ನಿಡ್ಪಳ್ಳಿ: ರೆಂಜ ಮುಡಿಪುನಡ್ಕ ಲೋಕೋಪಯೋಗಿ ರಸ್ತೆಯಲ್ಲಿ ಕೂಟೇಲಿನಿಂದ ಕುಕ್ಕುಪುಣಿವರೆಗೆ ರಸ್ತೆ ಸಂಪೂರ್ಣ ಧೂಳಿನಿಂದ ಕೂಡಿದ್ದು ಸಾರ್ವಜನಿಕರಿಗೆ ನರಕ ಯಾತನೆ ಉಂಟಾಗಿದೆ.
ಇತ್ತೀಚೆಗೆ ಈ ರಸ್ತೆಯ ಬದಿ ಗುಂಡಿಗಳಿಗೆ ಮಣ್ಣು ಹಾಕಿದ ಪರಿಣಾಮ ರಸ್ತೆ ಸಂಪೂರ್ಣ ಧೂಳುಮಯವಾಗಿದ್ದು ಜನರ ಸಂಚಾರಕ್ಕೆ ಬಹಳ ತೊಂದರೆ ಉಂಟಾಗಿದೆ.ದೊಡ್ಡ ಗಾತ್ರದ ವಾಹನಗಳು ಚಲಿಸುವಾಗ ದ್ವಿಚಕ್ರ ವಾಹನ ಸವಾರರು ಮತ್ತು ಪಾದಾಚಾರಿಗಳು ಧೂಳಿನಿಂದ ಮುಳುಗುತ್ತಾರೆ. ಸುತ್ತಮುತ್ತಲಿನ ಮನೆ, ಕಟ್ಟಡಗಳಿಗೂ ಧೂಳು ನುಗ್ಗಿ ಅವರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈಗಾಗಲೇ ಮುಡಿಪುನಡ್ಕದಿಂದ ಕುಕ್ಕುಪುಣಿವರೆಗೆ ರಸ್ತೆ ಅಭಿವೃದ್ಧಿಯಾಗಿದ್ದು ಅಲ್ಲಿಂದ ಕೂಟೇಲುವರೆಗೆ ರಸ್ತೆ ಅಭಿವೃದ್ಧಿಗೆ ಬಾಕಿ ಉಳಿದಿದೆ. ಕೂಟೇಲು ಸೇತುವೆ ನಿರ್ಮಾಣವಾದ ನಂತರ ಉಳಿದ ರಸ್ತೆ ಅಗಲಗೊಳಿಸಿ ಅಭಿವೃದ್ಧಿಗೊಳಿಸಲಾಗುವುದೆಂದು ಹೇಳಲಾಗಿತ್ತು. ಮಾಜಿ ಶಾಸಕ ಸಂಜೀವ ಮಠಂದೂರುರವರ ಅನುದಾನದಲ್ಲಿ ಸೇತುವೆ ನಿರ್ಮಾಣ ಆಗಿದ್ದು ನಂತರ ಅಭಿವೃದ್ಧಿ ಕೆಲಸ ಕುಂಠಿತ ಗೊಂಡಿದೆ.
ಎರಡು ತಿರುವುಗಳು ಅಪಾಯಕಾರಿ- ಈ ರಸ್ತೆಯಲ್ಲಿ ಕೂಟೇಲು ಮತ್ತು ಕುಕ್ಕುಪುಣಿ ಎಂಬಲ್ಲಿ ಎರಡು ತಿರುವುಗಳು ಬಹಳ ಅಪಾಯಕಾರಿಯಾಗಿದೆ. ಮುಂದೆ ರಸ್ತೆ ಅಗಲ ಗೊಳಿಸಿ ಅಭಿವೃದ್ಧಿ ಪಡಿಸುವಾಗ ಈ ಎರಡು ತಿರುವುಗಳನ್ನು ನೇರ ಗೊಳಿಸದಿದ್ದರೆ ಅಲ್ಲಿ ಇನ್ನಷ್ಟು ಅನಾಹುತ ನಡೆಯುವ ಸಾಧ್ಯತೆ ಇದೆ. ಆದುದರಿಂದ ಅದನ್ನು ಸರಿ ಪಡಿಸಬೇಕು. ಅಲ್ಲಿ ರಸ್ತೆಗಳು ಕಿರಿದಾಗಿದ್ದು ಒಂದು ಬದಿ ಗುಂಡಿ ಮತ್ತೊಂದು ಬದಿ ಮರ, ವಿದ್ಯುತ್ ಕಂಬಗಳು ತೊಂದರೆ ಕೊಡುತ್ತಿದ್ದು ಆದಷ್ಟು ಬೇಗ ಇಲ್ಲಿ ಜನರ ಬವಣೆ ತಪ್ಪಿಸಲು ಸಂಬಂಽಸಿದ ಇಲಾಖೆ ಸ್ಪಂದಿಸ ಬೇಕು ಎಂದು ಈ ಭಾಗದ ಜನರ ಬೇಡಿಕೆಯಾಗಿದೆ.ಮಳೆಗಾಲದ ಮೊದಲು ಅಭಿವೃದ್ಧಿ ಆಗದಿದ್ದರೆ ಬಹಳ ಸಮಸ್ಯೆ ಎದುರಾಗಬಹುದು. ಇಷ್ಟೆಲ್ಲಾ ಸಮಸ್ಯೆ ಆಗುತ್ತಿದ್ದರೂ ಅಽಕಾರಿಗಳು ಮತ್ತು ಜನಪ್ರತಿನಿಽಗಳು ಕಣ್ಣುಮುಚ್ಚಿ ಕುಳಿತಿರುವುದರ ಬಗ್ಗೆ ಜನರು ಹಿಡಿಶಾಪ ಹಾಕುತ್ತಿದ್ದಾರೆ.