ಪುತ್ತೂರು: ಈಡನ್ ಗ್ಲೋಬಲ್ ಶಾಲೆಯಲ್ಲಿ ಕಿಂಡರ್ ಗಾರ್ಟನ್ ಹಾಗೂ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.ಎರಡು ದಿನ ಕಾರ್ಯಕ್ರಮ ನಡೆಯಿತು. ಮೊದಲ ದಿನ ಕಿಂಡರ್ ಗಾರ್ಟನ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.ಪ್ರಾರ್ಥನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪಥ ಸಂಚಲನದ ಮೂಲಕ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು. ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಅಶ್ರಫ್ ಶಾ ಮಂತೂರು ಕಾರ್ಯಕ್ರಮ ಉದ್ಘಾಟಿಸಿದರು.
ಅತಿಥಿಯಾಗಿ ಆಗಮಿಸಿದ ಸಯ್ಯದ್ ಮುಹಮ್ಮದ್ ಮಿಹ್ರಾಜ್ ಅಲ್ ಹಾದಿ ತಂಙಳ್ ಹಾಗೂ ಹೊರಿಝಾನ್ ಪಬ್ಲಿಕ್ ಸ್ಕೂಲ್ ವಿಟ್ಲ ಇದರ ಪ್ರಾಂಶುಪಾಲ ಮನಾಜಿರ್ ಮಾತನಾಡಿದರು. ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಗೌರವಿಸಲಾಯಿತು. ನಂತರ ಸಂಸ್ಥೆಯ ಕಾರ್ಯದರ್ಶಿ ಬಶೀರ್ ಹಾಜಿ,ಸಂಸ್ಥೆಯ ಪ್ರಾಂಶುಪಾಲ ರಂಝೀ ಮುಹಮ್ಮದ್ ಹಾಗೂ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಪುತ್ತುಬಾವ ಹಾಜಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಶಿಕ್ಷಕಿ ಜಯ ಲೋಕನಾಥ್ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಮಾಜಿ ಗ್ರಾ.ಪಂ ಸದಸ್ಯ ಅಬ್ದುಲ್ ರಜಾಕ್ ಹಾಗೂ ಅರೇಬಿಕ್ ವಿಭಾಗದ ಮುಖ್ಯಸ್ಥರಾದ ರಶೀದ್ ಸಖಾಫಿ ಉಪಸ್ಥಿತರಿದ್ದರು. ಕಿಂಡರ್ ಗಾರ್ಟನ್ ಶಿಕ್ಷಕಿ ಕುಮಾರಿ ಇಸ್ಫಾನ ಸ್ವಾಗತಿಸಿದರು. ಕುಮಾರಿ ಫಹಿಮಾ ಬಾನು ವಂದಿಸಿದರು. ಶಿಕ್ಷಕಿಯರಾದ ಕುಮಾರಿ ಆಯಿಷತ್ ಸುನೈನಾ ಹಾಗೂ ಕುಮಾರಿ ಅಫ್ರೀನ್ ಬಾನು ಕಾರ್ಯಕ್ರಮ ನಿರೂಪಿಸಿದರು.
10ನೇ ತರಗತಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ:
ಎರಡನೇ ದಿನ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭ ನಡೆಯಿತು. ಪಥ ಸಂಚಲನದ ಮೂಲಕ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು. ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಅಶ್ರಫ್ ಶಾ ಮಂತೂರು ಕಾರ್ಯಕ್ರಮ ಉದ್ಘಾಟಿಸಿದರು. ಅತಿಥಿಗಳಾಗಿ ಆಗಮಿಸಿದ ಮೂಳೂರು ಅಲ್ ಇಹಸನ್ ಇದರ ಪ್ರಾಂಶುಪಾಲರಾದ ಹಬೀಬುರ್ರಹ್ಮಾನ್, ಪುತ್ತೂರು ನಗರಸಭಾ ಸದಸ್ಯ ಮುಹಮ್ಮದ್ ರಿಯಾಝ್ ಹಾಗೂ ರಫೀಕ್ ಮಾಸ್ಟರ್ ಸ್ಪೂರ್ತಿದಾಯಕ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪದವಿ ಪ್ರಧಾನ ಮಾಡಲಾಯಿತು. ಸಂಸ್ಥೆಯ ಪ್ರಾಂಶುಪಾಲರಾದ ರಂಝಿ ಮುಹಮ್ಮದ್, ಸಂಸ್ಥೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ಬಶೀರ್ ಹಾಜಿ ಹಾಗೂ ಪುತ್ತುಬಾವ ಹಾಜಿ ಶುಭ ಹಾರೈಸಿದರು.
ಶಿಕ್ಷಕಿ ದಿವ್ಯ ಹಾಗೂ ಶಿಕ್ಷಕ ಇಮ್ತಿಯಾಝ್ ಶುಭ ಹಾರೈಸಿದರು. ಅರೇಬಿಕ್ ವಿಭಾಗದ ಮುಖ್ಯಸ್ಥರಾದ ರಶೀದ್ ಸಖಾಫಿ ಸ್ವಾಗತಿಸಿದರು. ಶಿಕ್ಷಕಿ ಸಂಶೀದ ವಂದಿಸಿದರು. ಫಾತಿಮಾ ಸನಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಎಲ್ಲಾ ಬೋಧಕ ಮತ್ತು ಬೋಧಕೇತರ ವರ್ಗದವರು ಮತ್ತು ಮಕ್ಕಳ ಪೋಷಕರು ಉಪಸ್ಥಿತರಿದ್ದರು.