ಬಡಗನ್ನೂರು: ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವರ ಮತ್ತು ಸಪರಿವಾರ ದೇವರುಗಳ ಪ್ರತಿಷ್ಠಾ ವರ್ಧಂತಿ ಉತ್ಸವವು ಮಾ.2 ರಂದು ನಡೆಯಿತು.ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ವಾಸುದೇವ ತಂತ್ರಿಯವರ ನೇತೃತ್ವದಲ್ಲಿ ಧಾರ್ಮಿಕ ಪೂಜಾ ವಿಧಿ ವಿಧಾನಗಳು ನೆರವೇರಿತು.
ಮಾ.2 ರಂದು 12 ತೆಂಗಿನಕಾಯಿ ಗಣಪತಿ ಹೋಮ, ಶ್ರೀ ಗಣಪತಿ ದೇವರಿಗೆ ದೂರ್ವಾರ್ಚನೆ, ಗಣಹೋಮದ ಪೂರ್ಣಾಹುತಿ, ಶ್ರೀ ದೇವರಿಗೆ ಲಕ್ಷಾರ್ಚನೆ, ಶ್ರೀ ಶಾಸ್ತಾರ ದೇವರಿಗೆ ಬಿಲ್ವಾರ್ಚನೆ ಮತ್ತು ರುದ್ರಪಾರಾಯಣ, ಶ್ರೀ ನಾಗದೇವರಿಗೆ ಸೀಯಾಳಾಭಿಷೇಕ ಮತ್ತು ತಂಬಿಲ ಸೇವೆ,ಲಕ್ಷಾರ್ಚನೆಯ ಮಹಾಮಂಗಳಾರತಿ, ನವಕಾಭಿಷೇಕ, ಶ್ರೀ ರಾಜೇಶ್ವರೀ ದೇವಿಗೆ ಅಭಿಷೇಕ ಮತ್ತು ಅಲಂಕಾರ ಪೂಜೆ, ಮಹಾಪೂಜೆಯ ಬಳಿಕ ಮಹಾಮಂಗಳಾರತಿ, ಪ್ರಸಾದ ವಿತರಣೆ,ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಪವಿತ್ರಪಾಣಿ ಕೇಶವ ಭಟ್ ಕೂವೆತೋಟ, ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಮನೋಜ್ ರೈ ಪೇರಾಲು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಭಟ್ ಸಿ.ಹೆಚ್, ಪ್ರತಿಷ್ಠಾ ವರ್ಧಂತಿ ಉತ್ಸವ ಸಮಿತಿ ಅಧ್ಯಕ್ಷ ಮನೋಹರ ರೈ ಮೇಗಿನಮನೆ, ಕಾರ್ಯದರ್ಶಿ ಪದ್ಮನಾಭ ರೈ ಅರೆಪ್ಪಾಡಿ,ಗೌರವಾಧ್ಯಕ್ಷ , ರಾಮಕೃಷ್ಣ ಭಟ್ ಚಂದುಕೂಡ್ಲು ಉಪಾಧ್ಯಕ್ಷ ಕೃಷ್ಣ ಪ್ರಸಾದ್ ರೈ ಪಡುಮಲೆ, ಕೋಶಾಧಿಕಾರಿ ರಾಜೇಶ್ ಸುಳ್ಯಪದವು, ಸಂಚಾಲಕರಾದ ಲಿಂಗಪ್ಪ ಗೌಡ ಮೋಡಿಕೆ, ಗಂಗಾಧರ ರೈ ಮೇಗಿನಮನೆ, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸತೀಶ್ ರೈ ಕಟ್ಟಾವು,ಸದಸ್ಯರುಗಳಾದ, ಚಂದ್ರಶೇಖರ ಆಳ್ವ ಗಿರಿಮನೆ, ಚಂದ್ರಶೇಖರ ಭಂಡಾರಿ ಕಂಬಳ ನಳಿಕೆಮಜಲು, ಸತೀಶ್ ಕುಲಾಲ್ ಸಣಗೋಲು, ರಘುರಾಮ ಪಾಟಾಳಿ ಶರವು, ಸುರೇಶ್ ರೈ ಪಳ್ಳತ್ತಾರು, ಉಲ್ಲಾಸ್ ಭಟ್ ಪಡ್ಪು, ಜನಾರ್ದನ ಪೂಜಾರಿ ಪದಡ್ಕ, ರಾಜೇಶ್ ರೈ ಮೇಗಿನಮನೆ, ಹಾಗೂ ಸಮಿತಿ ಸದಸ್ಯರು ,ಭಕ್ತರು ಭಾಗವಹಿಸಿದ್ದರು.