ಪುತ್ತೂರು: ಕೊಂಬೆಟ್ಟು ಸ ಪ ಪೂ ಕಾಲೇಜಿನ ಪ್ರೌಢ ವಿಭಾಗದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ವಿಶೇಷ ರಾತ್ರಿ ಶಾಲೆಯು ಮಾ.1ರಿಂದ ಪ್ರಾರಂಭಗೊಂಡಿತು.
ಎಸ್.ಎಸ್.ಎಲ್.ಸಿ ಪರೀಕ್ಷೆಯ ತಾಲೂಕು ನೋಡೆಲ್ ಅಧಿಕಾರಿ ಹರಿಪ್ರಸಾದ್ ಭೇಟಿ ನೀಡಿ ಮಕ್ಕಳಿಗೆ ಪ್ರೇರಣಾತ್ಮಕ ಮಾತುಗಳನ್ನಾಡಿದರು. ಉಪ ಪ್ರಾಂಶುಪಾಲ ವಸಂತ ಮೂಲ್ಯ ಉಪಸ್ಥಿತರಿದ್ದು ರಾತ್ರಿ ಶಾಲೆಗೆ ಪೂರಕ ಸೌಲಭ್ಯಗಳನ್ನು ನಿರ್ವಹಿಸಿರುತ್ತಾರೆ. ಎಸ್.ಡಿ.ಎಂಸಿ ಕಾರ್ಯಧ್ಯಕ್ಷ ಜೋಕಿಮ್ ಡಿಸೋಜಾ, ಸದಸ್ಯ ಸುರೇಶ, ಜಯಪ್ರಕಾಶ್, ಪ್ರಶಾಂತ್ ಮರಿಕೆ ಉಪಸ್ಥಿತರಿದ್ದು ಸಹಕರಿಸಿರುತ್ತಾರೆ. ಸಮಾಜ ವಿಜ್ಞಾನ ಶಿಕ್ಷಕಿಯರಾದ ಮರ್ಸಿ ಮಮತಾ ಮೋನಿಸ್, ಯುಜಿನ ಉಪಸ್ಥಿತರಿದ್ದು ಮಕ್ಕಳಿಗೆ ವಿಶೇಷ ತರಗತಿಗಳನ್ನು ನೀಡಿದರು.
ಎಸ್.ಡಿ.ಎಂಸಿಯಿಂದ ಸೆಕ್ಯೂರಿಟಿ ಗಾರ್ಡ್ ವ್ಯವಸ್ಥೆ ಒದಗಿಸಿದ್ದರು. ಈ ಮೂಲಕ ತಾಲೂಕು ಕೇಂದ್ರ ಶಾಲೆಯಲ್ಲಿ ರಾತ್ರಿ ಶಾಲೆ ಪ್ರಾರಂಭಿಸಿ ವಿದ್ಯಾರ್ಥಿಗಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸುವ ಮೂಲಕ ಕೊಂಬೆಟ್ಟು ಪ್ರೌಢಶಾಲೆಯು ತಾಲೂಕಿನ ಇತರ ಶಾಲೆಗಳಿಗೆ ಮಾದರಿಯಾಗಿದೆ. ಕಳೆದ ವರ್ಷದ ಪರೀಕ್ಷೆಯಲ್ಲಿ ಶೇ.80 ಫಲಿತಾಂಶ ಬಂದಿರುವುದು ಗರಿಷ್ಟ ಫಲಿತಾಂಶ ಲಭಿಸಿದೆ. ಈ ವರ್ಷದಲ್ಲಿ ಎಲ್ಲಾ ಮಕ್ಕಳೂ ಉತ್ತೀರ್ಣರಾಗಲು ಬೇಕಾದ ಗರಿಷ್ಟ ಪ್ರಯತ್ನವನ್ನು ಮಾಡಲಾಗುತ್ತಿದೆ.