ಪುತ್ತೂರು: 1000 ಗ್ರಾಮ ಆಡಳಿತ ಅಧಿಕಾರಿ ನೇಮಕಾತಿಗೆ ಕರ್ನಾಟಕ ಎಕ್ಸಾಮಿನೇಷನ್ ಅಥಾರಿಟಿಯು ಅಧಿಕೃತ ನೋಟಿಫಿಕೇಶನ್ ಬಿಡುಗಡೆ ಮಾಡಿದ್ದು ಹುದ್ದೆಗಳ ಲಿಖಿತ ಪರೀಕ್ಷೆಯು ಸದ್ಯದಲ್ಲೇ ನಡೆಯಲಿದೆ. ಈ ಹುದ್ದೆಗಳ ಆಯ್ಕೆ ಪ್ರಕ್ರಿಯೆಯು ಲಿಖಿತ ಪರೀಕ್ಷೆಯ ಅಂಕಗಳ ಮೂಲಕ ನಡೆಯಲಿದ್ದು ಲಿಖಿತ ಪರೀಕ್ಷೆಯನ್ನು ಎದುರಿಸುವ ಅಭ್ಯರ್ಥಿಗಳು ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯನ್ನು ಸಂಪರ್ಕಿಸಬಹುದು. ಈ ತರಬೇತಿಯು ಆನ್ಲೈನ್ ಮೂಲಕ ಸಂಜೆ 7 ರಿಂದ 8 ರವರೆಗೆ ಇರುತ್ತದೆ.
ಕಂದಾಯ ಇಲಾಖೆಯಡಿ ಈ ಹಿಂದೆ ಕರೆಯಲಾಗುತ್ತಿದ್ದ ಗ್ರಾಮ ಲೆಕ್ಕಿಗ ಹುದ್ದೆಗಳನ್ನು ಈಗ ಗ್ರಾಮ ಆಡಳಿತ ಅಧಿಕಾರಿ ಎಂದು ಕರೆಯಲಾಗುತ್ತಿದೆ. ಈಗ ನೇಮಕ ಆಯ್ಕೆ ಪ್ರಕ್ರಿಯೆಯನ್ನು ತಿದ್ದುಪಡಿ ಮಾಡಿದ್ದು, ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ. ಉದ್ಯೋಗ ಮಾರ್ಗದರ್ಶನದೊಂದಿಗೆ ಗುಣಮಟ್ಟದ ತರಬೇತಿಗೆ ಹೆಸರುವಾಸಿಯಾದ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯು 2010 ರಿಂದ ಪುತ್ತೂರು ಮತ್ತು ಸುಳ್ಯದಲ್ಲಿ ಕಾರ್ಯಾಚರಿಸುತ್ತಿದೆ. ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಣ ಸಂಸ್ಥೆಯಾಗಿರುವ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯಲ್ಲಿ ಆನ್ಲೈನ್/ ನೇರ ತರಗತಿಗಳು ಪ್ರಾರಂಭಗೊಂಡಿದೆ. ದಾಖಲಾತಿಗಾಗಿ ದೂರವಾಣಿ ಸಂಖ್ಯೆ 9945988118 / 9632320477 ನ್ನು ಸಂಪರ್ಕಿಸಬಹುದು ಎಂದು ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಲಾಗಿದೆ.