ಗುಣಮಟ್ಟ ಮತ್ತು ಸೇವೆಯಿಂದ ಉದ್ಯಮದಲ್ಲಿ ಯಶಸ್ಸು-ಅಶೋಕ್ ಕುಮಾರ್ ರೈ
ಪುತ್ತೂರು: ಮಹಿಳೆಯರ ಸಿದ್ದ ಉಡುಪುಗಳ ಮಳಿಗೆ `ವೈಟ್ ಟ್ಯಾಗ್ ವುಮೆನ್’ ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಯ ಶಾಲಿಮಾರ್ ಕಾಂಪ್ಲೆಕ್ಸ್‌ನಲ್ಲಿ ಮಾ.11ರಂದು ಶುಭಾರಂಭಗೊಂಡಿತು. ಮಾಜಿ ಶಾಸಕ ಸಂಜೀವ ಮಠಂದೂರು ಹಾಗೂ ಉದ್ಯಮಿ ಶಾಹುಲ್ ಹಮೀದ್ ಉಜಿರೆ ಮಳಿಗೆಯನ್ನು ಉದ್ಘಾಟಿಸಿದರು.
ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ಉದ್ಯಮದಲ್ಲಿ ಕ್ವಾಲಿಟಿ ಮತ್ತು ಸರ್ವೀಸ್ ಉತ್ತಮವಾಗಿದ್ದಾಗ ಅಂತಹ ಮಳಿಗೆ ಯಶಸ್ಸು ಕಾಣುತ್ತದೆ, ಅಭಿವೃದ್ಧಿ ಹೊಂದುತ್ತಿರುವ ಪುತ್ತೂರಿನಲ್ಲಿ ವೈಟ್ ಟ್ಯಾಗ್ ವುಮೆನ್ ಡ್ರೆಸ್ ಮಳಿಗೆ ಶುಭಾರಂಭಗೊಂಡಿರುವುದು ಸಂತಸದ ವಿಚಾರ ಎಂದು ಹೇಳಿದರು. ಜಿ.ಎಲ್ ಮಾಲ್‌ನಲ್ಲಿ ಕಾರ್ಯಾಚರಿಸುತ್ತಿರುವ ವೈಟ್ ಟ್ಯಾಗ್ ಬ್ರಾಂಡೆಡ್ ಮೆನ್ಸ್ ಡ್ರೆಸ್ ಮಳಿಗೆಯಿಂದ ನಾನು ಕೂಡಾ ಶರ್ಟ್ ಖರೀದಿಸಿದ್ದೇನೆ ಎಂದ ಶಾಸಕರು ಇಲ್ಲಿ ಶುಭಾರಂಭಗೊಂಡ ಮಳಿಗೆ ಯಶಸ್ಸಿನ ಪಥದಲ್ಲಿ ಮುನ್ನಡೆಯಲಿ ಎಂದು ಆಶಿಸಿದರು.
ವ್ಯವಹಾರ ಹೆಚ್ಚಾದಂತೆ ಪೇಟೆ ಅಭಿವೃದ್ಧಿ-ಮಠಂದೂರು
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ ಡ್ರೆಸ್ ಮಳಿಗೆ ಮತ್ತು ಚಿನ್ನದ ಮಳಿಗೆಯಲ್ಲಿ ಪುತ್ತೂರು ಹೆಸರು ಪಡೆದಿದ್ದು ವ್ಯವಹಾರ ಹೆಚ್ಚಿದಂತೆ ಪೇಟೆ ಅಭಿವೃದ್ಧಿ ಕಾಣುತ್ತದೆ, ಇಲ್ಲಿ ಶುಭಾರಂಭಗೊಂಡ ವೈಟ್ ಟ್ಯಾಗ್ ವುಮೆನ್ ಡ್ರೆಸ್ ಮಳಿಗೆ ಅಭಿವೃದ್ಧಿ ಹೊಂದುತ್ತಿರುವ ಪುತ್ತೂರಿಗೆ ಪೂರಕವಾಗಿದೆ ಎಂದು ಹೇಳಿದರು. ಆಧುನಿಕತೆಯ ಅಭಿರುಚಿಗೆ ತಕ್ಕುದಾದ ಡ್ರೆಸ್‌ಗಳು ಮಾರಾಟ ಮಾಡಿದಾಗ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿತರಾಗುತ್ತಾರೆ, ಉತ್ತಮ ವ್ಯವಹಾರದ ಮೂಲಕ ಈ ಮಳಿಗೆ ಅಭಿವೃದ್ಧಿ ಹೊಂದಲಿ ಎಂದು ಅವರು ಹಾರೈಸಿದರು.
ಪುತ್ತೂರಿನ ಅಭಿವೃದ್ಧಿಗೆ ಪೂರಕ-ಎಂ.ಎಸ್ ಮಹಮ್ಮದ್
ಜಿ.ಪಂ ಮಾಜಿ ಉಪಾಧ್ಯಕ್ಷ ಎಂ.ಎಸ್ ಮಹಮ್ಮದ್ ಮಾತನಾಡಿ ಜಿಲ್ಲಾ ಕೇಂದ್ರವಾಗುವ ಹೊಸ್ತಿಲಲ್ಲಿರುವ ಪುತ್ತೂರಿನಲ್ಲಿ ಉದ್ಯಮಗಳು ಹೆಚ್ಚಾದಂತೆ ಅಭಿವೃದ್ಧಿಗೂ ಪೂರಕವಾಗುತ್ತದೆ, ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಪುತ್ತೂರಿನಲ್ಲಿ ವೈಟ್ ಟ್ಯಾಗ್ ವುಮೆನ್ ಡ್ರೆಸ್ ಮಳಿಗೆ ಪ್ರಾರಂಭ ಆಗಿರುವುದು ಎಲ್ಲರಿಗೂ ಖುಷಿ ನೀಡಿದೆ. ಈ ಮಳಿಗೆ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಅವರು ಹಾರೈಸಿದರು.
ವೈಟ್ ಟ್ಯಾಗ್‌ನ ಹತ್ತಾರು ಮಳಿಗೆ ಆರಂಭವಾಗಲಿ-ಅರಿಯಡ್ಕ ಹಾಜಿ
ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಮಾತನಾಡಿ ಬಡವರ ಬಗ್ಗೆ, ಶಿಕ್ಷಣದ ಬಗ್ಗೆ ಕಾಳಜಿ ಹೊಂದಿರುವ ಬಶೀರ್ ಇಂದ್ರಾಜೆ ಅವರಲ್ಲಿ ಸಾಮರ್ಥ್ಯವಿದೆ, ದಕ್ಷತೆ, ಪ್ರಾಮಾಣಿಕತೆಯಿದೆ, ಧೈರ್ಯವೂ ಇದೆ, ಹಾಗಾಗಿ ಅವರು ಪ್ರಾರಂಭಿಸಿರುವ ವೈಟ್ ಟ್ಯಾಗ್ ವುಮೆನ್ ಡ್ರೆಸ್ ಮಳಿಗೆ ಯಶಸ್ಸು ಕಾಣುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು. ಇಲ್ಲಿ ಶುಭಾರಂಭಗೊಂಡ ಮಳಿಗೆಗೆ ಎಲ್ಲರೂ ಸಹಕಾರ ನೀಡಬೇಕು, ಇಂತಹ ಹತ್ತಾರು ಮಳಿಗೆಗಳು ಭವಿಷ್ಯದಲ್ಲಿ ವಿವಿಧ ಕಡೆಗಳಲ್ಲಿ ಪ್ರಾರಂಭವಾಗಬೇಕು ಎಂದು ಅವರು ಹೇಳಿದರು.
ಮಳಿಗೆ ಅಭಿವೃದ್ಧಿ ಕಾಣಲಿದೆ-ಅಹ್ಮದ್ ಹಾಜಿ
ಕುಂಬ್ರ ಕೆಐಸಿ ಅಧ್ಯಕ್ಷ ಕೆ.ಪಿ ಅಹ್ಮದ್ ಹಾಜಿ ಆಕರ್ಷಣ್ ಮಾತನಾಡಿ ಬಶೀರ್ ಇಂದ್ರಾಜೆ ಅವರು ತಮ್ಮ ಆದಾಯದಲ್ಲಿ ಸಮಾಜಕ್ಕೂ ಕೊಡುಗೆ ನೀಡುತ್ತಿದ್ದು ಹಾರ್ಡ್ ವರ್ಕರ್ ಆಗಿ ಗುರುತಿಸಿಕೊಂಡಿದ್ದಾರೆ. ಇವರು ಪ್ರಾರಂಭಿಸಿರುವ ಈ ಮಳಿಗೆ ಅಭಿವೃದ್ಧಿ ಕಾಣಲಿದೆ ಎಂದು ಹೇಳಿದರು.
ಗ್ರಾಹಕರ ಸಹಕಾರದಿಂದ ಉದ್ಯಮ ಯಶಸ್ಸು-ಎಲ್.ಟಿ ರಝಾಕ್ ಹಾಜಿ
ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಎಲ್.ಟಿ ಅಬ್ದುಲ್ ರಝಾಕ್ ಹಾಜಿ ಮಾತನಾಡಿ ಸೌಮ್ಯ ಸ್ವಭಾವದ ವ್ಯಕ್ತಿಯಾಗಿರುವ ಬಶೀರ್ ಇಂದ್ರಾಜೆ ಅವರು ಉದ್ಯಮ ಕ್ಷೇತ್ರದಲ್ಲಿ ಅನುಭವ ಹೊಂದಿದವರಾದ ಕಾರಣ ಅವರು ಇಲ್ಲಿ ಆರಂಭಿಸಿದ ಡ್ರೆಸ್ ಮಳಿಗೆ ಯಶಸ್ಸು ಕಾಣಲಿದೆ, ಗ್ರಾಹಕರ ಸಹಕಾರ ಇದ್ದಾಗ ಯಾವುದೇ ಉದ್ಯಮ ಅಭಿವೃದ್ಧಿ ಕಾಣುತ್ತದೆ ಎಂದು ಅವರು ಹೇಳಿದರು.
ಯಶಸ್ವಿಯಾಗಿ ಮುನ್ನಡೆಯಲಿ-ಶಾಹುಲ್ ಹಮೀದ್
ದಮ್ಮಾಮ್ ವಿಲ್ಡನ್ ಅರೇಬಿಕ್ ಗ್ರೂಪ್‌ನ ಸಿಇಓ ಶಾಹುಲ್ ಹಮೀದ್ ಉಜಿರೆ ಮಾತನಾಡಿ ಬಶಿರ್ ಇಂದ್ರಾಜೆ ಅವರು ಪ್ರಾರಂಭಿಸಿರುವ ವೈಟ್ ಟ್ಯಾಗ್ ವುಮೆನ್ ಮಳಿಗೆ ಉತ್ತಮ ವ್ಯಾಪಾರದ ಮೂಲಕ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಶುಭ ಹಾರೈಸಿದರು.
ವೈಟ್ ಟ್ಯಾಗ್ ಚಿಲ್ಡ್ರನ್ ಮಳಿಗೆ ಪ್ರಾರಂಭವಾಗಲಿ-ಮಹಮ್ಮದ್ ಆಲಿ
ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದ್ ಆಲಿ ಮಾತನಾಡಿ ಜಿಲ್ಲಾ ಕೇಂದ್ರ ಆಗಲಿರುವ ಪುತ್ತೂರಿನಲ್ಲಿ ಉದ್ಯಮಗಳು ಹೆಚ್ಚಾದಂತೆ ಅಭಿವೃದ್ಧಿ ಕಾಣುತ್ತದೆ, ಸಮಾಜಕ್ಕೂ ಕೊಡುಗೆ ನೀಡುತ್ತಿರುವ ಬಶೀರ್ ಇಂದ್ರಾಜೆ ಅವರು ಪುತ್ತೂರಿನಲ್ಲಿ ವೈಟ್ ಟ್ಯಾಗ್ ಮೆನ್ ಮೊದಲು ಪ್ರಾರಂಭಿಸಿದ್ದು ಇದೀಗ ವೈಟ್ ಟ್ಯಾಗ್ ವುಮೆನ್ ಮಳಿಗೆ ಪ್ರಾರಂಭಿಸಿದ್ದಾರೆ, ಮುಂದಕ್ಕೆ ವೈಟ್ ಟ್ಯಾಗ್ ಚಿಲ್ಡ್ರನ್ ಮಳಿಗೆ ಕೂಡಾ ಪ್ರಾರಂಭಿಸುವಂತಾಗಲಿ ಎಂದು ಆಶಿಸಿದರು.
ಯಶಸ್ವಿಯಾಗಿ ಮುನ್ನಡೆಯಲಿ-ಇಬ್ರಾಹಿಂ ಸಾಗರ್
ಎಸ್‌ಡಿಪಿಐ ಪುತ್ತೂರು ಕ್ಷೇತ್ರ ಸಮಿತಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸಾಗರ್ ಮಾತನಾಡಿ ಕಷ್ಟಪಟ್ಟು ಪರಿಶ್ರಮದ ಮೂಲಕ ಎತ್ತರಕ್ಕೆ ಬೆಳೆದಿರುವ ಬಶೀರ್ ಇಂದ್ರಾಜೆ ಅವರು ಪ್ರಾರಂಭಿಸಿರುವ ಮಹಿಳೆಯರ ಸಿದ್ದ ಉಡುಪುಗಳ ಮಳಿಗೆ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಹಾರೈಸಿದರು.
ಪರಿಶ್ರಮದಿಂದ ಯಶಸ್ಸು-ಸುಧನ್ವ
ಜಿ.ಎಲ್ ಗ್ರೂಪ್‌ನ ಸುಧನ್ವ ಮಾತನಾಡಿ ಈಗಿನ ಕಾಲದಲ್ಲಿ ವ್ಯಾಪಾರ ಆರಂಭಿಸುವುದು ತುಂಬ ಕಷ್ಟ, ಪರಿಶ್ರಮಪಟ್ಟರೆ ಯಶಸ್ಸು ಸಾಧ್ಯ. ಬಶೀರ್ ಅವರು ನಾಲ್ಕನೇ ಮಳಿಗೆ ಶುಭಾರಂಭಗೊಂಡಿದ್ದು ಇದು ಯಶಸ್ವಿಯಾಗಿ ಮುನ್ನಡೆಯಲಿ ಎಂದು ಹಾರೈಸಿದರು.
ಪುತ್ತೂರು ಸೀರತ್ ಕಮಿಟಿ ಅಧ್ಯಕ್ಷ ಅಬ್ದುಲ್ ಖಾದರ್ ಸುರಯ್ಯ, ಪುತ್ತೂರು ಜಿ.ಎಂ ಶಾಲಿಮಾರ್ ಕಾಂಪ್ಲೆಕ್ಸ್‌ನ ಶಮೀರ್ ಪರ್ಲಡ್ಕ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಾರಾಂ ಕೆ.ಬಿ, ಈಶ್ವರ ಭಟ್ ಪಂಜಿಗುಟ್ಟೆ, ನಿಹಾಲ್, ಎಸ್‌ಎಂಎ ದ.ಕ ಈಸ್ಟ್ ಜಿಲ್ಲಾಧ್ಯಕ್ಷ ಯೂಸುಫ್ ಗೌಸಿಯಾ ಸಾಜ, ಅಡ್ವೊಕೇಟ್ ಶಾಕಿರ್ ಹಾಜಿ ಮಿತ್ತೂರು, ಉದ್ಯಮಿಗಳಾದ ಆಶಿಕುದ್ದೀನ್ ಅಖ್ತರ್ ಕುಂಬ್ರ, ಕರೀಂ ಕಾವೇರಿ, ಯಂಗ್ ಬ್ರಿಗೇಡ್ ಪುತ್ತೂರು ತಾಲೂಕು ಅಧ್ಯಕ್ಷ ಶರೀಫ್ ಬಲ್ನಾಡ್, ನಝೀರ್ ಬೆಳ್ತಂಗಡಿ, ಹಮೀದ್ ಕೆ.ಪಿ, ಅಬೂಬಕ್ಕರ್ ಸಿದ್ದೀಕ್ ಇಂದ್ರಾಜೆ, ಮಹಮ್ಮದ್ ಎಸ್.ಎಂ, ಸಲೀಂ ಹಾಜಿ ಪೋಳ್ಯ, ನಝೀರ್ ಉಪ್ಪಿನಂಗಡಿ, ಮಹಮ್ಮದ್ ಕುಂಞಿ ಕುಂಬ್ರ, ಸಲಾಹುದ್ದೀನ್ ಸಖಾಫಿ ಉಪಸ್ಥಿತರಿದ್ದರು.
ಪುತ್ತೂರು ರಾಮಕೃಷ್ಣ ಪ್ರೌಢ ಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಹಾಗೂ ಜಿ.ಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಜಿ.ಎಲ್ ಗ್ರೂಪ್‌ನ ಚೇರ್‌ಮೆನ್ ಬಲರಾಮ ಆಚಾರ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್, ಉದ್ಯಮಿ ಯೂಸುಫ್ ಹಾಜಿ ಕೈಕಾರ ಮತ್ತಿತರರು ಭೇಟಿ ನೀಡಿ ಶುಭ ಹಾರೈಸಿದರು.
ಪ್ರಥಮ ಖರೀದಿ:
ದಮ್ಮಾಮ್ ವಿಲ್ಡನ್ ಅರೇಬಿಕ್ ಗ್ರೂಪ್‌ನ ಸಿಇಓ ಶಾಹುಲ್ ಹಮೀದ್ ಉಜಿರೆ ಪ್ರಥಮ ಖರೀದಿ ಮಾಡಿದರು.
ವೈಟ್ ಟ್ಯಾಗ್ 4ನೇ ಮಳಿಗೆ:
ಈಗಾಗಲೇ ಕಾಸರಗೋಡು, ಸುಳ್ಯ, ಪುತ್ತೂರಿನಲ್ಲಿ ಪುರುಷರ ಸಿದ್ದ ಉಡುಪುಗಳ ಬ್ರಾಂಡೆಡ್ ವಸ್ತ್ರಗಳನ್ನು ಸ್ಪರ್ಧಾತ್ಮಕ ದರದಲ್ಲಿ ಮಾರಾಟ ಮಾಡಿ ಮನೆ ಮಾತಾಗಿರುವ ವೈಟ್ ಟ್ಯಾಗ್ ಮಳಿಗೆ ಇದೀಗ ಮಹಿಳೆಯರ ಸಿದ್ದ ಉಡುಪುಗಳ ಮಳಿಗೆಯನ್ನು ಆರಂಭಸುವ ಮೂಲಕ ಮಹಿಳೆಯರಿಗೂ ಸ್ಪರ್ಧಾತ್ಮಕ ದರದ ಉತ್ತಮ ಉಡುಗೆಗಳನ್ನು ನೀಡಲು ಮುಂದಾಗಿದೆ. ಇದು ವೈಟ್ ಟ್ಯಾಗ್‌ನ ನಾಲ್ಕನೇ ಮಳಿಗೆಯಾಗಿದೆ.
ಉದ್ಘಾಟನೆ ಪ್ರಯುಕ್ತ15% ಡಿಸ್ಕೌಂಟ್ ಆಫರ್:
ವೈಟ್ ಟ್ಯಾಗ್ ವುಮೆನ್ ಮಳಿಗೆಯಲ್ಲಿ ಮಹಿಳೆಯರ ಉಡುಗೆಗಳ ಬೃಹತ್ ಸಂಗ್ರಹವಿದ್ದು, ವಿಭಿನ್ನ ವೆರೈಟಿ, ಕಲರ್ ಫುಲ್ ಮತ್ತು ರೀಸನೇಬಲ್ ದರದಲ್ಲಿ ಲಭ್ಯವಿದೆ. ಪ್ರತಿದಿನವೂ ನೂತನ ಸಂಗ್ರಹಗಳೊಂದಿಗೆ ಹೊಸತನವನ್ನು ನೀಡಲಿದ್ದು ಇದಿಗ 50 ಕ್ಕೂ ಹೆಚ್ಚಿನ ಬ್ರಾಂಡ್‌ಗಳಲ್ಲಿ 5೦೦೦ಕ್ಕೂ ಮೇಲ್ಪಟ್ಟ ವಿವಿಧ ಡಿಸೈನ್‌ಗಳಲ್ಲಿ ಉಡುಪುಗಳು ಲಭ್ಯವಿದೆ. ಅಲ್ಲದೇ ಎಲ್ಲಾ ಬಗೆಯ ಬ್ರಾಂಡೆಡ್ ಲೇಡೀಸ್ ಪರ್ಫ್ಯೂಂ ಲಭ್ಯವಿದೆ. ಶುಭಾರಂಭದ ಪ್ರಯುಕ್ತ 15% ಡಿಸ್ಕೌಂಟ್ ಪ್ರಕಟಿಸಲಾಗಿದ್ದು ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.
ಮರ್ಕಝುಲ್ ಹುದಾ ಅಕಾಡೆಮಿಕ್ ಆಫ್ ಥಿಯೋಲಜಿ ಇದರ ಅಧ್ಯಕ್ಷ ಡಾ.ಎಂಎಸ್‌ಎಂ ಅಬ್ದುಲ್ ರಶೀದ್ ಝೈನಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಇಬ್ರಾಹಿಂ ಮದನಿ ಕಂಬಳಬೆಟ್ಟು ದುವಾ ನೆರವೇರಿಸಿದರು. ವೈಟ್ ಟ್ಯಾಗ್ ವುಮೆನ್ ಡ್ರೆಸ್ ಮಳಿಗೆಯ ಮಾಲಕರಾದ ಬಶೀರ್ ಇಂದ್ರಾಜೆ ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದರು. ವ್ಯವಸ್ಥಾಪಕರಾದ ಬಿ.ಕೆ ರಶೀದ್ ಸಂಪ್ಯ ವಂದಿಸಿದರು. ಹೇಮಾ ಜಯರಾಂ ಕಾರ್ಯಕ್ರಮ ನಿರೂಪಿಸಿದರು.