ಮಾ. 2: ತುಂಬೆ ಕಾಲೇಜಿನ ಪ್ರಾಂಶುಪಾಲ ಕೆ.ಎನ್.ಗಂಗಾಧರ ಆಳ್ವರಿಗೆ ಬೀಳ್ಕೋಡುಗೆ

0

ಪುತ್ತೂರು: ತುಂಬೆ ಪದವಿ ಪೂರ್ವ ಕಾಲೇಜಿನಲ್ಲಿ ಕಳೆದ ಇಪ್ಪತ್ತೈದು ವರ್ಷಗಳಿಂದ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿರುವ ಕೆ ಎನ್ ಗಂಗಾಧರ ಆಳ್ವರವರು ಮಾ. 2 ರಂದು ಸೇವಾ ನಿವೃತ್ತಿ ಹೊಂದಲಿದ್ದು, ಇದರ ಪ್ರಯುಕ್ತ  ಬೀಳ್ಕೊಡುಗೆ  ಸಮಾರಂಭ  ತುಂಬೆ  ಪದವಿ ಪೂರ್ವ ಕಾಲೇಜಿನಲ್ಲಿ ಅಪರಾಹ್ನ 3.30ರಿಂದ ಜರಗಲಿದೆ. ಕೆ.ಎನ್.ಗಂಗಾಧರ ಆಳ್ವರು ತನ್ನ ಶಾಲಾ ದಿನಗಳಿಂದಲೇ ಪಾಠ- ಪಾಠೇತರ ಚಟುವಟಿಕೆಗಳಲ್ಲಿ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದವರು.

ಪದವಿ ಶಿಕ್ಷಣ ಓದುತ್ತಿದ್ದಾಗ ಅಂತಿಮ ವರ್ಷದ ಬಿ.ಎ.ಯಲ್ಲಿ ಪುತ್ತೂರು ತಾಲೂಕಿಗೇ ಪ್ರಥಮ ಸ್ಥಾನ,ವಿಶ್ವ ವಿದ್ಯಾಲಯದಲ್ಲಿ ಎಂ.ಎ ಅರ್ಥಶಾಸ್ತ್ರದಲ್ಲಿ ಮೂರನೇ ರ‍್ಯಾಂಕ್ ನೊಂದಿಗೆ ಯಶಸ್ವಿಯಾಗಿ ಪೂರೈಸಿದ ತರುವಾಯ ಬೇರೆ ಬೇರೆ ಪದವಿ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ  1992 ರಿಂದ ತುಂಬೆ ಪದವಿ ಪೂರ್ವ ಕಾಲೇಜಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿ ನಿಯುಕ್ತರಾದರು. 1995 ರಲ್ಲಿ ಇದೇ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಪದೋನ್ನತಿ ಪಡೆದರು.

ಇವರು ದಕ್ಷಿಣ ಕನ್ನಡ ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾಗಿ, ವಿಟ್ಲ ಅಧ್ಯಾಪಕರ ಸಂಘದ ನಿರ್ದೇಶಕರಾಗಿ,ಶೈಕ್ಷಣಿಕ ಕ್ಷೇತ್ರದಲ್ಲಿ ಶಿಕ್ಷಕರ ಅನೇಕ ಬೇಡಿಕೆಗಳಿಗೆ ಹೋರಾಟ ನಡೆಸಿ,ಶಿಕ್ಷಣ ಹಾಗೂ ಸಾಮಾಜಿಕ ವಿಷಯಗಳಲ್ಲಿ ರಾಜ್ಯ ಮಟ್ಟದ ಹಲವಾರು ಗೋಷ್ಠಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ

ಓರ್ವ ಕ್ರಿಯಾಶೀಲ ಉಪನ್ಯಾಸಕ ಹಾಗೂ ಪ್ರಾಂಶುಪಾಲರಾಗಿರುವ ಕೆ.ಎನ್.ಗಂಗಾಧರ ಆಳ್ವರಿಗೆ  ಕರ್ನಾಟಕ ಸರಕಾರದ ವತಿಯಿಂದ ಉತ್ತಮ ಪ್ರಾಂಶುಪಾಲ ಪ್ರಶಸ್ತಿ ದೊರೆತಿದೆ.

LEAVE A REPLY

Please enter your comment!
Please enter your name here