ಪುರುಷರಕಟ್ಟೆ ಹಾರೂನ್ ಹಾಜಿ ನಿಧನ

0

ಪುತ್ತೂರು : ಪುರುಷರಕಟ್ಟೆ ನಿವಾಸಿಯಾಗಿದ್ದ ಹಿರಿಯ ಉದ್ಯಮಿ, ಪುರುಷರಕಟ್ಟೆ ಇನಾಯತ್ತುಲ್ ಇಸ್ಲಾಂ ಮದ್ರಸದ ಸ್ಥಾಪಕಾಧ್ಯಕ್ಷ ಹಾರೂನ್ ಹಾಜಿ (೬೫ ವ) ರವರು ಅಲ್ಪಕಾಲದ ಅನಾರೋಗ್ಯದಿಂದ ಫೆ. ೨೯ರಂದು ಸಂಜೆ ಅವರ ಪುರುಷರಕಟ್ಟೆ ಸ್ವಗೃಹದಲ್ಲಿ ನಿಧನರಾದರು

ಈ ಹಿಂದೆ ಪುರುಷರಕಟ್ಟೆಯಲ್ಲಿ ಹಲವಾರು ವರ್ಷಗಳ ಕಾಲ ಜಿನಸು ವ್ಯಾಪಾರಿಯಾಗಿದ್ದ ಇವರು ಪುರುಷರಕಟ್ಟೆ ಇನಾಯತ್ತುಲ್ ಇಸ್ಲಾಂ ಮದ್ರಸದ ಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಪುರುಷರಕಟ್ಟೆ ದಿ. ಮೂಸಾ ಹಾಜಿಯವರ ಪುತ್ರರಾದ ಇವರು ಪತ್ನಿ, ಓರ್ವ ಪುತ್ರಿ, ಸಹೋದರರು ಹಾಗೂ ಸಹೋದರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here