ಪುತ್ತೂರು: ಸುದಾನ ವಸತಿ ಶಾಲೆಯಲ್ಲಿ ಫೆ.28ರಂದು ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ವಿಜ್ಞಾನ ಸಂಘದ ಸದಸ್ಯೆ ಅಝ ಫಾತಿಮಾ ಎಸ್ (9ನೇ) ವಿಜ್ಞಾನ ದಿನದ ಮಹತ್ವವನ್ನು ತಿಳಿಸುತ್ತಾ ‘ಸರ್ ಸಿ.ವಿ ರಾಮನ್ ರವರ ಬದುಕು – ಬರೆಹದ ಬಗೆಗೆ ವಿವರಿಸಿದರು. ಪ್ರತಿಯೊಬ್ಬ ವಿದ್ಯಾರ್ಥಿಯೂ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳುವ ಮೂಲಕ ದೇಶದ ಅಭಿವೃದ್ಧಿಗೆ ಕಾರಣರಾಗಬೇಕು ಎಂದು ನುಡಿದರು.
ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ವಯ ಮಕ್ಕಳು ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿದರು. ಜಿ ಧನ್ವಿಕ (9ನೇ) ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಶಾಲೆಯ ವಿಜ್ಞಾನ ಸಂಘ ‘ಅವನಿ’ ಯು ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.