ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ರವಿಪ್ರಕಾಶ್ ರವರಿಗೆ ಪಿತೃ ವಿಯೋಗ

0

ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರಾಗಿರುವ ರವಿಪ್ರಕಾಶ್ ರವರ ತಂದೆ ಶಿವಾಜಿನಗರ ನಿವಾಸಿ ಸೇಸಪ್ಪ ಸಪಲ್ಯ (78 ವ.)ರವರು ಫೆ.29ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಮಂಗಳೂರು ಗಣೇಶ್ ಬೀಡಿ ಸಂಸ್ಥೆಯಲ್ಲಿ ವಾಹನ ಚಾಲಕರಾಗಿ ನಿವೃತ್ತಿ ಹೊಂದಿದ್ದರು. ಮೃತರು ಪತ್ನಿ ಲಕ್ಷ್ಮೀ, ಮಕ್ಕಳಾದ ಹರೀಶ್, ನಿತ್ಯಾನಂದ, ರವಿಪ್ರಕಾಶ್ ಮತ್ತು ರವಿಕಲಾ ರವರನ್ನು ಅಗಲಿದ್ದಾರೆ.ಮೃತರ ಅಂತ್ಯಸಂಸ್ಕಾರವನ್ನು ಪಳಿಕೆ ಹಿಂದೂ ರುದ್ರಭೂಮಿಯಲ್ಲಿ ನಡೆಸುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here