ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಕಾರ್ಯದರ್ಶಿಯಾಗಿ ಸೀತಾರಾಮ ಭರಣ್ಯ

0

ಪುತ್ತೂರು: ಬಿಜೆಪಿ ಕರ್ನಾಟಕ ರಾಜ್ಯ ಘಟಕದ ಎಸ್.ಸಿ. ಮೋರ್ಚಾ ಕಾರ್ಯದರ್ಶಿಯಾಗಿ ಪುತ್ತೂರಿನ ಪಾಣಾಜೆ ಭರಣ್ಯ ನಿವಾಸಿ ಸೀತಾರಾಮ ರವರು ನಿಯುಕ್ತಿಗೊಂಡಿದ್ದಾರೆ.
ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷ ಎಸ್. ಮಂಜುನಾಥ್ ರವರು ಫೆ. 29 ರಂದು ಇವರನ್ನು ರಾಜ್ಯ ಘಟಕಕ್ಕೆ ನಿಯುಕ್ತಿಗೊಳಿಸಿರುತ್ತಾರೆ‌.
ಸೀತಾರಾಮರವರು ತನ್ನ ಪ್ರಾಥಮಿಕ ಶಿಕ್ಷಣವನ್ನು ಸೂರಂಬೈಲು ಹಿ.ಪ್ರಾ.ಶಾಲೆಯಲ್ಲಿ, ಪ್ರೌಢಶಿಕ್ಷಣವನ್ನು ಸುಬೋಧ ಪ್ರೌಢಶಾಲೆಯಲ್ಲಿ ಮುಗಿಸಿ, ಕೊಂಬೆಟ್ಟು ಪಿಯು ಕಾಲೇಜಿನಲ್ಲಿ ಪಿಯು ಶಿಕ್ಷಣ, ನೆಹರುನಗರ ವಿವೇಕಾನಂದ ಪದವಿ ಕಾಲೇಜಿನಲ್ಲಿ ಬಿಸ್ಸಿ ಪದವಿಯನ್ನು ಪೂರ್ಣಗೊಳಿಸಿರುತ್ತಾರೆ‌.‌
ತನ್ನ ಕಾಲೇಜು ಶಿಕ್ಷಣಾವಧಿಯಲ್ಲಿಯೇ ಎಬಿವಿಪಿ ಸಂಪರ್ಕ ಹೊಂದಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕನಾಗಿ ಕಾರ್ಯನಿರ್ವಹಿಸಿರುವ ಇವರು, ಶಿಕ್ಷಣದ ಬಳಿಕ ಎಬಿವಿಪಿ ಪೂರ್ಣಾವಧಿ ಕಾರ್ಯಕರ್ತನಾಗಿ ಜವಾಬ್ದಾರಿ ನಿರ್ವಹಣೆ ಮಾಡಿರುತ್ತಾರೆ. ಬೀದರ್ ನಗರ ಸಂಘಟನಾ ಕಾರ್ಯದರ್ಶಿಯಾಗಿ, ಬೀದರ್ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ, 3 ವರ್ಷಗಳ ಕಾಲ ಚಿಕ್ಕಮಗಳೂರು ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ, ಚಿಕ್ಕಮಗಳೂರು – ಚಿತ್ರದುರ್ಗ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ ಇವರು 2010 ರಲ್ಲಿ ಚಿಕ್ಕಮಗಳೂರಿನಲ್ಲಿ ಎಬಿವಿಪಿ ರಾಜ್ಯ ಸಮ್ಮೇಳನವನ್ನು ಸಂಘಟಿಸಿದ ಹೆಗ್ಗಳಿಕೆಯನ್ನೂ ಹೊಂದಿದ್ದಾರೆ. ಈ ಸಂಘಟನೆ ಭಾಜಪದತ್ತ ಕರೆದೊಯ್ದು ಕಳೆದ 6 ವರ್ಷಗಳಿಂದ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಬಿಎಲ್‌ಎ ಆಗಿ ಜವಾಬ್ದಾರಿ ನಿರ್ವಹಣೆ ಮಾಡುತ್ತಾ, ಷಾ ಚಾರಿಟೇಬಲ್ ಟ್ರಸ್ಟ್ ಮುಖಾಂತರ ಬಡ ವಿದ್ಯಾರ್ಥಿಗಳಿಗೆ ನೆರವು, ಸೂರು ಎಂಬ ಸಂಸ್ಥೆಯ ಮುಖಾಂತರ ಸಮಾಜದ ಸಹಕಾರದೊಂದಿಗೆ ಸೂರಿಲ್ಲದವರಿಗೆ ಸೂರು ನಿರ್ಮಿಸಿಕೊಡುವ ಸಮಾಜಮುಖಿ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸೀತಾರಾಮ ರವರು ಪ್ರಸ್ತುತ ಭಾಜಪಾ ಎಸ್.ಸಿ. ಮೋರ್ಚಾದ ರಾಜ್ಯ ಕಾರ್ಯದರ್ಶಿಯಾಗಿ ನೇಮಕಗೊಂಡಿರುತ್ತಾರೆ.

LEAVE A REPLY

Please enter your comment!
Please enter your name here