ಈಶ್ವರಮಂಗಲ:ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯಿಂದ ನಷ್ಟ ಪರಿಹಾರ ಮೊತ್ತ ವಿತರಣೆ

0

ಈಶ್ವರಮಂಗಲ:ಈಶ್ವರಮಂಗಲ ವಲಯದ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಘಟ ಸಮಿತಿ ವ್ಯಾಪ್ತಿಯ ಒಡಿಯೂರು ಶ್ರೀ ಪಂಚಲಿಂಗೇಶ್ವರ ವಿಕಾಸ ವಾಹಿನಿ ಸ್ವ ಸಹಾಯ ಸಂಘ ನೂಜಿಬೈಲು ತಂಡದ ಸದಸ್ಯೆ ಹರಿಣಿಯವರು ಇತ್ತೀಚೆಗೆ ಮರಣಹೊಂದಿದ್ದು ನಷ್ಟ ಪರಿಹಾರ ಮೊತ್ತವಾಗಿ 50000/- ರೂಪಾಯಿ ಚೆಕ್ ನ್ನು ಅವರ ಅಣ್ಣ ಶಿವರಾಮ ಆಚಾರ್ಯ ದಂಪತಿಗೆ ನೀಡಿದರು. ಯೋಜನೆಯ ತಾಲೂಕು ಮೇಲ್ವಿಚಾರಕಿ ಸವಿತಾ ರೈ, ವಲಯ ಸಂಯೋಜಕಿ ಮಹಿತ ರೈ, ಗ್ರಾಮದ ಸೇವ ದೀಕ್ಷಿತೆ ಭಾಗಿಯವರ ಉಪಸ್ಥಿತಿಯಲ್ಲಿ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಈಶ್ವರಮಂಗಲ ಶಾಖೆಯ ವ್ಯವಸ್ಥಾಪಕಿ ಸುಜಾತರವರು ನಷ್ಟ ಪರಿಹಾರ ಮೊತ್ತ ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here