ಪುಣಚ ದೇವಿನಗರ ಜೈ ಭಾರತಿ ಮರಾಟಿ ಸಂಘದಲ್ಲಿ ಗೋಂದೋಳು ಪೂಜೆ

0

ಪುಣಚ : ಪುಣಚ ದೇವಿನಗರ ಶ್ರೀ ಆದಿಶಕ್ತಿ ಮಹಾಮ್ಮಾಯಿ ಜೈ ಭಾರತಿ ಮರಾಟಿ ಸಂಘದ ಆರಾಧನಾ ಮಂದಿರದಲ್ಲಿ ಶ್ರೀ ಮಹಮ್ಮಾಯಿ ಅಮ್ಮನವರ ಗೋಂದೋಳು ಪೂಜೆಯು ಫೆ. 27ರಂದು ನಡೆಯಿತು.


ಫೆ.27ರಂದು ಬೆಳಿಗ್ಗೆ ನಾರಾಯಣ ಬನ್ನಿಂತಾಯರ ಪೌರೋಹಿತ್ಯದಲ್ಲಿ ಮಹಾಗಣಪತಿ ಹೋಮ ನಡೆಯಿತು. ರಾತ್ರಿ ಮಹಮ್ಮಾಯಿ ಅಮ್ಮನ ಗದ್ದಿಗೆ ಏರುವ ಕಾರ್ಯಕ್ರಮ, ಅಡ್ಯನಡ್ಕ ದುರ್ಗಾ ಪರಮೇಶ್ವರಿ ಮಹಿಳಾ ಭಜನಾ ಮಂಡಳಿಯವರಿಂದ ಭಜನೆ, ಮಹಮ್ಮಾಯಿ ಭಜನಾ ತಂಡದ ಸದಸ್ಯರಿಂದ ಕುಣಿತ ಭಜನೆ, ಉಜಿರೆ ಅರ್ಬಿ ತಂಡದ ಗುಮ್ಮಟೆ ಕಾರ್ಯಕ್ರಮ ನಡೆದು ದೇವಿ ಪಾತ್ರಿಯ ದರ್ಶನದೊಂದಿಗೆ ಶ್ರೀ ಮಹಮ್ಮಾಯಿ ಅಮ್ಮನವರ ಗೊಂದೋಳು ಪೂಜೆ ಪ್ರಸಾದ ವಿತರಣೆ ನಡೆಯಿತು.


ಮಾಜಿ ಶಾಸಕ ಸಂಜೀವ ಮಠಂದೂರು, ಪುಣಚ ಗ್ರಾ.ಪಂ.ಅಧ್ಯಕ್ಷೆ ಬೇಬಿ ಪಟಿಕಲ್ಲು, ಉಪಾಧ್ಯಕ್ಷ ಮಹೇಶ್ ಶೆಟ್ಟಿ ಬೈಲುಗುತ್ತು, ಸದಸ್ಯರು, ಮಂಗಳೂರು ಎಂ.ಆರ್.ಪಿ.ಎಲ್ ವ್ಯವಸ್ಥಾಪಕ ಸತೀಶ್ ನಾಯ್ಕ, ನಿವೃತ್ತ ಪೋಲಿಸ್ ಅಧಿಕಾರಿ ಮಹಾಲಿಂಗ ನಾಯ್ಕ, ದ.ಕ.ಜಿಲ್ಲಾ ಮರಾಟಿ ಸಂಘದ ಸಂಚಾಲಕ ಶ್ರೀಧರ್ ನಾಯ್ಕ ಮುಂಡೋವುಮೂಲೆ ಹಾಗೂ ಅನೇಕ ಗಣ್ಯರು, ಸಂಘ ಸಂಸ್ಥೆಗಳ ಮುಖಂಡರು, ಸಮಾಜ ಭಾಂಧವರು, ಊರ ಪರ-ಊರ ಭಾಂಧವರು, ಗ್ರಾಮಸ್ಥರು ಪಾಲ್ಗೊಂಡು ದೇವಿಯ ಪ್ರಸಾದ ಸ್ವೀಕರಿಸಿದರು.
ಶ್ರೀ ಮಹಮ್ಮಾಯಿ ಜೈ ಭಾರತಿ ಮರಾಟಿ ಸಂಘದ ಆಡಳಿತ ಸಮಿತಿಯ ಅಧ್ಯಕ್ಷ ಐತ್ತಪ್ಪ ನಾಯ್ಕ ಪೊಯ್ಯಮೂಲೆ, ಕಾರ್ಯದರ್ಶಿ ಬಾಬುನಾಯ್ಕ ಅಜ್ಜಿನಡ್ಕ ಮತ್ತು ಪದಾಧಿಕಾರಿಗಳು ಅತಿಥಿಗಳನ್ನು ಭಕ್ತಾದಿಗಳನ್ನು ಸ್ವಾಗತಿಸಿದರು.

LEAVE A REPLY

Please enter your comment!
Please enter your name here