ಮಾ.12: ಕೆದಂಬಾಡಿ ಗ್ರಾಪಂ ಗ್ರಾಮ ಸಭೆ – ಇಂದಿನಿಂದ ವಾರ್ಡ್ ಸಭೆ

0

ಪುತ್ತೂರು: ಕೆದಂಬಾಡಿ ಗ್ರಾಮ ಪಂಚಾಯತ್‌ನ 2023-24ನೇ ದ್ವಿತೀಯ ಸುತ್ತಿನ ಗ್ರಾಮ ಸಭೆಯು ಮಾ.12ರಂದು ಬೆಳಿಗ್ಗೆ ಗ್ರಾಮ ಪಂಚಾಯತ್‌ನ ಮೇಲಂತಸ್ತಿನ ಸಭಾಂಗಣದಲ್ಲಿ ನಡೆಯಲಿದೆ. ಮಾ.6ರಿಂದ ವಾರ್ಡ್ ಸಭೆ ನಡೆಯಲಿದೆ. ಮಾ.6ರಂದು ಅಪರಾಹ್ನ ವಾರ್ಡ್ 3 ಮತ್ತು 4 ರ ವಾರ್ಡ್ ಸಭೆಯು ಗ್ರಾಪಂ ಕಛೇರಿಯಲ್ಲಿ ನಡೆಯಲಿದೆ. ಮಾ.7ರಂದು ಅಪರಾಹ್ನ ವಾರ್ಡ್ 1 ಸಭೆಯು ಕೆದಂಬಾಡಿ ಹಿ.ಪ್ರಾ.ಶಾಲಾ ಸಭಾಂಗಣದಲ್ಲಿ ನಡೆದರೆ, ವಾರ್ಡ್ 2 ಸಭೆಯು ಗ್ರಾಪಂ ಕಛೇರಿಯಲ್ಲಿ ನಡೆಯಲಿದೆ. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ವಾರ್ಡ್ ಸಭೆ ಹಾಗೂ ಗ್ರಾಮಸಭೆಗೆ ಬಂಧು ಸರಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಅರ್ಜಿ ನೀಡುವಂತೆ ಗ್ರಾಪಂ ಅಧ್ಯಕ್ಷೆ ಸುಜಾತ ಮುಳಿಗದ್ದೆ, ಉಪಾಧ್ಯಕ್ಷೆ ಜಯಲಕ್ಷ್ಮೀ ಬಲ್ಲಾಳ್ ಬೀಡು, ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆ, ಗ್ರೇಡ್-1 ಕಾರ್ಯದರ್ಶಿ ಸುನಂದ ರೈ ಹಾಗೂ ಪಂಚಾಯತ್ ಸದಸ್ಯರುಗಳು ಮತ್ತು ಸಿಬ್ಬಂದಿ ವರ್ಗದವರ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here