ಪುತ್ತೂರು: ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಪಂಚಲಿಂಗೇಶ್ವರ ದೇವರಿಗೆ ಸಂಭ್ರಮದ ಜಾತ್ರೋತ್ಸವ ಆರಂಭಗೊಂಡಿದೆ. ಮಾ.6 ರಿಂದ ಮಾ.13 ರ ತನಕ ವೈಭವದ ಜಾತ್ರೋತ್ಸವ ಹಾಗು ಶ್ರೀ ಕಿನ್ನಿಮಾಣಿ, ಶ್ರೀಪೂಮಾಣಿ , ಪಿಲಿಚಾಮುಂಡಿ ದೈವಗಳ ನೇಮೋತ್ಸವ ಅತ್ಯಂತ ವೈಭವದಿಂದ ಜರಗಲಿದೆ.
ಮಾ.5 ರಂದು ಬೆಳಿಗ್ಗೆ ಗಣಪತಿ ಹೋಮ, ಧ್ವಜಾರೋಹಣ, ಬಲಿವಾಡು ಕೂಟ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ, ದೇವರ ನಿತ್ಯಬಲಿ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ನಿತ್ಯಬಲಿ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ಮಾ.7ರಂದು ಬೆಳಿಗ್ಗೆ ಮೂಲಸ್ಥಾನವಾದ ಮೆಣಸಿನಕಾನದಲ್ಲಿ ತಂತ್ರಿವರ್ಯರಿಂಧ ಪೂಜೆ, ನಿತ್ಯಬಲಿ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ನಿತ್ಯಬಲಿ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ಮಾ.8ರಂದು ಬೆಳಿಗ್ಗೆ ನಿತ್ಯಬಲಿ, ಏಕಾದಶ ರುದ್ರಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಉತ್ಸವ ಬಲಿ, ಮಹಾಶಿವರಾತ್ರಿ ಮಹೋತ್ಸವ, ಸೂರ್ಯಾಸ್ತದಿಂದ ಪ್ರಾರಂಭಗೊಂಡು ಮರುದಿನ ಸೂರ್ಯೋದಯದ ತನಕ ಅರ್ಧ ಏಕಾಹ ಭಜನೆ ನಡೆಯಲಿದೆ.ಮಾ.9ರಂದು ಬೆಳಿಗ್ಗೆ ಉತ್ಸವ ಬಲಿ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಉತ್ಸವ ಬಲಿ, ಅನ್ನಸಂತರ್ಪಣೆ ನಡೆಯಲಿದೆ.
ಮಾ.10ರಂದು ಉತ್ಸವ ಬಲಿ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಉತ್ಸವ ಬಲಿ, ನಡುದೀಪೋತ್ಸವ, ಅನ್ನಸಂತರ್ಪಣೆ ನಡೆಯಲಿದೆ. ಮಾ.11 ರಂದು ಬೆಳಿಗ್ಗೆ ಮಹಾದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ ವಿತರಣೆ, ಮಧ್ಯಾಹ್ನ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಕುತ್ಯಾಳ ಶ್ರೀ ಮಹಾವಿಷ್ಣು ದೇವರ ಸನ್ನಿಧಿಗೆ ಶ್ರೀ ದೇವರ ಸವಾರಿ, ಕಟ್ಟೆಪೂಜೆ, ಮರಳಿ ಬಂದು ಶಯನೋತ್ಸವ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಮಾ.12ರಂದು ಬೆಳಿಗ್ಗೆ ಕವಾಟೋದ್ಘಾಟನೆ, ಸೀಯಾಳ ಅಭಿಷೇಕ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ ಉತ್ಸವ ಬಲಿ ಹೊರಟು ಅವಭೃತ ಸ್ನಾನಕ್ಕೆ ಸಸ್ಪೆಟ್ಟಿಗೆ ಶ್ರೀ ದೇವರ ಸವಾರಿ, ಕಟ್ಟೆಪೂಜೆ, ಅವಭೃತ ಸ್ನಾನ ಕಾರ್ಯಕ್ರಮ ನಡೆಯಲಿದೆ. ಮಾ.13ರಂದು ಬೆಳಗ್ಗಿನ ಜಾವ 5 ಕ್ಕೆ ಬೆಡಿಸೇವೆ, ಬಟ್ಟಲುಕಾಣಿಕೆ, ರಾಜಾಂಗಣ ಪ್ರಸಾದ ನಡೆದು ಧ್ವಜಾವರೋಹಣ, ಮಂತ್ರಾಕ್ಷತೆ, ಸಂಪ್ರೋಕ್ಷಣಿ ನಡೆದು ಮಧ್ಯಹ್ನ ಮಹಾಪೂಜೆ, ರಾತ್ರಿ ಶ್ರೀ ಕ್ಷೇತ್ರದ ದೈವಗಳ ಸ್ಥಾನದಿಂದ ದೈವಗಳ ಭಂಡಾರ ಹೊರಟು ಮಾಡದ ಗುಡ್ಡೆ ದೈವಗಳ ಚಾವಡಿಯಲ್ಲಿ ಏರುವುದು ನಡೆಯಲಿದೆ. ಶ್ರೀ ದೇವರ ಜಾತ್ರೋತ್ಸವ ಹಾಗೂ ಶ್ರೀ ದೈವಗಳ ನೇಮೋತ್ಸವಕ್ಕೆ ಊರಪರವೂರ ಸಮಸ್ತ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವರ ಗಂಧಪ್ರಸಾದ, ಅನ್ನಪ್ರಸಾದ ಸ್ವೀಕರಿಸುವಂತೆ ಕ್ಷೇತ್ರದ ಪವಿತ್ರಪಾಣಿ ಗೋಪಾಲಕೃಷ್ಣ ಕುಂಜತ್ತಾಯ ಮೆಣಸಿನಕಾನ, ಆಡಳಿತಾಧಿಕಾರಿ ಮಂಜುನಾಥ ಲಮಾನಿ ಹಾಗೂ ಜೀರ್ಣೋದ್ದಾರ ಮತ್ತು ಜಾತ್ರೋತ್ಸವ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರ ಪ್ರಕಟಣೆ ತಿಳಿಸಿದೆ.
ಮಾ.5 ಹಸಿರುವಾಣಿ ಸಮರ್ಪಣೆ:
ಮಾ.5 ರಂದು ಸಂಜೆ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ ನಡೆಯಲಿದೆ. ಗೋಪಾಲಕೃಷ್ಣ ಕಲ್ಲೂರಾಯ ಪೆರ್ನಾಜೆಯವರು ಹೊರೆಕಾಣಿಕೆ ಮೆರವಣಿಗೆಯ ಉದ್ಘಾಟನೆ ಮಾಡಲಿದ್ದು ಸಂಜೆ 6.30 ಕ್ಕೆ ಉಗ್ರಾಣ ಮುಹೂರ್ತ ನಡೆಯಲಿದೆ. ರಾತ್ರಿ ಶ್ರೀ ದುರ್ಗಾಪೂಜೆ ಜರಗಲಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಭ್ರಮ
ಮಾ.6 ರಂದು ಬೆಳಿಗ್ಗೆ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ತೆಂಕುತಿಟ್ಟಿನ ಯುವ ಭಾಗವತ ಸುಭಾಶ್ಚಂದ್ರ ರೈ ಕರ್ನೂರು ಮೈರೋಳು ನೆರವೇರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘ ಬನಾರಿ ದೇಲಪಾಡಿ ಇವರಿಂದ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ರಾತ್ರಿ ನೆಟ್ಟಣಿಗೆ ಮುಡ್ನೂರು-ಕರ್ನೂರು ಶಾಲಾ ಮಕ್ಕಳಿಂದ ನೃತ್ಯ ಹಾಸ್ಯ ವೈವಿಧ್ಯ, ಚಿತ್ತಾರ ಕಲಾವಿದರಿಂದ ಇನಿ ಅತ್ತ್ಂಡ ಎಲ್ಲೆ’ ಎಂಬ ತುಳು ಹಾಸ್ಯಮಯ ನಾಟಕ ಪ್ರದರ್ಶನ ನಡೆಯಲಿದೆ. ಮಾ.7 ರಂದು ರಾತ್ರಿ ಪಂಚಶ್ರೀ ಮಹಿಳಾ ಭಜನಾ ತಂಡದವರಿಂದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ, ಎಂಕ್ಲು ತುಳುವೆರ್ ಕಲಾಬಳಗದಿಂದ ಕೈ ಬುಡಯಲ್…’ ಎಂಬ ತುಳು ನಾಟಕ ನಡೆಯಲಿದೆ. ಮಾ.8 ರಂದು ರಾತ್ರಿ ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ವೈಭವ, ಕಾವು ಶ್ರೀ ಪಂಚಲಿಂಗೇಶ್ವರ ಭಜನಾ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಮಾ.9 ರಂದು ರಾತ್ರಿ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಕಲಾವಿದರಿಂದ ನೃತ್ಯಾರ್ಪಣ’, ಈಶ್ವರಮಂಗಲ ಶ್ರೀ ಶಿವಪಂಚಕ್ಷರಿ ಯಕ್ಷ ಪ್ರತಿಷ್ಠಾನಂ ಕಲಾವಿದರಿಂದಮಹಿಷ ವಧೆ, ಶಾಂಭವಿ ವಿಲಾಸ’ ಯಕ್ಷಗಾನ ಬಯಲಾಟ ನಡೆಯಲಿದೆ. ಮಾ.10 ರಂದು ರಾತ್ರಿ ಸಮರ್ಥ ಸಾಂಸ್ಕೃತಿಕ ಕಲಾ ತಂಡದವರಿಂದ ನೃತ್ಯ ವೈಭವ’, ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ಕಲಾಸಂಘದವರಿಂದ ಗುರುದಕ್ಷಿಣೆ’ ಯಕ್ಷಗಾನ ಬಯಲಾಟ ನಡೆಯಲಿದೆ. ಮಾ.11 ರಂದು ರಾತ್ರಿ ಸಿ.ಪಿ.ಎಲ್ ಹಾಗೂ ಬಲೆ ತೆಲಿಪಾಲೆ ಖ್ಯಾತಿಯ ವೈಷ್ಣವಿ ಕಲಾವಿದರಿಂದ ಕುಸಲ್ದ ಗೌಜಿ’ ಸಂಗೀತ ರಸಮಂಜರಿ, ನೃತ್ಯ ಹಾಗೂ ಹಾಸ್ಯ ಕಾರ್ಯಕ್ರಮ ನಡೆಯಲಿದೆ. ಮಾ.12 ರಂದು ಸಂಜೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ನಡೆಯಲಿದೆ. ರಾತ್ರಿ ಜಾಸ್ ಆಂಡ್ ಮ್ಯೂಸಿಕ್ ತಂಡದವರಿಂದ `ಸಂಗೀತ ಸಂಭ್ರಮ’ ನಡೆಯಲಿದೆ.
ಮಾ.14: ಶ್ರೀ ಕ್ಷೇತ್ರದ ದೈವಗಳ ನೇಮೋತ್ಸವ
ಮಾ.14 ರಂದು ಬೆಳಿಗ್ಗೆ ಶ್ರೀ ಕ್ಷೇತ್ರದಲ್ಲಿ ಶ್ರೀ ಕಿನ್ನಿಮಾಣಿ ದೈವ ಶ್ರೀಮುಡಿ ದರಿಸಿ ಹೊರಟು ಮಾಡದ ಗುಡ್ಡೆ ದೈವಗಳ ಚಾವಡಿಯಲ್ಲಿ ಕಿನ್ನಿಮಾಣಿ, ಪೂಮಾಣಿ, ಪಿಲಿಚಾಮುಂಡಿ ದೈವಗಳ ನೆಮೋತ್ಸವ ನಡೆಯಲಿದೆ. ಮಧ್ಯಾಹ್ನ ಮಾಡದ ಗುಡ್ಡೆಯಲ್ಲಿ ಅನ್ನಸಂತರ್ಪಣೆ ನಡೆಯಲಿದೆ. ಅಪರಾಹ್ನ ಮಾಡದ ಗುಡ್ಡೆಯಿಂದ ಶ್ರೀ ಕ್ಷೇತ್ರಕ್ಕೆ ಭಂಡಾರ ಮರಳಿ ಬರುವುದು, ರಾತ್ರಿ ಶ್ರೀ ಕ್ಷೇತ್ರದಲ್ಲಿ ಶ್ರೀ ಗುಳಿಗ ಕೋಲ ನಡೆಯಲಿದೆ.