ಪುತ್ತೂರು ತಾ| ಪ್ರಾ.ಕೃ.ಪ. ಸಹಕಾರ ಸಂಘಗಳ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ನಿರ್ದೇಶಕರುಗಳಿಗೆ ನಾಯಕತ್ವ ತರಬೇತಿ ಶಿಬಿರ

0

*ಪವಿತ್ರವಾದ ಸಹಕಾರಿ ರಂಗವನ್ನು ಎಲ್ಲರೂ ಒಟ್ಟಾಗಿ ಬೆಳೆಸೋಣ -ಶಶಿಕುಮಾರ್ ರೈ
*ವ್ಯಕ್ತಿ ಮಾಡಿದ ಕೆಲಸಗಳು ಶಾಶ್ವತವಾಗಿ ಇರುತ್ತದೆ -ಜಯರಾಮ ರೈ ಬಳೆಜ್ಜ
*ತರಬೇತಿ ಶಿಬಿರದಿಂದ ಸಮಸ್ಯೆ, ಗೊಂದಲಗಳು, ನಿವಾರಣೆಯಾಗಲಿ -ಪ್ರಸಾದ್ ಕೌಶಲ್ ಶೆಟ್ಟಿ
*ನಿಮ್ಮ ಕಷ್ಟ ಸುಖದಲ್ಲಿ ಸಹಕಾರಿ ಸಂಘಗಳು ಭಾಗಿಯಾಗಿದೆ -ರಂಗನಾಥ ರೈ ಗುತ್ತು

ಪುತ್ತೂರು: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಮಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು, ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಸಹಕಾರ ಇಲಾಖೆ ದ.ಕ. ಇದರ ಸಂಯುಕ್ತ ಆಶ್ರಯದಲ್ಲಿ ಪುತ್ತೂರು ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ನಿರ್ದೇಶಕರುಗಳಿಗೆ ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಾಯಕತ್ವ ತರಬೇತಿ ಶಿಬಿರ ನಡೆಯಿತು.


ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಎಲ್ಲರೂ ನಾಯಕರಾಗಿಯೇ ಇರುತ್ತಾರೆ. ಸಹಕಾರಿ ಯೂನಿಯನ್ ನಾಯಕತ್ವ ತರಬೇತಿ ನೀಡವ ಮೂಲಕ ನಿಮ್ಮನ್ನು ಪ್ರಬಲರನ್ನಾಗಿಸಲು ಸಹಕಾರ ನೀಡುತ್ತದೆ ಎಂದರು. ಸಹಕಾರಿ ರಂಗ ಅದ್ಭುತವಾದ ಕ್ಷೇತ್ರ. ಸರಕಾರದ ಕೆಲವು ಹೊಸ ಕಾಯ್ದೆ, ಕಾನೂನುಗಳಿಂದ ಸಹಕಾರ ರಂಗಕ್ಕೆ ಅಪಾಯ ಬರುವ ಸಾಧ್ಯತೆ ಇದೆ. ಕಾಯ್ದೆಗಳಿಗೆ ತಿದ್ದುಪಡಿ, ಬದಲಾವಣೆ ಮಾಡದೆ ಈಗ ಇರುವ ಕಾಯ್ದೆಯನ್ನೇ ಮುಂದುವರೆಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಇದರ ಮೂಲಕ ಸಹಕಾರ ರಂಗ ಬೆಳೆಯಬೇಕು ಎಂದರು. ನೀವು ನೀಡಿದ ಸನ್ಮಾನ, ಪ್ರೀತಿಗಳಿಗೆ ಚ್ಯುತಿ ಬಾರದ ರೀತಿಯಲ್ಲಿ ಕೆಲಸ ಮಾಡುತ್ತೇನೆ. ಸಹಕಾರಿ ರಂಗ ಪವಿತ್ರವಾದ ಕ್ಷೇತ್ರ. ಎಲ್ಲರೂ ಒಟ್ಟಾಗಿ ಇದನ್ನು ಬೆಳೆಸೋಣ ಎಂದರು.


ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಜಯರಾಮ ರೈ ಬಳೆಜ್ಜ ಮಾತನಾಡಿ ಸಹಕಾರಿ ರಂಗವನ್ನು ಉನ್ನತ ಸ್ಥಾನಕ್ಕೇರಿಸಲು ನಾಯಕತ್ವ ಬೇಕು. ಸಹಕಾರ ಸಂಘಗಳ ಮಾತೃ ಸಂಘವಾಗಿ ಎಸ್‌ಸಿಡಿಸಿಸಿ ಬ್ಯಾಂಕ್ ಕಾರ್ಯನಿರ್ವಹಿಸುತ್ತದೆ. ಡಾ.ರಾಜೇಂದ್ರ ಕುಮಾರ್‌ರವರ ನೇತೃತ್ವದಲ್ಲಿ ಸಹಕಾರಿ ಕ್ಷೇತ್ರ ಬೆಳೆದು ನಿಂತಿದೆ ಎಂದರು. ವ್ಯಕ್ತಿ ಮಾಡಿದ ಕೆಲಸಗಳು ಶಾಶ್ವತವಾಗಿ ಇರುತ್ತದೆ. ನಾವೆಲ್ಲರೂ ಪರಸ್ಪರ ಸಹಕಾರ ನೀಡುವ ಮೂಲಕ ಸಹಕಾರ ರಂಗದಲ್ಲಿ ಕೆಲಸ ಮಾಡೋಣ ಎಂದರು. ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಂಗನಾಥ ರೈ ಗುತ್ತು ಮಾತನಾಡಿ ನಾಯಕತ್ವ ಎಲ್ಲರಲ್ಲಿಯೂ ಇರುತ್ತದೆ. ನಿಮ್ಮ ಕಷ್ಟ ಸುಖದಲ್ಲಿ ಸಹಕಾರಿ ರಂಗ, ಸಂಘಗಳು ಭಾಗಿಯಾಗಿದೆ. ಸಹಕಾರಿ ಯೂನಿಯನ್ ಉತ್ತಮ ಕೆಲಸ ಮಾಡುತ್ತದೆ. ಇನ್ನೂ ಕೂಡ ಶಕ್ತಿಶಾಲಿಯಾಗಿ ಸಹಕಾರಿ ಯೂನಿಯನ್ ಬೆಳೆಯಲಿ ಎಂದು ಹೇಳಿದ ಅವರು ನೂತನ ನಿರ್ದೇಶಕರುಗಳಿಗೆ ಅಭಿನಂದನೆ ಸಲ್ಲಿಸಿದರು. ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ಮಾತನಾಡಿ ಸಹಕಾರಿ ಯೂನಿಯನ್ ಮೂಲಕ ಸಹಕಾರ ಸಂಘಗಳಿಗೆ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಹೊಸ ಹೊಸ ಕಾಯ್ದೆ ಕಾನೂನುಗಳು ಬಂದಾಗ ಅದನ್ನು ಎದುರಿಸಲು ಇಂತಹ ಕಾರ್ಯಕ್ರಮಗಳು ಅಗತ್ಯ. ತರಬೇತಿ ಶಿಬಿರದಿಂದ ಸಮಸ್ಯೆ, ಗೊಂದಲಗಳು, ನಿವಾರಣೆಯಾಗಲಿ ಎಂದರು.


ಪುತ್ತೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕಿ ತ್ರಿವೇಣಿ ರಾವ್‌ರವರು ಆಡಳಿತ ಮಂಡಳಿ ಸದಸ್ಯರ ಜವಾಬ್ದಾರಿ, ಕರ್ತವ್ಯಗಳ ಮಾಹಿತಿ ನೀಡಿದರು. ದ.ಕ.ಜಿಲ್ಲಾ ಕೆಂದ್ರ ಸಹಕಾರಿ ಬ್ಯಾಂಕ್‌ನ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ ನಾಯರ್‌ರವರು ಸಹಕಾರ ಸಂಸ್ಥೆಗಳಲ್ಲಿ ಸಾಂಸ್ಥಿಕ ಆಡಳಿತದ ಮಾಹಿತಿ ನೀಡಿದರು. ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕಿ ಸಾವಿತ್ರಿ ರೈ, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಹಾಗೂ ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾಶ್ರೀ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ವಿ.ಹಿರೇಮಠ, ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರುಗಳಾದ ಶೇಷಪ್ಪ ರೈ ಮೂರ್ಕಾಜೆ, ಕರುಣಾಕರ ಶೆಟ್ಟಿ ಕೊಮ್ಮಂಡ, ಆಶಾ ಅರವಿಂದ್, ಚಂದ್ರನ್ ತಲೆಪ್ಪಾಡಿ, ನಾಗರಾಜ್ ಕಜೆ, ಸಿಬಂದಿಗಳಾದ ಲಿಂಗಪ್ಪ ಗೌಡ, ಸ್ವಾತಿ, ನವ್ಯಾ ಅತಿಥಿಗಳಿಗೆ ಹೂಗುಚ್ಚ ನೀಡಿದರು. ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಮಯ್ಯ ರೈ ಸ್ವಾಗತಿಸಿ ಉಪಾಧ್ಯಕ್ಷ ಗಿರೀಶ್ವರ ಭಟ್ ಕಾರ್ಯಕ್ರಮ ನಿರೂಪಿಸಿದರು. ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ರೈ ಸಿ. ವಂದಿಸಿದರು.

ಪುತ್ತೂರು, ಕಡಬ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರುಗಳು, ಮುಖ್ಯಕಾರ್ಯನಿರ್ವಹಣಾಧಿಕಾರಿಗಳು, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ವಲಯ ಮೇಲ್ವಿಚಾರಕರು, ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ನಿರ್ದೇಶಕರು, ಸದಸ್ಯರು, ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.

ಚಿತ್ರ: ಶ್ರೀಹರಿ ಸ್ಟುಡಿಯೊ ರೆಂಜ

ಶಶಿಕುಮಾರ್ ರೈ ಬಾಲ್ಯೊಟ್ಟು, ಜಯರಾಮ ರೈ ಬಳೆಜ್ಜರವರಿಗೆ ಸನ್ಮಾನ
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿದೇಶಕರುಗಳಾಗಿ ಅವಿರೋಧ ಆಯ್ಕೆಗೊಂಡ ಶಶಿಕುಮಾರ್ ರೈ ಬಾಲ್ಯೊಟ್ಟು ಮತ್ತು ಜಯರಾಮ ರೈ ಬಳೆಜ್ಜರವರನ್ನು ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಮತ್ತು ಪುತ್ತೂರು ಹಾಗೂ ಕಡಬ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ವತಿಯಿಂದ ಸನ್ಮಾನಿಸಲಾಯಿತು.


LEAVE A REPLY

Please enter your comment!
Please enter your name here