ರಾಮಕುಂಜ: ರಾಮಕುಂಜ ಗ್ರಾಮದ ನೀರಾಜೆ ನಿವಾಸಿ, ಹಾಜಿ ಇಬ್ರಾಹಿಂ ಮುಸ್ಲಿಯಾರ್ (77ವ.)ರವರು ಕೆಲ ದಿನಗಳ ಅನಾರೋಗ್ಯದಿಂದ ಮಾ.10ರಂದು ನಿಧನ ಹೊಂದಿದರು. ಇಬ್ರಾಹಿಂ ಮುಸ್ಲಿಯಾರ್‌ರವರು ಆತೂರು ಮೊಹಿಯುದ್ದೀನ್ ಜುಮಾ ಮಸೀದಿಯಲ್ಲಿ 27 ವರ್ಷ ಆ ಬಳಿಕ ಹಿರೇಬಂಡಾಡಿ, ನಿನ್ನಿಕಲ್, ನೆಕ್ಕರೆ, ಆತೂರು ಬೈಲ್ ಮೊದಲಾದ ಕಡೆಯ ಮಸೀದಿಯಲ್ಲಿ ಖತೀಬ್, ಸದರ್ ಮುಅಲ್ಲಿಂ ಆಗಿಯೂ ಸೇವೆ ಸಲ್ಲಿಸಿ ಚಿರಪರಿಚಿತರಾಗಿದ್ದರು. ಮೃತರು ಪತ್ನಿ ಅವ್ವಮ್ಮ, ಪುತ್ರರಾದ ಅಬ್ದುಲ್ ಅಜೀಜ್, ಮಹಮ್ಮದ್ ಶರೀಫ್, ಪುತ್ರಿ ರಹಿಯಾನತ್‌ರನ್ನು ಅಗಲಿದ್ದಾರೆ.