ಕಲ್ಲಿಮಾರು: ಪೈಪು ಒಡೆದು ನೀರು ಪೋಲು-ಕಳೆದೆರಡು ದಿನಗಳಿಂದ ಸ್ಥಳೀಯರಿಗೆ ಬರುತ್ತಿಲ್ಲ ನೀರು

0

ಪುತ್ತೂರು: ನಗರಸಭಾ ವ್ಯಾಪ್ತಿಯ ಕಲ್ಲಿಮಾರು ಕೀರ್ತನಾ ಪ್ಯಾರಾಡೈಸ್ ಕಟ್ಟಡದ ಬಳಿಯ ತಿರುವಿನಲ್ಲಿ ನೀರಿನ ಪೈಪು ಒಡೆದು ನೀರು ಪೋಲಾಗುತ್ತಿರುವುದು ಕಂಡು ಬಂದಿದೆ.

ಕಳೆದ ಎರಡು ದಿನಗಳಿಂದ ಈ ಭಾಗದ ಜನರಿಗೆ ನೀರಿನ ಸರಬರಾಜು ಸರಿಯಾಗಿ ಆಗುತ್ತಿಲ್ಲ. ಯಾಕೆಂದರೆ ನೀರು ಒಂದೇ ಸಮನೆ ಪೋಲಾಗುತ್ತಿದ್ದು ಸ್ಥಳೀಯ ರಸ್ತೆ ನೀರುಮಯವಾಗಿದೆ. ಈ ಬಗ್ಗೆ ಸ್ಥಳೀಯರು ನಗರಸಭೆಗೆ ಆನ್ ಲೈನ್ ಮುಖೇನ ನೀರು ಪೋಲಾಗುತ್ತಿರುವ ಬಗ್ಗೆ ಸೂಚನೆ ನೀಡಿರುತ್ತಾರೆ ಎನ್ನಲಾಗಿದೆ. ಆದರೆ ನೀರು ಮಾತ್ರ ನಿರಂತರ ಪೋಲಾಗುತ್ತಿದೆ. ನಗರಸಭೆ ಈ ಬಗ್ಗೆ ಗಮನಹರಿಸಿ ನೀರು ಪೋಲಾಗುತ್ತಿರುವುದನ್ನು ತಪ್ಪಿಸಿ ಸ್ಥಳೀಯರಿಗೆ ನೀರನ್ನು ಒದಗಿಸುವಲ್ಲಿ ಕಾರ್ಯ ಪ್ರವೃತ್ತರಾಗಬೇಕಿದೆ.

LEAVE A REPLY

Please enter your comment!
Please enter your name here