ರಾಮನಗರ ಹೊಸಮನೆ ದಿ.ರಮೇಶ ಗೌಡರ ಶ್ರದ್ಧಾಂಜಲಿ ಸಭೆ

0

ನೆಲ್ಯಾಡಿ: ಗ್ರಾಮದ ರಾಮನಗರ ಹೊಸಮನೆ ದಿ. ರಮೇಶ ಗೌಡರ ಉತ್ತರಕ್ರಿಯೆ ಮತ್ತು ಶ್ರದ್ಧಾಂಜಲಿ ಸಭೆ ಹೊಸಮನೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಂಸ್ಮರಣ ನುಡಿಗಳನ್ನಾಡಿದ ನೆಲ್ಯಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಗಂಗಾಧರ ಶೆಟ್ಟಿಯವರು, ಸಣ್ಣ ಪ್ರಾಯದಲ್ಲಿ ಆಕಸ್ಮಿಕ ಮರಣವನ್ನಪ್ಪಿದ ರಮೇಶ ಗೌಡರವರು ಒಬ್ಬ ನಿಷ್ಠಾವಂತ ಪ್ರಾಮಾಣಿಕ ವ್ಯಕ್ತಿಯಾಗಿದ್ದರು. ಅತ್ಯುತ್ತಮ ಜೀಪು ಚಾಲಕನಾಗಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಶ್ರೀರಾಮ ಶಿಕ್ಷಣ ಸಂಸ್ಥೆಯ ಬಸ್ಸಿನಲ್ಲಿ ಚಾಲಕರಾಗಿ ಸೇವೆಯನ್ನು ಸಲ್ಲಿಸಿದ್ದರು. ಅವರ ಅಕಾಲಿಕ ಮರಣದ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತ ಅನುಗ್ರಹಿಸಲಿ. ರಮೇಶ ಗೌಡರ ಆತ್ಮ ಹರಿಪಾದಕ್ಕೆ ಸೇರಲಿ. ಅವರ ಹೆಸರು ನಮ್ಮ ಊರಿನಲ್ಲಿ ಶಾಶ್ವತವಾಗಿ ಉಳಿಯಲಿ ಎಂದು ಹೇಳಿ ಶ್ರದ್ಧಾಂಜಲಿ ಅರ್ಪಿಸಿದರು.


ಸಮುದಾಯದ ಹಿರಿಯರಾದ ಕಾನಮನೆ ಜನಾರ್ದನ ಗೌಡ, ಗುರಿಕಾರರಾದ ಮಕ್ಕಿಗದ್ದೆ ಮೋಹನ್ ಗೌಡ, ಜಾಲ್ಮನೆ ಕೊರಗಪ್ಪ ಗೌಡ, ನೆಲ್ಯಾಡಿ ಗ್ರಾ.ಪಂ.ಸದಸ್ಯ ರವಿಪ್ರಸಾದ್ ಶೆಟ್ಟಿ ರಾಮನಗರ, ಕೌಕ್ರಾಡಿ ಗ್ರಾ.ಪಂ.ಸದಸ್ಯ ಉದಯಕುಮಾರ್ ದೋಂತಿಲ, ಶಾಸ್ತಾರೇಶ್ವರ ದೇವಸ್ಥಾನದ ಅಧ್ಯಕ್ಷ ಸುಂದರ ಗೌಡ ಅತ್ರಿಜಾಲು, ಶ್ರೀ ರಾಜನ್ ದೈವ ಸೇವಾ ಸಮಿತಿ ದೈವಗಿರಿ ಇದರ ಅಧ್ಯಕ್ಷ ಸತೀಶ್ಚಂದ್ರ ಗೌಡ ಅತ್ರಿಜಾಲು, ಧಾರ್ಮಿಕ ಮುಖಂಡ ಧನಂಜಯ ಗೌಡ ಕೊಡಂಗೆ, ಶ್ರೀ ವಿನಾಯಕ ಭಜನಾ ಮಂಡಳಿ ರಾಮನಗರ ಇದರ ಅಧ್ಯಕ್ಷ ಚಂದ್ರಶೇಖರ ರೈ, ರಾಮನಗರ ವಿನಾಯಕ ಭಜನಾ ಮಂಡಳಿಯ ಮಾಜಿ ಅಧ್ಯಕ್ಷ ಅಮ್ಮಿ ಗೌಡ ನಾಲ್ಗುತ್ತು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಮ್ಮಿ ಪೂಜಾರಿ ಬೊಮ್ಮಿದಡ್ಡ, ಪ್ರಗತಿಪರ ಕೃಷಿಕ ರಮೇಶ್ ಗೌಡ ನಾಲ್ಗುತ್ತು, ಶಾಸ್ತಾರೇಶ್ವರ ದೇವಸ್ಥಾನದ ಕೋಶಾಧಿಕಾರಿ ಸೀತಾರಾಮ ಗೌಡ ಕಾನಮನೆ, ಗ್ರಾಮಾಭಿವೃದ್ಧಿ ಯೋಜನೆ ಪುತ್ತೂರು ಮತ್ತು ಕಡಬ ತಾಲೂಕು ಕೇಂದ್ರ ಒಕ್ಕೂಟದ ಮಾಜಿ ಅಧ್ಯಕ್ಷ ಬಾಲಕೃಷ್ಣ ಗೌಡ ಹಾರ್ಪಳ, ಗಣ್ಯರಾದ ನಾರಾಯಣ ಗೌಡ ಹಾರ್ಪಳ, ಸಂಜೀವ ಗೌಡ ಹಾರ್ಪಳ, ದಿನೇಶ್ ಗೌಡ ಕೌಕ್ರಾಡಿ ಹೊಸಮನೆ, ರವಿಚಂದ್ರ ಗೌಡ ಅತ್ರಿಜಾಲು, ಪುಷ್ಪರಾಜ ಗೌಡ ಕೊಡಂಗೆ, ಶೀನಪ್ಪ ಗೌಡ ಬರೆಮೇಲು ಸಹಿತ ಅನೇಕ ಮಂದಿ ಭಾಗವಹಿಸಿದ್ದರು. ಮೃತರ ದೊಡ್ಡಪ್ಪನ ಮಗ ಉಮೇಶ ಗೌಡ ವಂದಿಸಿದರು.

LEAVE A REPLY

Please enter your comment!
Please enter your name here