ಮೊಟ್ಟೆತ್ತಡ್ಕ-ಮಿಶನ್‌ಮೂಲೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಜೀರ್ಣೋದ್ಧಾರದ ಬಗ್ಗೆ ಪರಿಹಾರ ಕಾರ್ಯಕ್ರಮಗಳು

0

ಪುತ್ತೂರು: ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ-ಮಿಶನ್‌ಮೂಲೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಜೀರ್ಣೋದ್ಧಾರದ ಬಗ್ಗೆ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದ ದೋಷಗಳ ಪರಿಹಾರ ಕಾರ್ಯಕ್ರಮಗಳ ಬಗ್ಗೆ ವೈದಿಕ ಕಾರ್ಯಕ್ರಮಗಳು ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ್ ತಂತ್ರಿಗಳ ನೇತೃತ್ವದಲ್ಲಿ ಫೆ.25 ರಿಂದ 29ರ ವರೆಗೆ ನೆರವೇರಿತು.

ಆ ಪ್ರಯುಕ್ತ ದೇವಸ್ಥಾನದಲ್ಲಿ ಫೆ.25ರಂದು ಬೆಳಿಗ್ಗೆ ಧಾರ್ಮಿಕ ವಿಧಾನಗಳೊಂದಿಗೆ ಸರ್ಪಸಂಸ್ಕಾರ ಪ್ರಾರಂಭಗೊಂಡಿತು. ಫೆ.28ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಆಚಾರ್ಯವರಣೆ, ಸ್ವಸ್ತಿ ಪುಣ್ಯಾಹವಾಚನ, ಸರ್ಪಸಂಸ್ಕಾರ, ಮಂಗಲಹೋಮ, ಆಶ್ಲೇಷಾಬಲಿ, ಅಷ್ಟವಟು ಆರಾಧನೆ, ನಾಗತಂಬಿಲ, ಮಂಗಳಾರತಿ, ಪ್ರಸಾದ ವಿತರಣೆ ಅನ್ನಸಂತರ್ಪಣೆ ಸಂಜೆ ಸ್ವಸ್ತಿ ಪುಣ್ಯಾಹವಾಚನ, ಮಹಾ ಸುದರ್ಶನ ಹೋಮ, ಪ್ರೇತಾವಾಹನೆ, ಬಾಧಾಕರ್ಷಣೆ, ಉಚ್ಚಾಟನೆ, ದುರ್ಗಾಪೂಜೆ, ಪ್ರಸಾದ ವಿತರಣೆ ನಡೆಯಿತು. ಫೆ.29ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ತಿಲಹೋಮ, ಪವಮಾನ ಹೋಮ, ಚಕ್ರಾಬ್ಜ ಮಂಡಲದಲ್ಲಿ ಸಾಯುಜ್ಯ ಪೂಜೆ, ದಂಪತಿ ಪೂಜೆ, ದ್ವಾದರಮೂರ್ತಿ ಬ್ರಾಹ್ಮಣ ಆರಾಧನೆ, ದೇವರಿಗೆ ಸಾನಿಧ್ಯ ಕಲಾಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ದಿ.ಮೋಹನ್ ರೈ ಮಿಶನ್ ಮೂಲೆರವರ ಪುತ್ರರಾದ ರಮೇಶ್ ರೈ ಮಿಶನ್ ಮೂಲೆ, ಸತೀಶ್ ರೈ ಮಿಶನ್ ಮೂಲೆ, ಅಧ್ಯಕ್ಷ ರಾಮ ಶೆಟ್ಟಿ, ಉಪಾಧ್ಯಕ್ಷ ಸಂತೋಷ್ ಕುಮಾರ್ ಕೆ ಹಾಗೂ ಸತೀಶ್ ಎಂ, ಕಾರ್ಯದರ್ಶಿ ಕೆ.ಬಿ ಶೇಖರ, ಜೊತೆ ಕಾರ್ಯದರ್ಶಿಗಳಾದ ಲಕ್ಷ್ಮಣ ಶೆಟ್ಟಿ, ಸಂತೋಷ್ ರೈ, ಸುಂದರ ಕೆ, ಕೋಶಾಧಿಕಾರಿ ಮೋಹನ್ ಕುಮಾರ್ ಡಿ, ಲೆಕ್ಕ ಪರಿಶೋಧಕ ಬಿ.ವಿಶ್ವನಾಥ ರೈ ಸಹಿತ ಹಲವರು ಭಕ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here