ಕಡಬ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಆ್ಯಸಿಡ್ ದಾಳಿ ಪ್ರಕರಣ – ಎ.ಬಿ.ವಿ.ಪಿ.ಯಿಂದ ಪ್ರತಿಭಟನೆ

0

ಕಡಬ: ಕಡಬ ಸರಕಾರಿ ಪದವಿ ಪೂರ್ವ ಕಾಲೇಜಿನ ಮೂವರು ವಿದ್ಯಾರ್ಥಿನಿಯರಿಗೆ ಕೇರಳದ ಯುವಕನೋರ್ವ ಆ್ಯಸಿಡ್ ಎರಚಿದ ಘಟನೆಯನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಸುಬ್ರಹ್ಮಣ್ಯ ಇದರ ಕಡಬ ಶಾಖೆಯ ವತಿಯಿಂದ ಕಡಬ ಮುಖ್ಯ ರಸ್ತೆಯ ಜಂಕ್ಷನ್‌ನಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಎಬಿವಿಪಿಯ ಮಂಗಳೂರು ವಿಭಾಗದ ಸಂಘಟನಾ ಕಾರ್ಯದರ್ಶಿ ಶ್ರೀರಾಂ ಅಂಗಿರಸ ಅವರು ಮಾತನಾಡಿ, ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ಎಸಗಿರುವುದು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತೀವ್ರವಾಗಿ ಖಂಡಿಸುತ್ತದೆ. ಈ ಘಟನೆ ವಿಕೃತ ಮನಸ್ಥಿತಿಯ ಘಟನೆಯಾಗಿದ್ದು ಇದು ಆರೋಗ್ಯಕರ ಸಮಾಜಕ್ಕೆ ಒಳ್ಳೆಯ ಬೆಳವಣಿಗೆ ಅಲ್ಲ, ತನ್ನ ವಿಕೃತ ಮನಸ್ಥಿತಿಯಿಂದ ಈ ಘಟನೆಯನ್ನು ನಡೆಸಿರುವ ಆರೋಪಿ ಆತನಿಗೆ ಸಹಕರಿಸಿದವರಿಗೆ ಕಠಿಣ ಶಿಕ್ಷೆ ನೀಡಬೇಕು. ಈ ಮೂಲಕ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯು ಜಿಲ್ಲೆಯ ಎಲ್ಲಾ ಕಾಲೇಜು ವಿದ್ಯಾರ್ಥಿನಿಯರಿಗೆ ಒಂದು ಸುರಕ್ಷಿತ ವಾತಾವರಣವನ್ನು ನಿರ್ಮಾಣ ಮಾಡಬೇಕು ಎಂದರು. ಈ ದಾಳಿಗೆ ಮುಖ್ಯ ಕಾರಣವಾಗಿರುವುದು ಕಾಲೇಜಿನಲ್ಲಿ ಮೂಲಭೂತ ಸೌಕರ್ಯಗಳಿಲ್ಲದಿರುವುದು ಕಾಲೇಜಿನ ಸುತ್ತಮುತ್ತ ಯಾವುದೇ ಕಾಂಪೌಂಡ್ ವ್ಯವಸ್ಥೆ ಇಲ್ಲ. ಈ ವಿಷಯವನ್ನು ಹಲವು ಬಾರಿ ಕಾಲೇಜಿನ ಪ್ರಾಂಶುಪಾಲರು ಸರ್ಕಾರದ ಗಮನಕ್ಕೆ ತಂದಿರುತ್ತಾರೆ. ಈ ವಿಷಯವನ್ನು ಸರ್ಕಾರ ಆದಷ್ಟು ಬೇಗ ಮನವರಿಕೆ ಮಾಡಿಕೊಂಡು ಕಾಲೇಜಿಗೆ ಬೇಕಾದ ಮೂಲಭೂತ ಸೌಕರ್ಯವನ್ನು ಒದಗಿಸಬೇಕೆಂದು ವಿದ್ಯಾರ್ಥಿ ಪರಿಷತ್ ಆಗ್ರಹಿಸುತ್ತದೆ ಎಂದರು.
ಎ.ಬಿ.ವಿ.ಪಿ. ಕಾರ್‍ಯಕರ್ತೆ ಪುಣ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.ಎ.ಬಿ.ವಿ.ಪಿ. ರಾಜ್ಯ ಕಾರ್ಯಕಾರಿಣಿ ಸದಸ್ಯ ಹೇಮಂತ್ ಸುಬ್ರಹ್ಮಣ್ಯ ಸ್ವಾಗತಿಸಿ, ಸ್ಟೂಡೆಂಟ್ ಡೆವಲಪ್‌ಮೆಂಟ್ ಪ್ರಮುಖ್ ಚೈತ್ರಾ ವಂದಿಸಿದರು. ಪ್ರತಿಭಟನೆಯ ಬಳಿಕ ಕಡಬ ತಾಲೂಕು ಕಛೇರಿಗೆ ಮೆರವಣಿಗೆಯಲ್ಲಿ ಕಾರ್ಯಕರ್ತರು ತೆರಳಿ ತಹಸೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು, ಉಪ ತಹಶೀಲ್ದಾರ್ ಮನೋಹರ್ ಕೆ.ಟಿ. ಮನವಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸುಳ್ಯ ಶಾಸಕಿ ಭಾಗಿರಥಿ ಮುರುಳ್ಯ, ಎ.ಬಿ.ವಿ.ಪಿ. ತಾಲೂಕು ಸಂಚಾಲಕ ಸುಹಾಸ್ ಹಾಗೂ ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here