ಕುಂಬ್ರ: ಗ್ರಾಮಾಭಿವೃದ್ಧಿ ಯೋಜನೆಯ ಕುಂಬ್ರ ಕಾರ್ಯಕ್ಷೇತ್ರದ ಕಛೇರಿ ಆರಂಭ

0

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುಂಬ್ರ ಕಾರ್ಯಕ್ಷೇತ್ರದ ಕಛೇರಿಯು ಸ್ಥಳಾಂತರಗೊಂಡು ಫೆ.29 ರಂದು ಕುಂಬ್ರ ಬ್ಯಾಂಕ್ ಆಫ್ ಬರೋಡ ಸಮೀಪದ ಫ್ಯಾಮಿಲಿ ಕಾಂಪ್ಲೆಕ್ಸ್‌ನ ಪ್ರಥಮ ಮಹಡಿಯಲ್ಲಿ ಶುಭಾರಂಭಗೊಂಡಿತು. ಪುರೋಹಿತರಾದ ರವಿರಾಮ ಭಟ್ ಜಮಧಗ್ನಿ ಗಣಹೋಮದೊಂದಿಗೆ ವೈಧಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಶಶಿಧರ್ ಎಮ್.ರವರು ರಿಬ್ಬನ್ ಕತ್ತರಿಸಿ ಶುಭಹಾರೈಸಿದರು. ಕುಂಬ್ರ ವಲಯಾಧ್ಯಕ್ಷ ಎಸ್ ಮಾಧವ ರೈ ಕುಂಬ್ರರವರು ದೀಪ ಬೆಳಗಿಸಿ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಲಲಿತ ಮತ್ತು ಶ್ರೀಧರ ಗೌಡ ಬೊಳ್ಳಾಡಿ, ಜನಜಾಗೃತಿ ವಲಯಾಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ, ಜನಜಾಗೃತಿ ಗ್ರಾಮ ಸಮಿತಿ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ, ಕುಂಬ್ರ ವಲಯದ ಮೇಲ್ವಿಚಾರಕ ಜಯಂತಿ ಕೆ, ಕೆದಂಬಾಡಿ ವಲಯದ ಮೇಲ್ವಿಚಾರಕಿ ಶುಭಾವತಿ ಪಿ ಸಿ, ಯುವರಾಜ್ ಶೆಟ್ಟಿ ಮೇರ್ಲ, ಫ್ಯಾಮಿಲಿ ಕಾಂಪ್ಲೆಕ್ಸ್ ಕಟ್ಟಡ ಮಾಲಕ ವೈ.ಕೆ ಸುಲೈಮಾನ್ ಇಂದ್ರಾಜೆ, ತಾರಾನಾಥ ಶೆಟ್ಟಿ ಮುಡಾಳ, ಪ್ರವೀಣ್ ಪಲ್ಲತ್ತಾರು, ಗೋವಿಂದ ನಾಯ್ಕ್ ಗುರಿಕುಮೆರ್, ಯತೀಶ್ ಗೌಡ ತ್ಯಾಗರಾಜೆ, ಕೆ ರಾಜೀವಿ ಕುಂಬ್ರ ಮತ್ತಿತರರು ಉಪಸ್ಥಿತರಿದ್ದರು. ಸೇವಾಪ್ರತಿನಿಧಿ ರಜನಿ ಸ್ವಾಗತಿಸಿ, ನಳಿನಾಕ್ಷಿ ವಂದಿಸಿದರು. ಸೇವಾಪ್ರತಿನಿಧಿಗಳಾದ ಶಶಿಕಲಾ ಪಿ, ಅಕ್ಷತಾ ರೈ ಜಾರಾತ್ತರು, ಸವಿತಾ ಶೇಖಮಲೆ, ಜಯಂತಿ, ವಿಶಾಲಾಕ್ಷಿ, ಉಷಾ ಎಸ್ ಆಳ್ವ, ವಿ ಎಲ್ ಇ ಸಂದ್ಯಾ, ಸುವಿಧಾ ಸಹಾಯಕಿ ತುಳಸಿ,ರೇವತಿ ರೈ ಕುಂಬ್ರ , ಧನಂಜಯ ರೈ ಪಾಲ್ಗುಣಿ ಸಹಕರಿಸಿದ್ದರು.

LEAVE A REPLY

Please enter your comment!
Please enter your name here