ಇರ್ದೆ ಉಳ್ಳಾಕುಲು ಮೈಸಂದಾಯ ಶ್ರೀ ಕಲ್ಲುರ್ಟಿ – ಕಲ್ಕುಡ ದೈವಸ್ಥಾನದಲ್ಲಿ ದೈವಗಳ ನೇಮೋತ್ಸವ, ಅನ್ನಸಂತರ್ಪಣೆ

0

ಪುತ್ತೂರು: ಹರಕೆ ರೂಪದ ಅಗೇಲು ಸೇವೆಗೆ ಹೆಸರು ಪಡೆದ ಬೆಟ್ಟಂಪಾಡಿ ಗ್ರಾಮದ ಇರ್ದೆ ಉಳ್ಳಾಕುಲು ಮೈಸಂದಾಯ ಶ್ರೀ ಕಲ್ಲುರ್ಟಿ-ಕಲ್ಕುಡ ದೈವಸ್ಥಾನದಲ್ಲಿ ಮಾ.3ರಂದು ದೈವಗಳ ನೇಮೋತ್ಸವ ನಡೆಯಿತು. ಬೆಳಿಗ್ಗೆ ನಾಗದೇವರ ತಂಬಿಲ, ಗಣಹೋಮ, ಉಳ್ಳಾಕುಲು ಮೈಸಂದಾಯ, ಪೊಟ್ಟಭೂತ ನೇಮೋತ್ಸವ ನಡೆಯಿತು.

ಸಂಜೆ ವರ್ಣರ ಪಂಜುರ್ಲಿ ದೈವದ ಭಂಡಾರ ತೆಗೆದು ನೇಮೋತ್ಸವ, ರಾತ್ರಿ ಕಲ್ಲುರ್ಟಿ, ಕಲ್ಕುಡ, ಗುಳಿಗ, ಧೂಮಾವತಿ, ಪಂಜುರ್ಲಿ ದೈವಗಳ ಭಂಡಾರ ತೆಗೆದು ನೇಮೋತ್ಸವ ನಡೆಯಿತು. ಕಾರ್ಯಕ್ರಮಕ್ಕೆ ಜಾತಿ, ಮತ ಭೇದವಿಲ್ಲದೆ ನೂರಾರು ಮಂದಿ ಭಾಗವಹಿಸಿ ದೈವದ ಗಂಧಪ್ರಸಾದ ಹಾಗೂ ಅನ್ನಪ್ರಸಾದ ಸ್ವೀಕರಿಸಿದರು.

ಆಡಳಿತ ಮೊಕ್ತೇಸರ ರಾಮಣ್ಣ ಪೂಜಾರಿ ಇರ್ದೆರವರ ಮುಂದಾಳತ್ವದಲ್ಲಿ ಕುಟುಂಬಸ್ಥರು, ಗ್ರಾಮಸ್ಥರು ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು. ಆಕರ್ಷಕ ದ್ವಾರಗಳು, ತಳಿರು ತೋರಣಗಳು, ಅಚ್ಚುಕಟ್ಟಾದ ವ್ಯವಸ್ಥೆ, ವಿದ್ಯುತ್ ದೀಪಗಳ ಅಲಂಕಾರದಿಂದ ಶ್ರೀಕ್ಷೇತ್ರ ಆಕರ್ಷಣೀಯವಾಗಿ ಕಂಗೊಳಿಸುತ್ತಿತ್ತು. ಬಾಲಕೃಷ್ಣ ಇರ್ದೆ, ಶಶಿಕುಮಾರ್ ಇರ್ದೆ, ವಿನಯ ಕುಮಾರ್ ಇರ್ದೆಯವರು ಅತಿಥಿಗಳನ್ನು ಸ್ವಾಗತಿಸಿದರು. ಹಲವಾರು ಗಣ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here