ನೆಲ್ಯಾಡಿ: ಕೇರಳದ ಕಣ್ಣೂರುನಲ್ಲಿ ನಡೆದ ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ರಾಷ್ಟೀಯ ಸಮ್ಮೇಳನದಲ್ಲಿ ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ನೆಲ್ಯಾಡಿ ಲೀಜಿಯನ್‌ಗೆ ರಾಷ್ಟೀಯ ಮಟ್ಟದ ಅತ್ಯುತ್ತಮ ಎಕ್ಸಲೆನ್ಸ್ ಲೀಜಿಯನ್ ಅವಾರ್ಡ್ ನೀಡಿ ಗೌರವಿಸಲಾಗಿದೆ.
ಸೀನಿಯರ್ ಚೇಂಬರ್‌ನ ರಾಷ್ಟೀಯ ಅಧ್ಯಕ್ಷ ವರ್ಗಿಸ್ ವೈದ್ಯನ್‌ರವರು ನೆಲ್ಯಾಡಿ ಲೀಜನ್ ಅಧ್ಯಕ್ಷ ನಾರಾಯಣ ಎನ್. ಬಲ್ಯ ಕೊಲ್ಲಿಮಾರು ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ನೆಲ್ಯಾಡಿ ಲೀಜಿಯನ್ 2023-24ರ ಅವಧಿಯಲ್ಲಿ ನಾರಾಯಣ ಎನ್. ಬಲ್ಯ ಅವರ ಅಧ್ಯಕ್ಷತೆಯಲ್ಲಿ ಅತ್ಯುತ್ತಮ ಸಮಾಜ ಸೇವಾ ಚಟುವಟಿಕೆ, ತರಬೇತಿ, ಸಂಘಟನೆ ಮಾಡಿದೆ.
ಸೀನಿಯರ್ ಚೇಂಬರ್ ಫೌಂಡೇಶನ್‌ಗೆ ಕೊಡುಗೆ, ಅಧಿಕೃತ ಬುಲೆಟಿನ್‌ಗೆ ದೇಣಿಗೆ, ಬಡ ವಿಕಲಚೇತನ ಹುಡುಗಿಗೆ ವೀಲ್ ಚೇರ್ ಕೊಡುಗೆ, ಬಡ ವಿಧವೆ ಮಹಿಳೆಗೆ ಸ್ವ ಉದ್ಯೋಗ ಮಾಡುವಲ್ಲಿ ಟೈಲರಿಂಗ್ ಯಂತ್ರ ಕೊಡುಗೆ, ದೇವಸ್ಥಾನಕ್ಕೆ ಶಾಶ್ವತ ಕಲ್ಲಿನ ಸ್ವಾಗತ ಬೋರ್ಡ್ ಕೊಡುಗೆ, ಸರಕಾರಿ ಶಾಲೆಗಳ ಗ್ರಂಥಾಲಯಕ್ಕೆ ಪುಸ್ತಕ, ಬಟ್ಟಲು ಇಡುವ ಸ್ಟ್ಯಾಂಡ್ ಕೊಡುಗೆ, ನೀರಿನ ಟ್ಯಾಂಕ್ ಕೊಡುಗೆ, ಬಡ ರೋಗಿಯೊಬ್ಬರಿಗೆ ಆರ್ಥಿಕ ನೆರವು, ಪುತ್ತೂರುನಲ್ಲಿ ಹೊಸ ಲೀಜಿಯನ್ ಸ್ಥಾಪನೆ, ಸೀನಿಯರ್ ಚೇಂಬರ್‌ನ ರಾಷ್ಟ್ರೀಯ ಹಾಗೂ ಪ್ರಾಂತೀಯ ಕಾರ್ಯಕ್ರಮಗಳಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆ, ರಾಷ್ಟೀಯ ಹಬ್ಬಗಳ ಆಚರಣೆ, ಯೋಗ ದಿನಾಚರಣೆ ಸಹಿತ ಹಲವು ಕಾರ್ಯಕ್ರಮ ಆಯೋಜಿಸಿರುವುದಕ್ಕೆ ಈ ಪ್ರಶಸ್ತಿ ಲಭಿಸಿದೆ.
ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸೀನಿಯರ್ ಚೇಂಬರ್‌ನ ರಾಷ್ಟೀಯ ಉಪಾಧ್ಯಕ್ಷ ಹರಿಪ್ರಸಾದ್ ರೈ ಜಿ.ಕೆ., ಸಮುದಾಯ ಅಭಿವೃದ್ಧಿ ವಿಭಾಗದ ರಾಷ್ಟೀಯ ಸಂಯೋಜಕ ಅಧಿಕಾರಿ ಡಾ. ಸದಾನಂದ ಕುಂದರ್, ನೆಲ್ಯಾಡಿ ಸೀನಿಯರೇಟ್ ವಿಭಾಗದ ಅಧ್ಯಕ್ಷೆ, ಬಲ್ಯ ಸರಕಾರಿ ಹಿ.ಪ್ರಾ.ಶಾಲಾ ಮುಖ್ಯಶಿಕ್ಷಕಿ ಪುಷ್ಪಾ ಕೆ, ನೆಲ್ಯಾಡಿ ಲೀಜನ್ ಉಪಾಧ್ಯಕ್ಷರಾದ ಉಲಹನ್ನನ್ ಪಿ.ಎಂ., ಪ್ರಕಾಶ್ ಕೆ.ವೈ., ಮತ್ತು ರಾಷ್ಟ್ರೀಯ ಅಧಿಕಾರಿಗಳು ಉಪಸ್ಥಿತರಿದ್ದರು.