ಮಾ.2 ನರಿಮೊಗರು, ಪೊಸಮೆನ್ಪದವುನಲ್ಲಿ ಮಾ.3ರಂದು ಮಂಜಲ್ಪಡ್ಪು ಸುದಾನದಲ್ಲಿ ಸಂಸಾರ ಕಲಾವಿದೆರ್ ತಂಡದಿಂದ ‘ನಂಬಿಕೆದಾಯೆ’ ತುಳು ನಾಟಕ ಪ್ರದರ್ಶನ

0

ಪುತ್ತೂರು: ಕಳೆದ 19 ವರ್ಷಗಳಿಂದ ತುಳು ರಂಗಭೂಮಿಯಲ್ಲಿ ಬದ್ಕ್ಯರೆ ಕಲ್ಪಿ ನಾಟಕದ ಮೂಲಕ ಖ್ಯಾತಿ ಪಡೆದಿರುವ ಸಂಸಾರ ಕಲಾವಿದೆರ್, ಪುತ್ತೂರು ಇವರ 14 ನೇ ಕಲಾ ಕಾಣಿಕೆ ತುಳು ಭಕ್ತಿಪ್ರದಾನ, ಸಾಮಾಜಿಕ ಹಾಸ್ಯ ನಾಟಕ ‘ನಂಬಿಕೆದಾಯೆ’ ಮಾ.2 ರಂದು ಶ್ರೀ ಕಲ್ಕುಡ ಕಲ್ಲುರ್ಟಿ ದೈವಸ್ಥಾನದ ನೇಮೋತ್ಸವದ ಸಾಂಸ್ಕ್ರತಿಕ ಕಾರ್ಯಕ್ರಮದ ಸಲುವಾಗಿ ರಾತ್ರಿ 10 ಗಂಟೆಗೆ ಮತ್ತು ಮಾ.3ರಂದು ತುಳು ಕೂಟ ಪುತ್ತೂರು ವತಿಯಿಂದ ನಡೆಯುವ ಪುತ್ತೂರು ತಾಲೂಕು ತುಳು ಮೇಳದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಂಜಲ್ಪಡ್ಪು ಸುದಾನ ಶಾಲೆಯ ಎಡ್ವರ್ಡ್ ಸಭಾಂಗಣದಲ್ಲಿ ರಾತ್ರಿ 8 ಗಂಟೆಗೆ ರ್ಪ್ರದರ್ಶನಗೊಳ್ಳಲಿದೆ.


ನಾಗೇಶ್ ಬಲ್ನಾಡು ಇವರ ಶೀರ್ಷಿಕೆ ಮತ್ತು ಕಥೆಗೆ ’ರಂಗಚಾಣಕ್ಯ’ ರಾಘವೇಂದ್ರ ಕಾರಂತ್ ಮೊಗರ್ನಾಡು ಸಾಹಿತ್ಯ ಮತ್ತು ಸಂಭಾಷಣೆ ಬರೆದಿದ್ದಾರೆ. ತಂಗವೇಲು ಕೊಯ್ಲ ಮತ್ತು ಸುಧಾಕರ್ ಬೆದ್ರ ಸಂಗೀತ ನೀಡಲಿದ್ದಾರೆ. ಸಂಗಮ್ ಡ್ಯಾನ್ಸ್ ಅಕಾಡೆಮಿ ಮ್ಹಾಲಕ ಪ್ರಶಾಂತ್ ನೇರಳಕಟ್ಟೆ ಇವರ ಸಂಪೂರ್ಣ ಸಹಕಾರವಿದ್ದು, ರಂಗಾಲಂಕಾರ ಮೇಧಾವಿ ಮೊಡ೦ತ್ಯಾರ್, ವರ್ಣಾಲಂಕಾರ ಭಾಸ್ಕರ್ ಆಚಾರ್ಯ ಕಡೆಶಿವಾಲಯ ಮಾಡಲಿದ್ದಾರೆ. ಅಕ್ಷಯ್ ಕೆಮ್ಮಾಯಿ ಮತ್ತು ಗಣರಾಜ್ ಭಂಡಾರಿ ನಿರ್ವಹಣೆಯಲ್ಲಿ ಕಲಾವಿದರುಗಳಾಗಿ ಬಾಲಕೃಷ್ಣ ಗೌಡ ಅನುಗ್ರಹ ಪೋಳ್ಯ, ಮೇಧಾವಿ ಕುಲಾಲ್ ಮೊಡ೦ತ್ಯಾರ್, ಕೆ. ಟಿ. ಆನಂದ ವಿಟ್ಲ, ರಾಮಕೃಷ್ಣ ಪಾಟಾಲಿ ಪಡುಮಲೆ, ಅಣ್ಣಿ ಪೂಜಾರಿ ಅನಂತಿಮಾರ್, ’ವೈರಲ್ ಸ್ಟಾರ್’ ಗಣರಾಜ್ ಭಂಡಾರಿ ಪುತ್ತೂರು, ಅಕ್ಷಯ್ ನ್ಯಾಕ್ ಕೆಮ್ಮಾಯಿ, ’ತುಳುನಾಡ ಕಲ್ಪವೃಕ್ಷ’ ಜೈದೀಪ್ ರೈ ಕೋರಂಗ, ರಕ್ಷಿತ್ ರೈ ತೊಟ್ಲ, ಗಂಗಾಧರ್ ನಾಯ್ಕ ಕೌಡಿಚ್ಚಾರು, ಮೋಹಿನಿ ಯಾದವ್ ಈಶ್ವರಮಂಗಲ, ಬಿ.ಕೆ. ಶ್ರೀಧರ ಪೂಜಾರಿ ಕಲ್ಲೇಗ, ರಂಜಿತ್ ಶೆಟ್ಟಿ ದೇವಸ್ಯ, ಅಕ್ಷೇತ ಮಾಪಳ, ಪ್ರಿಯಶ್ರೀ ಸಾಲ್ಯಾನ್ ಮತ್ತು ಅಖಿಲೇಶ್ ಶೆಟ್ಟಿ ಅಭಿನಯಿಸಲಿದ್ದಾರೆ ಎಂದು ತಂಡದ ಸಂಚಾಲಕ ಬಾಲಕೃಷ್ಣ ಗೌಡ ಪೋಳ್ಯ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here