ಆರ್ ಎಸ್ ಎಸ್ ನಿಷ್ಟಾವಂತ ಸ್ವಯಂ ಸೇವಕ ಕುಂಬ್ರ ಶಿವರಾಮ ರೈಯವರಿಗೆ ನುಡಿನಮನ

0

ಕುಂಬ್ರ ಜನನ ಶಿವರಾಮ ರೈಯವರ ಸ್ಮರಣೆಗೆ ಮರಣವಿಲ್ಲ- ಕಡಮಜಲು ಸುಭಾಸ್ ರೈ

ಪುತ್ತೂರು: ಆರ್.ಎಸ್.ಎಸ್ ನಿಷ್ಟಾವಂತ ಸ್ವಯಂಸೇವಕನಾಗಿ, ಬಿಜೆಪಿ ಮುಖಂಡನಾಗಿ ಕುಂಬ್ರ ಶಿವರಾಮ ರೈಯವರ ಸಮಾಜಕ್ಕೆ ಸಲ್ಲಿಸಿರುವ ಸೇವೆ ಅನನ್ಯ, ಅವರ ಸ್ಮರಣೆಗೆ ಮರಣವಿಲ್ಲ. ಸದಾ ಸಮಾಜದ ಹಿತಕಾಗಿ ಬದುಕು ಸಾಗಿಸಿದ ಶಿವರಾಮ ರೈಯವರು ಬಿಜೆಪಿಯನ್ನು ಈ ಭಾಗದಲ್ಲಿ ಕಟ್ಟಿ ಬೆಳೆಸಿದ ಮಹಾನೀಯರಲ್ಲಿ ಒರ್ವರಾಗಿದ್ದು, ಇವರ ಸೇವಾಕಾರ್‍ಯ ಸದಾ ಅನುಕರಣೀಯ ಎಂದು ದೇಶ ಭಕ್ತ ಎನ್.ಎಸ್.ಕಿಲ್ಲೆ ಪ್ರತಿಷ್ಠಾನ
ಅಧ್ಯಕ್ಷ ಕಡಮಜಲು ಸುಭಾಸ್ ರೈ ಹೇಳಿದರು. ಅವರು. ಫೆ. 27ರಂದು ಉಪ್ಪಿನಂಗಡಿ ಶ್ರೀ ಶಕ್ತಿ ಸಭಾಭವನದಲ್ಲಿ ಜರಗಿದ ಕುಂಬ್ರ ಶಿವರಾಮ ರೈಯವರ ಉತ್ತರಕ್ರಿಯೆಯ ಅಂಗವಾಗಿ ಜರಗಿದ ನುಡಿನಮನ ಸಲ್ಲಿಸುವ ಶ್ರದ್ಧಾಂಜಲಿ ಕಾರ್‍ಯಕ್ರಮದಲ್ಲಿ ಮಾತನಾಡಿದರು.
1995 ಅವಧಿಯಲ್ಲಿ ತಾ.ಪಂ ಒಳಮೊಗ್ರು ಕ್ಷೇತ್ರದ ಚುನಾವಣೆಯಲ್ಲಿ ಮಹಿಳಾ ಮೀಸಲಾತಿ ಅಭ್ಯರ್ಥಿಯಾಗಲು ಯಾರು ಮುಂದೆ ಬರುತ್ತಿರಲಿಲ್ಲ. ಅಂಥ ವೇಳೆ ಧೈರ್ಯದಿಂದ ಶಿವರಾಮ ರೈಯವರು ತನ್ನ ಪತ್ನಿ ಸಾವಿತ್ರಿ ರೈಯವರನ್ನು ಚುನಾವಣಾ ಕಣಕ್ಕೆ ನಿಲ್ಲಿಸುವಲ್ಲಿ ಮುಂದೆ ಬಂದರು. ಕಠಿಣ ಪರಿಶ್ರಮದಿಂದ ಸಾವಿತ್ರಿಯವರು ಜಯಶಾಲಿಯಾದರು. ಶಿವರಾಮ ರೈಯವರು ಸದಾ ನಗುಮುಖ ವ್ಯಕ್ತಿತ್ವ, ಯಕ್ಷಗಾನ ಭಾಗವತನಾಗಿ ವಿವಿಧ ಸಂಘ-ಸಂಸ್ಥೆಗಳಲ್ಲಿ ಗುರುತಿಸಿಕೊಂಡು ಎಲ್ಲರೊಂದಿಗೆ ಅತ್ಮೀಯತೆಯಿಂದ ಬೆರೆಯುವ ರೈವರ ಬದುಕು ಸಮಾಜಕ್ಕೆ ಆದರ್ಶ ಎಂದು ಕಡಮಜಲು ಸುಭಾಸ್ ರೈ ಹೇಳಿದರು. ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈಯವರು ಮಾತನಾಡಿ ತನ್ನ ಎಳೆಯ ವಯಸಿನಲ್ಲಿ ಸಾಧನೆಗೈದ ಶಿವರಾಮ ರೈಯವರು ಇನ್ನೂ ಬಾಳಿ ಬದುಕು ಸಾಗಿಸಬೇಕಿತ್ತು ಅವರ ಅಕಾಲಿಕ ಅಗಲುವಿಕೆ ತುಂಬಾ ನೋವು ತಂದಿದೆ ಎಂದರು.
ವೇದಿಕೆಯಲ್ಲಿ ಶಿವರಾಮ ರೈಯವರ ಪತ್ನಿ ತಾ.ಪಂ, ಮಾಜಿ ಸದಸ್ಯೆ ಸಾವಿತ್ರಿ ಶಿವರಾಮ ರೈ, ಪುತ್ರ ಉದ್ಯಮಿ ಸ್ವಸ್ತಿಕ್‌ರಾಜ್ ರೈ ಕುಂಬ್ರ, ಪುತ್ರಿ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಸುಶ್ಮಾ ರೈ ಕುಂಬ್ರ ಮತ್ತು ಕುಂಬ್ರ ಜನನ ಕುಟುಂಬಸ್ಥರು ಮತ್ತು ಬಂಧು ಮಿತ್ರರು ಹಿತೈಷಿಗಳು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಮಾಜಿ ಶಾಸಕರಾದ ಶಕುಂತಳಾ ಟಿ.ಶೆಟ್ಟಿ, ಸಂಜೀವ ಮಠಂದೂರು, ಬಿಜೆಪಿ ತಾಲೂಕು ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಕೆಎಮ್‌ಎಫ್ ಜಿಲ್ಲಾ ಉಪಾಧ್ಯಕ್ಷ ಎಸ್.ಬಿ.ಜಯರಾಮ ರೈ ಬಳೆಜ್ಜ, ತಾ.ಪಂ, ಮಾಜಿ ಸದಸ್ಯ ಬೂಡಿಯಾರ್ ಪುರುಷೋತ್ತಮ ರೈ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ವಿಜಯಕುಮಾರ್ ರೈ ಕೊರಂಗ, ಹಿರಿಯ ಆರ್ ಎಸ್ ಎಸ್ ಸ್ವಯಂ ಸೇವಕ ಎಂ.ಎಸ್.ಕೇಶವ ಶಾಂತಿವನ ರವೀಂದ್ರನಾಥ ರೈ ಕೇನ್ಯ, ಕೆದಂಬಾಡಿ ಗ್ರಾ.ಪಂ, ಮಾಜಿ ಅಧ್ಯಕ್ಷ ಪ್ರವೀಣ್ ಶೆಟ್ಟಿ ತಿಂಗಳಾಡಿ, ಪುತ್ತೂರು ಬಂಟರ ಸಂಘದ ಕಾರ್‍ಯದರ್ಶಿ ರಮೇಶ್ ರೈ ಡಿಂಬ್ರಿ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯ ರವೀಂದ್ರನಾಥ ರೈ ಬಳ್ಳಮಜಲುಗುತ್ತು, ಹಿರಿಯ ಸಹಕಾರಿ ಶಿವರಾಮ ಗೌಡ ಇದ್ಯಪೆ ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಿದರು.

LEAVE A REPLY

Please enter your comment!
Please enter your name here