ಕೆಯ್ಯೂರು ಗ್ರಾಮದಲ್ಲಿ ರೂ. 6 ಕೋಟಿ 30 ಲಕ್ಷ ವೆಚ್ಚದ ಕಾಮಗಾರಿಗಳಿಗೆ ಶಾಸಕರಿಂದ ಗುದ್ದಲಿಪೂಜೆ

0

ಗ್ರಾಮದ ಅಭಿವೃದ್ಧಿಗೆ ನನ್ನ ಪ್ರಥಮ ಆದ್ಯತೆ : ಅಶೋಕ್ ಕುಮಾರ್ ರೈ

ಪುತ್ತೂರು: ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿಯೇ ನನ್ನ ಪ್ರಥಮ ಆದ್ಯತೆಯಾಗಿದ್ದು ಈಗಾಗಲೇ ತಾಲೂಕಿಗೆ 1476 ಕೋಟಿ ರೂಪಾಯಿಗಳ ಅನುದಾನ ಬಂದಿರುವುದು ನನಗೆ ಅತ್ಯಂತ ಖುಷಿ ತಂದಿದೆ. ಗ್ರಾಮದ ಅಭಿವೃದ್ಧಿಗೆ ಮೊದಲ ಆದ್ಯತೆಯನ್ನು ಕೊಡುವ ಮೂಲಕ ಪುತ್ತೂರಿನ ಸಂಪೂರ್ಣ ಅಭಿವೃದ್ದಿಗೆ ಪ್ರಯತ್ನ ಪಡಲಾಗುವುದು. ಶೇ.100 ರಷ್ಟು ಅಭಿವೃದ್ಧಿ ಸಾಧ್ಯವಾಗದಿದ್ದರೂ 5 ವರ್ಷಗಳ ಅವಧಿಯಲ್ಲಿ ನನ್ನಿಂದ ಸಾಧ್ಯವಾಗುವ ರೀತಿಯಲ್ಲಿ ಅಭಿವೃದ್ದಿ ಮಾಡುತ್ತೇನೆ. ಇದು ಎಲ್ಲವೂ ನಿಮ್ಮಿಂದ ಸಾಧ್ಯವಾಗಿದೆ. ನೀವು ನನಗೆ ಆಶೀರ್ವಾದ ಮಾಡಿದ್ದೀರಿ, ರಾಜಕೀಯ ರಹಿತ ಅಭಿವೃದ್ದಿ ಮಾಡಿ ತೋರಿಸುತ್ತೇನೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.


ಅವರು ಕೆಯ್ಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 6 ಕೋಟಿ 30 ಲಕ್ಷ ರೂಪಾಯಿ ವೆಚ್ಚದ ವಿವಿದ ಕಾಮಗಾರಿಗಳಿಗೆ ಮಾ.9 ರಂದು ಕೆಯ್ಯೂರು ದೇವಳದ ಬಳಿ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಈ ಹಿಂದೆ ಜನ ನಮ್ಮನ್ನು ಕೇಳುತ್ತಿದ್ದರು ಸರಕಾರ ನಮಗೆ ಏನು ಕೊಟ್ಟಿದೆ. ಚುನಾವಣೆ ಬಂದಾಗ ಓಟು ಕೇಳುತ್ತೀರಿ, ಗೆದ್ದ ಬಳಿಕ ಮರೆತು ಬಿಡುತ್ತೀರಿ ಎಂದು ಈಗ ನೀವು ಎದೆ ತಟ್ಟಿ ಹೇಳುವ ಕಾಲ ಬಂದಿದೆ. ಕಾಂಗ್ರೆಸ್ ಸರಕಾರ ಅಧಿಕಾರ ಬಂದ ಮೇಲೆ ಜನರಿಗಾಗಿ 5 ಗ್ಯಾರಂಟಿಗಳನ್ನು ಕೊಟ್ಟಿದ್ದು ಪ್ರತಿಯೊಬ್ಬರು ಇದರ ಪ್ರಯೋಜನವನ್ನು ಪಡೆದುಕೊಂಡಿದ್ದೀರಿ, ಆದ್ದರಿಂದ ಸರಕಾರ ಏನು ಕೊಟ್ಟಿದೆ ಎಂದು ಕೇಳುವವರ ಎದುರು ಎದೆ ತಟ್ಟಿ ಹೇಳಿ 5 ಗ್ಯಾರಂಟಿಗಳನ್ನು ಕೊಟ್ಟಿದೆಯೆಂದು, ಈ ವಿಚಾರವನ್ನು ಕಾರ್ಯಕರ್ತರು ಪ್ರತಿ ಮನೆಗೆ ಮುಟ್ಟಿಸುವ ಕೆಲಸವನ್ನು ಮಾಡಬೇಕು ಎಂದು ಶಾಸಕ ರೈ ಕರೆ ನೀಡಿದರು. ಕೆಯ್ಯೂರು ಗ್ರಾಮಕ್ಕೆ ಮೊದಲ ಹಂತದ ಅನುದಾನವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಈ ಅನುದಾನದ ಕಾಮಗಾರಿ ಮುಗಿದ ಕೂಡಲೇ ಮತ್ತಷ್ಟು ಅನುದಾನವನ್ನು ನೀಡಲಾಗುವುದು, ಕಾಮಗಾರಿಗಳು ಯಾವುದೇ ರೀತಿಯಲ್ಲೂ ಕಳಪೆಯಾಗದಂತೆ ನೋಡಿಕೊಳ್ಳುವ ಜವಬ್ದಾರಿ ನಾಗರೀಕರ ಮೇಲಿದೆ ಎಂದು ತಿಳಿಸಿದರು.


ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಮಾತನಾಡಿ, ಅಭಿವೃದ್ದಿ ವಿಚಾರದಲ್ಲಿ ದೂರದೃಷ್ಟಿಯುಳ್ಳ ಒಬ್ಬ ಶಾಸಕರು ನಮಗೆ ಸಿಕ್ಕಿರುವುದು ನಮ್ಮೆಲ್ಲರ ಭಾಗ್ಯ. ಈಗಾಗಲೇ 8 ತಿಂಗಳಲ್ಲಿ 1476 ಕೋಟಿ ರುಪಾಯಿಗಳ ಅನುದಾನವನ್ನು ತಾಲೂಕಿಗೆ ತಂದಿರುವ ಶಾಸಕರಿದ್ದರೆ ಅದು ಅಶೋಕ್ ಕುಮಾರ್ ರೈ ಮಾತ್ರ. ಇವರಿಗೆ ನಮ್ಮೆಲ್ಲರ ಪ್ರೋತ್ಸಾಹ ನಿರಂತರವಾಗಿರಲಿ ಎಂದು ಹೇಳಿದರು.


ಕೆಯ್ಯೂರು ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎ.ಕೆ ಜಯರಾಮ ರೈ ಸ್ವಾಗತಿಸಿ, ಶಾಲು ಮತ್ತು ದೇವಳದ ಪ್ರಸಾದ ನೀಡಿ ಶಾಸಕರನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಕೆಯ್ಯೂರು ಶ್ರೀ ಕ್ಷೇತ್ರ ವ್ಯವಸ್ಥಾಪನ ಸಮಿತಿ ನಿಕಟಪೂರ್ವ ಅಧ್ಯಕ್ಷ ಶಶಿಧರ ರಾವ್ ಬೊಳಿಕ್ಕಲ, ದೇವಳದ ಆಡಳಿತ ಅಧಿಕಾರಿ ನಮಿತಾ ಎ.ಕೆ, ಗ್ರಾಪಂ ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ, ದೇವಳದ ಉತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಇಳಂತಾಜೆ, ಪುಷ್ಪಾವತಿ ಎಂ ರೈ, ದೇರ್ಲ ತರವಾಡು ಮನೆ, ಚೆನ್ನಪ್ಪ ರೈ ದೇರ್ಲ, ಶಿವರಾಂ ರೈ ಇಳಂತಾಜೆ, ಕರುಣಾಕರ್ ರೈ ದೇರ್ಲ,ಹೊಟೇಲ್ ಅಶ್ವಿನಿ ಪುತ್ತೂರು,ಗಣಪತಿ ಭಟ್ ಆಚಾರಿಮೂಲೆ, ಬಟ್ಟಪ್ಪ ರೈ ದೇರ್ಲ, ಕೆಯ್ಯೂರು ಗ್ರಾಪಂ ಸದಸ್ಯರುಗಳಾದ ಅಬ್ದುಲ್ ಖಾದರ್ ಮೇರ್ಲ, ಜಯಂತ ಪೂಜಾರಿ ಕೆಂಗುಡೆಲು, ಬಟ್ಯಪ್ಪ ರೈ ದೇರ್ಲ, ಮಮತಾ ರೈ ಕೆಯ್ಯೂರು, ಮೀನಾಕ್ಷಿ ವಿ.ರೈ, ನೆಬಿಸಾ, ಶೇಷಪ್ಪ ದೇರ್ಲ, ಮಾಜಿ ಸದಸ್ಯ ಕೆ ಎಂ ಹನೀಫ್ ಕೈಕಂಬ, ದಾಮೋದರ ಪೂಜಾರಿ ಕೆಂಗುಡೇಲು, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಯ ಗಂಗಾಧರ ಪೂಜಾರಿ, ನಾರಾಯಣ ಪೂಜಾರಿ ಕೆಯ್ಯೂರು, ವೆಂಕಟಕೃಷ್ಣ ಶರ್ಮ ದೇರ್ಲ, ಗೋಪಾಲಕೃಷ್ಣ ಭಟ್, ಬಾಲಸುಬ್ರಹ್ಮಣ್ಯ ಭಟ್ ಅರ್ತ್ಯಡ್ಕ, ಗೋಪಾಲಕೃಷ್ಣ ಭಟ್ ದೇರ್ಲ, ಪ್ರಸನ್ನಕುಮಾರ್ ಭಟ್ ಅರ್ತ್ಯಡ್ಕ, ಕಿಶೋರ್ ಭಟ್ ಅರ್ತ್ಯಡ್ಕ, ಸನತ್‌ಕುಮಾರ್ ಭಟ್, ಅಮರನಾಥ ರೈ ದೇರ್ಲ, ಶಿವರಾಂ ರೈ ದೇರ್ಲ ತರವಾಡು ಮನೆ, ಅಶೋಕ್ ರೈ ದೇರ್ಲ, ಶಿವರಂಜನ್ ರೈ ದೇರ್ಲ, ಸಂಜೀವ ರೈ ಕೊಲ್ಯ ಇಳಂತಾಜೆ, ಸೋಮಶೇಖರ್ ರೈ ಇಳಂತಾಜೆ, ಜಗನ್ನಾಥ ರೈ ಮಜಲೋಡಿ, ಭುಜಂಗ ರೈ ಇಳಂತಾಜೆ, ದಿವಾಕರ ರೈ ಇಳಂತಾಜೆ ಕಣಿಯಾರು, ಚಂದ್ರಶೇಖರ ರೈ ಇಳಂತಾಜೆ, ಕೃಷ್ಣಪ್ರಸಾದ್ ರೈ ನ್ಯಾಯವಾದಿ ಕಣಿಯಾರು, ಮಾರಪ್ಪ ರೈ ಪುತ್ತಿಗೆ ಗುತ್ತು ಇಳಂತಾಜೆ, ಸೇದುಮಾಧವನ್ ನಂಬಿಯಾರ್ ಇಳಂತಾಜೆ, ರವೀಂದ್ರನಾಥ ಶೆಟ್ಟಿ ಇಳಂತಾಜೆ, ವೆಂಕಟ್ರಮಣ ಗೌಡ ದೇರ್ಲ, ಬಾಳಪ್ಪ ಪೂಜಾರಿ ಇಳಂತಾಜೆ, ಎ ಕೃಷ್ಣಪ್ಪ ಗೌಡ ಆಚಾರಿಮೂಲೆ, ನವೀನ್ ಪಟ್ಟೆ, ಹರಿನಾಥ ಇಳಂತಾಜೆ, ದೇವದಾಸ ಪಾಟಾಳಿ ವಿರಡ್ಕ, ಸಂತೋಷ್ ಆಪ್ಟಿಕಲ್ಲು, ಜಯರಾಮ ಶೆಟ್ಟಿ ಎಟ್ಯಡ್ಕ, ದೇರ್ಲ, ಚಂದ್ರಶೇಖರ ಶೆಟ್ಟಿ ದೇರ್ಲ, ವೇದಾವತಿ ಮಾರ್ತ ಇಳಂತಾಜೆ, ಹುಸೈನಾರ್ ಸಂತೋಷ್‌ನಗರ, ರಫೀಕ್ ಡಿ ಅರಿಕ್ಕಿಲ, ಬೈರಿ ಕೆರೆ, ಅಬ್ಬಾಸ್ ಶಾರ್ಜಾ, ಅಬ್ದುಲ್ ರಹಿಮಾನ್ ಕುಂಭಕೋಡು, ಅಬೂಬಕ್ಕರ್ ಮಣ್ಣಾಪು ಆರಿಕ್ಕಿಲ, ಮೊಯಿದುಕುಟ್ಟಿ ಅರಿಕ್ಕಿಲ, ಕೊರಗಪ್ಪ ರೈ ಸಣಂಗಳ, ರಮಾನಾಥ ರೈ ಕೋಡಂಬು, ವಸಂತ ರೈ ಸಣಂಗಳ, ಉದಯಪೂಜಾರಿ ಕೆಂಗುಡೇಲು, ರೇಖಾ ರಮೇಶ್ ಕೆಂಗುಡೇಲು, ಸವಿತ ಮಾರಪ್ಪ ರೈ, ಚಂದ್ರಿಕಾ ಸಂಜೀವ ರೈ,ಭವಾನಿ ಪಲ್ಲತ್ತಡ್ಕ, ಧರಣಿ ಪಕೀರ ಕೆಯ್ಯೂರು, ಉದಯ ಕೆ.ಎಸ್. ಅಬುದಾಬಿ, ರೂಪಾ ಎಸ್ ರೈ ಇಳಂತಾಜೆ, ಕರುಣಾಕರ ರೈ ಸಣಂಗಳ ನಡುಮನೆ, ವಿಜಯಾ ರೈ ಸಣಂಗಳ, ಪ್ರೇಮ ಹರೀಶ್ ಸಂತೋಷ್ ನಗರ, ಕೆ ಎಸ್ ಚಂದ್ರಶೇಖರ ಪೂಜರಿ ಕಣಿಯಾರು, ಗೋಪಾಲ ಪೂಜಾರಿ ಕಣಿಯಾರು, ಇಸುಬು ಬುಸ್ತಾನ್, ಸಿ ಬಿ ಅಬೂಬಕ್ಕರ್ ಅರಿಕ್ಕಿಲ, ಯು ಕೆ ಉಸ್ಮಾನ್ ಅಂಬತ್ತಡ್ಕ, ಅದರ್ಶ ರೈ ದೇವಿನಗರ, ಶೀನಪ್ಪ ರೈ ದೇವಿನಗರ, ಇಸ್ಮಾಯಿಲ್ ಹಾನೆಸ್ಟ್ ಕುಕ್ಕಿನಡ್ಕ, ಕರ್ನಾಟಕ ರಿಕ್ಷಾ ಚಾಲಕ ಮಾಲಕರ ಘಟಕ ಮಾಡಾವು ಕಟ್ಟೆ ಇದರ ಅಧ್ಯಕ್ಷರು, ಪದಾಧಿಕಾರಿಗಳು, ಪಿಡ್ಲ್ಯೂಡಿ ಕ್ಲಾಸ್ ೧ ಕಂಟ್ರಾಕ್ಟರ್ ಬಶೀರ್ ಹಿರೆಬಂಡಾಡಿ,ಬ್ಲಾಕ್ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷ ಸಿದ್ದೀಕ್ ಸುಲ್ತಾನ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಲ ರಾಮಚಂದ್ರ, ಭೂನ್ಯಾಯ ಮಂಡಳಿಯ ಸದಸ್ಯ ಕೃಷ್ಣ ಪ್ರಸಾದ್ ಆಳ್ವ ಸಹಿತ ಹಲವು ಮಂದಿ ಗಣ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು. ದಾಮೋದರ ಪೂಜಾರಿ ಕೆಂಗುಡೇಲು ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

ಕೌಡಿಚ್ಚಾರ್-ಇಳಂತಾಜೆ ರಸ್ತೆ ಅಭಿವೃದ್ದಿಗೆ ರೂ.5 ಕೋಟಿ ಅನುದಾನ
ಕಳೆದ 25 ವರ್ಷಗಳಿಂದ ಅಭಿವೃದ್ಧಿ ಕಾಣದೆ ತೀರಾ ಹದಗೆಟ್ಟು ವಾಹನ ಸಂಚಾರಕ್ಕೂ ಅಯೋಗ್ಯವಾಗಿದ್ದ ಕೌಡಿಚ್ಚಾರ್- ಇಳಂತಾಜೆ-ಕೆಯ್ಯೂರು ಪಿಡಬ್ಲ್ಯುಡಿ ರಸ್ತೆಯ ಅಭಿವೃದ್ಧಿಗೆ ರೂ.5 ಕೋಟಿ ಅನುದಾನವನ್ನು ಒದಗಿಸುವ ಮೂಲಕ ಈ ಭಾಗದ ಜನರ ಬಹುಕಾಲದ ಬೇಡಿಕೆಯನ್ನು ಶಾಸಕರಾಗಿ ಎಂಟೇ ತಿಂಗಳಲ್ಲಿ ಈಡೇರಿಸಿದ್ದಾರೆ. ಇದಲ್ಲದೆ ಗ್ರಾಮದ ಇತರೆ ರಸ್ತೆಗಳ ಅಭಿವೃದ್ಧಿಗೆ 1 ಕೋಟಿ 5 ಲಕ್ಷದ 30 ಸಾವಿರ ಅನುದಾನವನ್ನು ಪ್ರತ್ಯೇಕವಾಗಿ ನೀಡಿದ್ದಾರೆ.

1 ಕೋಟಿ 30 ಲಕ್ಷದ ಕಾಮಗಾರಿಗಳ ವಿವರ
ಬೇರಿಕೆಮಜಲುವಿನಿಂದ – ಕೋಡಂಬು ರಸ್ತೆ ಅಭಿವೃದ್ಧಿ ರೂ.10 ಲಕ್ಷ, ಅರಿಕ್ಕಿಲ ಎಂಬಲ್ಲಿ ರಸ್ತೆ ಅಭಿವೃದ್ಧಿ ರೂ.10 ಲಕ್ಷ, ತೆಗ್ಗು ಬಲ್ಕಾಡು ರಸ್ತೆ ಕಾಂಕ್ರಿಟೀಕರಣ 5.05 ಲಕ್ಷ, ಓಲೆಮುಂಡೋವು ಮಸೀದಿ ಬಳಿ ರಸ್ತೆ ಕಾಂಕ್ರಿಟೀಕರಣ ರೂ. 05.05 ಲಕ್ಷ, ಕೆಯ್ಯೂರು ಶಾಲಾ ಬಳಿಯಿಂದ ದೇವಿನಗರ ಅಂಬೇಡ್ಕರ್ ಭವನ ತನಕ ರಸ್ತೆ ಕಾಂಕ್ರಿಟೀಕರಣ ರೂ. 05.05 ಲಕ್ಷ, ಸಂತೋಷ್ ನಗರ ಪಾತುಂಜ ರಸ್ತೆ ಕಾಂಕ್ರಿಟೀಕರಣ ರೂ. 05.05 ಲಕ್ಷ, ಇಳಂತಾಜೆ – ಎಟ್ಯಡ್ಕ ರಸ್ತೆ ಕಾಂಕ್ರಿಟೀಕರಣ ರೂ. 15.05 ಲಕ್ಷ, ಕಟ್ಟತ್ತಾರು ಅಲೆಮಾರು ರಸ್ತೆ ಅಭಿವೃದ್ಧಿ ರೂ. 15.00 ಲಕ್ಷ, ದೇವಿನಗರದಿಂದ ಕೆಯ್ಯೂರು ಮಹಿಷಮರ್ದಿನಿ ದುರ್ಗಾ ಪರಮೇಶ್ವರೀ ದೇವಸ್ಥಾನ ರಸ್ತೆಗೆ ಕಾಂಕ್ರಿಟೀಕರಣ ರೂ. 20.00 ಲಕ್ಷ, ಕೆಂಗುಡೇಲು ಕೊಡ್ಯಾಣ ಸಂಪರ್ಕ ರಸ್ತೆ ಅಭಿವೃದ್ಧಿ ರೂ. 10.00 ಲಕ್ಷ, ಶಾಲಾ ಬಳಿ ಸಣಂಗಳ ಸಂಪರ್ಕ ರಸ್ತೆ ಅಭಿವೃದ್ಧಿ ರೂ. 05.05 ಲಕ್ಷ, ಮಾಡಾವು ಕಟ್ಟೆ ಎಂಬಲ್ಲಿ ರಿಕ್ಷಾ ತಂಗುದಾಣ ರೂ. 4.12742 ಲಕ್ಷ, ದೇರ್ಲ ಶ್ರೀ ಅಮ್ಮನವರ ದೇವಸ್ಥಾನ ಗೋಪುರಕ್ಕೆ ಕಬ್ಬಿಣ ಪೈಪ್ ಅಳವಡಿಕೆ ಕಾಮಗಾರಿ ರೂ. 2.29617 ಲಕ್ಷ, ತೆಗ್ಗು-ಓಲೆಮುಂಡೋವು ರಸ್ತೆ ಅಭಿವೃದ್ಧಿ ರೂ. 18.00 ಲಕ್ಷದ ಅನುದಾನದ ಕಾಮಗಾರಿಗಳಿಗೆ ಶಾಸಕರು ಗುದ್ದಲಿಪೂಜೆ ನೆರವೇರಿಸಿದರು.

ಮನವಿ ಸಲ್ಲಿಕೆ
ಕೆಯ್ಯೂರು ಬೈರಿತಿಕೆರೆ ಸಾರ್ವಜನಿಕ ಕೆರೆ ಅಭಿವೃದ್ಧಿಗೆ ಹಾಗೂ ಕೆಯ್ಯೂರು ದೇವಳದ ಬಡಗು ಭಾಗದ ತಡೆಗೋಡೆ ರಚನೆಗೆ ಅನುದಾನ ನೀಡುವಂತೆ ವಲಯ ಕಾಂಗ್ರೆಸ್ ಅಧ್ಯಕ್ಷ ಎ.ಕೆ ಜಯರಾಮ ರೈಯವರು ಶಾಸಕರಿಗೆ ಮನವಿ ಸಲ್ಲಿಸಿದರು.

LEAVE A REPLY

Please enter your comment!
Please enter your name here