ನರೇಂದ್ರ ಪ.ಪೂ.ಕಾಲೇಜಿನಲ್ಲಿ ಶಿವರಾತ್ರಿ ಆಚರಣೆಯ ಮಹತ್ವದ ಬಗ್ಗೆ ವಿಶೇಷ ಉಪನ್ಯಾಸ ಕಾರ್‍ಯಕ್ರಮ

0

ಶಿವರಾತ್ರಿ ಎಂದರೆ ಇಡೀ ರಾತ್ರಿ ಶಿವನಾಮ ಸ್ಮರಣೆ ಮಾಡುತ್ತಾ ಶಿವನನ್ನು ಆರಾಧಿಸುತ್ತಾ ಶಿವನ ಬಗ್ಗೆ ಚಿಂತಿಸುತ್ತಾ ಕತ್ತಲೊಳಗೆ ಬೆಳಕನ್ನು ಕಾಣುವ ದಿನವೆಂದು ಹೇಳಬಹುದು. ಅಜ್ಞಾನದ ಹಾದಿಯಿಂದ ಬೆಳಕಿನ ವಿಜಯವನ್ನು ಸಾಧಿಸುವ ಹಬ್ಬ ಇದಾಗಿದೆ. ಈ ಹಬ್ಬದ ಆಚರಣೆಯಿಂದ ಮನುಷ್ಯನ ಮಾನಸಿಕ ಪರಿವರ್ತನೆಯ ಜೊತೆಗೆ ಉತ್ತಮ ಸಂಸ್ಕಾರವನ್ನು ಮೈಗೂಡಿಸಿಕೊಳ್ಳಬೇಕು. ಸದಾಚಾರದ ಹಾದಿಯಲ್ಲಿ ಸಾಗಲು ಕೊನೆಯಲ್ಲಿ ಮೋಕ್ಷವನ್ನು ಸಂಪಾದಿಸಲು ಶಿವರಾತ್ರಿಯನ್ನು ಮಾಡಬೇಕು ಎಂಬ ನಂಬಿಕೆಯಿದೆ ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಶಿಕ್ಷಕಿ ವೀಣಾ ಸರಸ್ವತಿ ಇವರು ಹೇಳಿದರು.
ನರೇಂದ್ರ ಪ.ಪೂ.ಕಾಲೇಜಿನಲ್ಲಿ ನಡೆದ ಶಿವರಾತ್ರಿ ಆಚರಣೆಯ ಮಹತ್ವದ ಬಗ್ಗೆ ವಿಶೇಷ ಉಪನ್ಯಾಸ ಕಾರ್‍ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಾ ಶಿವರಾತ್ರಿಯ ದಿನವು ಭಕ್ತರು ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡುವುದರೊಂದಿಗೆ ಪ್ರಾರಂಭವಾಗುತ್ತದೆ. ಇದು ದೇಹ ಮತ್ತು ಆತ್ಮದ ಶುದ್ಧೀಕರಣವನ್ನು ಸಂಕೇತಿಸುತ್ತದೆ. ಆಧ್ಯಾತ್ಮಿಕ ಉನ್ನತಿ ಮತ್ತು ದೈವಿಕ ಆಶೀರ್ವಾದವನ್ನು ಬಯಸುವ ಭಕ್ತರು ಆಚರಿಸುವ ಉಪವಾಸ ನಿಯಮಗಳು ಮತ್ತು ಆಚರಣೆಗಳು ಈ ಮಂಗಳಕರ ಸಂದರ್ಭದ ಕೇಂದ್ರವಾಗಿದೆ. ಭಗವಾನ್ ಶಿವನು ಶಾಶ್ವತ ಪ್ರಾಣವನ್ನು ಸಂಕೇತಿಸುತ್ತಾನೆ. ಶಾಶ್ವತ ಅಸ್ತಿತ್ವದ ಅಸ್ಥಿರ ಶಕ್ತಿ. ಅವನನ್ನು ಮೃತ್ಯುಂಜಯ ಎಂದು ಗೌರವಿಸಲಾಗುತ್ತದೆ. ಸಾವನ್ನು ಗೆದ್ದವನು, ಅವನು ತನ್ನ ಭಕ್ತರಿಗೆ ಜ್ಞಾನದ ಮಾರ್ಗವನ್ನು ತೋರಿಸುತ್ತಾನೆ ಎಂದು ಹೇಳಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ರವರು ಉಪಸ್ಥಿತರಿದ್ದರು. ಕಾರ್‍ಯಕ್ರಮದಲ್ಲಿ ಉಪನ್ಯಾಸಕಿ ಮಧುರಾ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here