ಮಾ.10ಕ್ಕೆ ಕೊಳ್ತಿಗೆಯಲ್ಲಿ ಸೌಜನ್ಯ ಪ್ರಕರಣದ ನ್ಯಾಯಕ್ಕಾಗಿ ಜನಾಂದೋಲನ ಸಭೆ

0

ಪುತ್ತೂರು: ಸೌಜನ್ಯ ಪ್ರಕರಣದಲ್ಲಿ ತನಿಖಾಧಿಕಾರಿಯವರು ಸರಿಯಾದ ತನಿಖೆ ನಡೆಸುತ್ತಿಲ್ಲ. ಆದರೆ ಕರ್ನಾಟಕ ರಾಜ್ಯದಲ್ಲಿ ಮತ್ತು ಹೊರ ರಾಜ್ಯದಲ್ಲಿ ಸೌಜನ್ಯಳಿಗಾದ ಅನ್ಯಾಯದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆಯಾದರೂ ಯಾವ ರಾಜಕೀಯ ನಾಯಕರು ಸ್ಪಂದನೆ ಕೊಡುತ್ತಿಲ್ಲ. ಸೌಜನ್ಯ ಪರ ಹೋರಾಟದ ಮುಂದುವರಿದ ಭಾಗವಾಗಿ ಮಾ.10ರಂದು ಸಂಜೆ 3 ಗಂಟೆಗೆ ಕೊಳ್ತಿಗೆ ಗ್ರಾಮದ ಮೊಗಪ್ಪೆ ಎಂಬಲ್ಲಿ ಬೃಹತ್ ಜನಾಂದೋನವನ್ನು ಹಮ್ಮಿಕೊಂಡಿರುವುದಾಗಿ ಸೌಜನ್ಯ ನ್ಯಾಯಪರ ಹೋರಾಟ ಸಮಿತಿ ಕೊಳ್ತಿಗೆ ಇದರ ಅಧ್ಯಕ್ಷ ಭರತ್ ಕೆಮ್ಮಾರ ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.


ಜನಾಂದೋಲನದಲ್ಲಿ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸಂಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿ, ಮಾಜಿ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟಣನವರ್, ಸೌಜನ್ಯ ಅವರ ತಾಯಿ ಕುಸುಮಾವತಿ, ತುಳುನಾಡ ದೈವರಾಧನೆ ವಿಮರ್ಶಕ ತಮ್ಮಣ್ಣ ಶೆಟ್ಟಿ ಭಾಗವಹಿಸಲಿದ್ದಾರೆ. ಇತ್ತೀಚೆಗೆ ದೆಹಲಿಯಲ್ಲಿ 144 ಸೆಕ್ಷನ್ ಇದ್ದಾಗಲೂ ನಮ್ಮ ಪ್ರತಿಭಟನೆ ಯಶಸ್ವಿಯಾಗಿದೆ. ಅಲ್ಲಿ ನಡೆದ ಹೋರಾಟದ ವಿಚಾರವನ್ನು ಸಭೆಯಲ್ಲಿ ಮಂಡಿಸಲಾಗುವುದು. ಜೊತೆಗೆ ಇಲ್ಲಿಯ ತನಕ ಏನು ಪ್ರಸ್ತಾಪ ಮಾಡಿದ್ದೆವೋ ಅದಕ್ಕಿಂತ ಹೆಚ್ಚಿನ ಮಾಹಿತಿಯನ್ನು ಪ್ರತಿಭಟನೆಯಲ್ಲಿ ನೀಡಲಾಗುವುದು ಎಂದು ಅವರು ಹೇಳಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ಹೈಕೋರ್ಟ್ ನ್ಯಾಯವಾದಿ ಮೋಹಿತ್ ಕುಮಾರ್, ತಾ.ಪಂ ಮಾಜಿ ಸದಸ್ಯ ರಾಮ ಪಾಂಬಾರು, ಉದ್ಯಮಿ ಸತೀಶ್ ನೂಜಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here