ಪುಣಚ ಮಹಿಷಮರ್ದಿನಿ ದೇವಿ ಭಜನಾ ಮಂಡಳಿಯ ಭಜನಾ ವಾರ್ಷಿಕೋತ್ಸವ – ಭಜನಾ ಕಾರ್ಯಕ್ರಮಕ್ಕೆ ಚಾಲನೆ

0

ಪುಣಚ: ಪುಣಚ ಮಹಿಷಮರ್ದಿನಿ ದೇವಿ ಭಜನಾ ಮಂಡಳಿಯ 42ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ವರ್ಕಾಡಿ ಗಣೇಶ ತಂತ್ರಿಯವರ ಮಾರ್ಗದರ್ಶನದಲ್ಲಿ ಭಜನಾ ಕಾರ್ಯಕ್ರಮವು ಮಾ.1ರಂದು ಪುಣಚ ಮಹಿಷಮರ್ದಿನಿ ದೇವಸ್ಥಾನದಲ್ಲಿ ಆರಂಭಗೊಂಡಿತು.


ಬೆಳಿಗ್ಗೆ ಕ್ಷೇತ್ರದ ಪ್ರಧಾನ‌ ಅರ್ಚಕ ಕೃಷ್ಣ ಬನ್ನಿಂತಾಯರ ಪ್ರಾರ್ಥನೆಯೊಂದಿಗೆ ಭಜನಾ ಮಂಡಳಿಯ ಮಾಜಿ ಅಧ್ಯಕ್ಷ ಶ್ರೀಧರ್ ಶೆಟ್ಟಿ ಬೈಲುಗುತ್ತು ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ದೇವಸ್ಥಾನದ ಆಡಳಿತ ಸಮಿತಿ ಉಪಾಧ್ಯಕ್ಷ ಮಾರಪ್ಪ ಶೆಟ್ಟಿ ಬೈಲುಗುತ್ತು, ಭಜನಾ ಮಂಡಳಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ವಿವಿಧ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ಆರಂಭಗೊಂಡಿತು.

LEAVE A REPLY

Please enter your comment!
Please enter your name here