ಕೋರ್ಟುರಸ್ತೆ : ಜೆನ್ರಿಕ್ ಆಧಾರ್ ಫ್ರಾಂಚೈಸಿ ಶುಭಾರಂಭ-ಗುಣಮಟ್ಟದ ಔಷಧಿ ಮಳಿಗೆ | 80% ರಿಯಾಯಿತಿ

0

ಪುತ್ತೂರು : ಮಹಾರಾಷ್ಟ್ರ ಮೂಲದ ಕಂಪನಿ , ಕಳೆದ ಮೂರು ವರುಷಗಳಿಂದ ದೇಶದೆಲ್ಲೆಡೆ ಕಾರ್ಯಚರಿಸುತ್ತಿರುವ , ಭಾರತ ಸರಕಾರದ ಮಾನ್ಯತೆ ಪಡೆದಿರುವ ಅತ್ಯಂತ ಗುಣಮಟ್ಟದ ಜೆನ್ರಿಕ್ ಆಧಾರ್ ಔಷಧಿಗಳ ಫ್ರಾಂಚೈಸಿ ಹಾಗೂ ರಿಟೇಲ್ ಮಳಿಗೆ ಕೋರ್ಟುರಸ್ತೆ ಸತ್ಯಸಾಯಿ ಮೆಡಿಕಲ್ ಇಲ್ಲಿ ಇತ್ತೀಚಿಗೆ ಶುಭಾರಂಭಗೊಂಡಿದೆ.

ನೂತನ ಮಳಿಗೆ ಉದ್ಘಾಟನೆಯನ್ನು ಸತ್ಯಸಾಯಿ ಕ್ಲಿನಿಕ್ ಇದರ ವೈದ್ಯೆ ಅನುರಾಧ ಎಸ್ ರಾವ್ ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿ ,ಹಾರೈಸಿದರು.
ಎಸ್ ಬಿ ಐ ಲೈಫ್ ಇನ್ಸೂರೆನ್ಸ್ ಮ್ಯಾನೇಜರ್ ಶ್ರೀ ವಾಸ್ತವ್ , ನಿವೃತ್ತ ಬ್ಯಾಂಕ್ ಉದ್ಯೋಗಿ ವಾಸುದೇವ ಸಾಮೆತ್ತಡ್ಕ ,ಪಡೀಲ್ ಮನೋರಮಾ ಮೆಡಿಕಲ್ ಮಾಲೀಕ ಕಿಶನ್ , ಸುಧಾ ಫ್ಯಾನ್ಸಿ ಮಾಲೀಕ ಚಂದ್ರಶೇಖರ್ ,ಫಾರ್ಮಸಿಸ್ಟ್ ದಿನೇಶ್ ಕುಮಾರ್ ಸಹಿತ ಸತ್ಯಸಾಯಿ ನರ್ಸಿಂಗ್ ಹೋಂ ಸಿಬಂದಿಗಳು ಹಾಗೂ ಸಂಸ್ಥೆ ಸಿಬಂದಿ ಬಿಂದ್ಯಾಶ್ರೀ ಉಪಸ್ಥಿತರಿದ್ದರು.


ಮಾಲೀಕ ಕಿಶೋರ್ ಬನ್ನೂರು ಮಾತನಾಡಿ , ಜೆನ್ ರಿಕ್ ಆಧಾರ್ ಕಂಪನಿಯೂ ಗುಣಮಟ್ಟದ ಔಷಧಿಗಳನ್ನು ಸಿದ್ಧಪಡಿಸಿ , ಯಾವುದೇ ಮಧ್ಯವರ್ತಿಗಳ ಸಂಪರ್ಕವಿಲ್ಲದೆನೇ ನೇರವಾಗಿಯೇ ತನ್ನ ಫ್ರಾಂಚೈಸಿ ಮಳಿಗೆಗೆ ಉತ್ಪನ್ನಗಳನ್ನು ಒದಗಿಸೋ ಮೂಲಕ ಬಡ ಜನರಿಗೆ ಅತೀ ಕಡಿಮೆ ಬೆಲೆಯಲ್ಲಿ ಔಷಧಿಗಳು ಸಿಗುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುದರಿಂದಲೇ ಸುಮಾರು 50 ರಿಂದ 80 ಶೇಕಡಾ ಹಣದ ಉಳಿತಾಯವೂ ಗ್ರಾಹಕರ ಜೇಬು ಸೇರಲಿದೆಯೆಂದು ಹೇಳಿ , ಎಲ್ಲರೂ ಇದರ ಪ್ರಯೋಜನ ಪಡೆಯುವಂತೆ ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here