ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರ

0

ಥೆರಪಿಯಿಂದ ಅಂತರಿಕ ಸಮಸ್ಯೆಗಳೆಂದೂ ಬಾರದು -ಚನಿಲ ತಿಮ್ಮಪ್ಪ ಶೆಟ್ಟಿ

ಪುತ್ತೂರು: ನಾವೆಲ್ಲರೂ ಆರೋಗ್ಯವೇ ಭಾಗ್ಯವೆಂಬುದನ್ನು ನಂಬಿರುವ ಜನ. ಆರೋಗ್ಯವಿಲ್ಲವೆಂದರೆ ಯಾವ ಸಂಪತ್ತು ಲೆಕ್ಕಕ್ಕಿರದು. ಆರೋಗ್ಯ ಕಾಳಜಿ ಬಗ್ಗೆ ಸಂಶೋಧನೆ ನಡೆಯುತ್ತಿದ್ದರೂ, ಯುವ ಜನರು ಕಾಯಿಲೆಗೆ ತುತ್ತಾಗುತ್ತಿರುವುದು ಅಚ್ಚರಿ ಸಂಗತಿ. ಆದರೆ ಫೂಟ್ ಪಲ್ಸ್ ಥೆರಪಿಯಿಂದ ಹಲವು ಸಮಸ್ಯೆಗಳಿಗೆ ವಿರಾಮ ಸಿಗಲಿದ್ದು, ಯಾವುದೇ ರೀತಿಯಲ್ಲೂ ಅಂತರಿಕ ಅಡ್ಡ ಪರಿಣಾಮವೆಂದು ಸಾಧ್ಯವಿಲ್ಲ ಅಲ್ಲದೇ ಚಿಕೂನ್ ಗುನ್ಯ ವೇಳೆ ಬಂದಂತಹ ಗಂಟು ನೋವುಗಳೂ ಇಂದು ಈ ಥೆರಪಿಯಂದ ನಿವಾರಿಸಲು ಸಾಧ್ಯವಾಗಿದೆಯೆಂದು ಮಂಗಳೂರು ಕರಾವಳಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಅಭಿಪ್ರಾಯಪಟ್ಟರು.


ಮಾ.9 ರಂದು ಬಲ್ನಾಡು -ಉಜ್ರುಪಾದೆ ಭಟ್ಟಿ ವಿನಾಯಕ ದೇವಸ್ಥಾನ ಸಭಾಂಗಣದಲ್ಲಿ ಆರಂಭಗೊಂಡ, ಶ್ರೀ ಭಟ್ಟಿ ವಿನಾಯಕ ದೇವಸ್ಥಾನ ಉಜ್ರುಪಾದೆ ಬಲ್ನಾಡು, ಗ್ರಾಮ ಪಂಚಾಯತ್ ಬಲ್ನಾಡು, ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಕಲ್ಲಾಜೆ ಹಾಗೂ ವಿನಾಯಕ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಉಜ್ರುಪಾದೆ ಮತ್ತು ಕಂಪಾನಿಯೋ ನೆಮ್ಮದಿ ವೆಲ್‌ನೆಸ್ ಸೆಂಟರ್ ಕಲ್ಲಾರೆ ಪುತ್ತೂರು, ಇವುಗಳ ಜಂಟಿ ಆಶ್ರಯದಲ್ಲಿ ಸುಮಾರು 15 ದಿನಗಳ ವರೆಗೆ ನಡೆಯಲಿರುವ ಉಚಿತ ಪೂಟ್ ಫಲ್ಸ್ ಥೆರಪಿ ಶಿಬಿರವನ್ನು ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿ, ಅವರು ಮಾತನಾಡಿದರು.


ಪಕ್ಷವಾತ ಸಮಸ್ಯೆಯಿಂದ ಬಳಲುತ್ತಿದ್ದವರಿಗೂ ಉತ್ತಮ ಫಲಿತಾಂಶ-ಪರಮೇಶ್ವರಿ ಭಟ್:
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬಲ್ನಾಡು ಪಂಚಾಯತ್ ಅಧ್ಯಕ್ಷೆ ಪರಮೇಶ್ವರಿ ಭಟ್ ಮಾತನಾಡಿ, ಬಲ್ನಾಡು ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಈ ಶಿಬಿರದಲ್ಲಿ 250 ಕ್ಕೂ ಮಿಕ್ಕಿ ಶಿಬಿರಾರ್ಥಿಗಳು ಭಾಗವಹಿಸಿ, ಪ್ರಯೋಜನ ಪಡೆದು, ಇನ್ನೂ 15 ದಿನಗಳ ಕಾಲ ಶಿಬಿರ ಮುಂದುವರಿಸುವಂತೆ ವಿನಂತಿಸಿಕೊಂಡಿದ್ದರು. ಅದೇ ರೀತಿ ಈ ಭಾಗದ ಸದಸ್ಯರ ಕೋರಿಕೆ ಮೇರೆಗೆ ಥೆರಪಿ ಆಯೋಜನೆ ಮಾಡಿದ್ದೇವೆ. ನಾನೂ ಕೂಡ ಕೈ ನೋವಿನ ಸಮಸ್ಯೆಗೆ ತುತ್ತಾಗಿದ್ದು, 8 ದಿನಗಳ ಥೆರಪಿ ತೆಗೆದುಕೊಂಡಿದ್ದು, ಮೊದಲ ಮೂರೇ ದಿನಗಳಲ್ಲಿ ಕೈ ನೋವಿನ ಭಾಧೆಯಿಂದ ಸಂಪೂರ್ಣ ವಿಮುಖಳಾದೆ ಹಾಗೂ ಪಕ್ಷವಾತ ತೊಂದರೆ ಅನುಭವಿಸಿದವರು ಕೂಡ ಇದರಿಂದ ಉತ್ತಮ ಫಲಿತಾಂಶ ಪಡೆದುಕೊಂಡಿದ್ದಾರೆ ಎಂದು ಹೇಳಿ ಹಾರೈಸಿದರು.


ಶಿಬಿರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೆಮ್ಮದಿ ವೆಲ್‌ನೆಸ್ ಸೆಂಟರ್ ಕಲ್ಲಾರೆ ಇದರ ಮುಖ್ಯಸ್ಥರಾಗಿರುವ ಕೆ. ಪ್ರಭಾಕರ ಸಾಲ್ಯಾನ್ ನೀಡಿದರು.
ಮುಖ್ಯ ಅತಿಥಿಗಳಾಗಿ ವಿನಾಯಕ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಗಿರೀಶ್ ಕಂಟ್ರಾಣಿಮೂಲೆ, ಬಲ್ನಾಡು ಪ್ರಾ.ಕೃ.ಪತ್ತಿನ ಸಹಕಾರಿ ಅಧ್ಯಕ್ಷ ಸತೀಶ್ ಗೌಡ ಒಳಗುಡ್ಡೆ, ಕೃಷಿಕ ಸುರೇಶ್ ಬಾಯಾರು, ಬಲ್ನಾಡು ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ಮಾಜಿ ಅಧ್ಯಕ್ಷ ಮಾಧವ ಗೌಡ ಕಾಂತಿಲ, ಶ್ರೀ ಭಟ್ಟಿ ವಿನಾಯಕ ದೇವಾಲಯದ ಅರ್ಚಕ ಗೋಪಾಲ ಕೃಷ್ಣ ಹೊಳ್ಳ, ಬಲ್ನಾಡು ಪಂಚಾಯತ್ ಸದಸ್ಯರಾದ ಬಾಲಸುಬ್ರಹ್ಮಣ್ಯ ಕೊಟ್ಯಾನ್ ಹಾಗೂ ಕೃಷ್ಣಪ್ಪ ನಾಯ್ಕ ಮತ್ತು ಗಣೇಶ್ ಗೌಡ ಇದ್ದರು. ಆ ಬಳಿಕ ಶಿಬಿರ ಆರಂಭಗೊಂಡು, ಹಲವರು ಶಿಬಿರದಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here