ್ರಶೇಖರ್ ಭಟ್ ಬಡೆಕ್ಕಿಲ ), ಸುಗ್ರೀವ ( ದಿವಾಕರ ಆಚಾರ್ಯ ಗೇರುಕಟ್ಟೆ ), ತಾರೆ ( ಕುಂಬ್ಳೆ ಶ್ರೀಧರ್ ರಾವ್ ), ಜಾಂಬವ ( ಗುಡ್ಡಪ್ಪ ಬಲ್ಯ ), ಸಂಪಾತಿ ( ಶುಭಾ ಅಡಿಗ ), ಸುಷೇಣ ( ಹರಿಣಾಕ್ಷಿ ಜೆ ಶೆಟ್ಟಿ ), ಶಿವ ( ಪ್ರೇಮಲತಾ ರಾವ್ ), ಕಣ್ವಮಹರ್ಷಿ ( ಭಾರತಿ ಜಯರಾಮ್ ), ಹನೂಮಂತ ( ಮನೋರಮಾ ಜಿ ಭಟ್ ), ಅಂಗದ ( ಲಕ್ಷ್ಮಿ ವಿ.ಜಿ .ಭಟ್ ), ಸ್ವಯಂಪ್ರಭೆ ( ಭಾರತಿ ರೈ ಅರಿಯಡ್ಕ ) ಸಹಕರಿಸಿದರು. ಟಿ ರಂಗನಾಥ ಸ್ವಾಗತಿಸಿ , ರಾಜ್ ಗೋಪಾಲ್ ಭಟ್ ಬನ್ನೂರು ವಂದಿಸಿದರು. ಇಂಜಿನಿಯರ್ ಕೇಶವ ಭಟ್ ಪ್ರಾಯೋಜಿಸಿದ್ದರು.

LEAVE A REPLY

Please enter your comment!
Please enter your name here