ಪುತ್ತೂರು: ದಕ್ಷಿಣ ಕನ್ನಡಕ್ಕೆ ಹೊರಗಡೆಯಿಂದ ದೇಶ, ರಾಜ್ಯ, ಜಿಲ್ಲೆಯಿಂದ ಅಡಿಕೆ ಬರಬಾರದು. ಒಂದು ವೆಳೆ ಬಂದರೆ ಲಾರಿಗೆ ಬೆಂಕಿ ಹಚ್ಚುವ ಕೆಲಸ ಅಥವಾ ಅಧಿಕಾರಿಗಳನ್ನು ಮುಂದಿಟ್ಟು ಅವರ ಗೋದಾಮಿಗೆ ಬೀಗ ಜಡಿಯುವ ಕೆಲಸ ಮಾಡಲಿದ್ದೇವೆ ಎಂದು ಕರ್ನಾಟಕ ರೈತ ಒಕ್ಕೂಟದ ಮುಖ್ಯಸ್ಥ ರೂಪೇಶ್ ರೈ ಅಲಿಮಾರ್ ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ ದಕ್ಷಿಣ ಕನ್ನಡದ ಗುಣಮಟ್ಟದ ಅಡಿಕೆಗೆಗೆ ಹೊರಗಡೆಯಿಂದ ಬರುವ ಅಡಿಕೆಯನ್ನು ಮಿಶ್ರ ಮಾಡಿ ಮಾರುಕಟ್ಟೆಯಲ್ಲಿ ಕಳಪೆ ಗುಣಮಟ್ಟದ ಅಡಿಕೆಯಾಗಿ ನಮ್ಮ ದಕ್ಷಿಣ ಕನ್ನಡದ ಅಡಿಕೆಯ ದರ ಕುಸಿಯುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡಕ್ಕೆ ಹೊರಗಡೆಯಿಂದ ಅಡಿಕೆ ಬಂದರೆ ನಾವು ಲಾರಿಗೆ ಬೆಂಕಿ ಹಾಕುವ ಕೆಲಸ ಮಾಡಲಿದ್ದೇವೆ. ನಾವು ಬದುಕು ಕಟ್ಟಿಕೊಳ್ಳಲು ಏನು ಬೇಕಾದರೂ ಮಾಡಲು ಸಿದ್ದರಿದ್ದೇವೆ ಎಂದ ಅವರು ಈ ಕುರಿತು ಜಿಲ್ಲಾಡಳಿತ, ಜಿಲ್ಲಾಧಿಕಾರಿ, ಸಹಾಯಕ ಕಮೀಷನರ್, ತಹಶೀಲ್ದಾರ್ ಅವರು ಸೂಕ್ತ ಕ್ರಮ ಕೈಗೊಳ್ಳಬೇಕು. ತೋಟಗಾರಿಕೆ, ಮಾರುಕಟ್ಟೆ ಅಧಿಕರಿಗಳು ಮತ್ತು ಪೊಲೀಸ್ ಇಲಾಖೆಯವರು ರೈತರ ಬದುಕು ಕಟ್ಟಿಕೊಡಲು ಇರುವವರು. ನಮಗೆ ರಾಜಕೀಯವಿಲ್ಲ. ನಾವು ಚುನಾವಣೆಗೆ ನಿಲ್ಲುವುದಿಲ್ಲ. ರೈತ ಸಂಘದವರು ರೈತಾಪಿ ಜನರ ಬದುಕಿಗೆ ಹೋರಾಟ ಮಾಡುವವರು. ಈಶ್ವರಮಂಗಲದಲ್ಲಿ ನಿನ್ನೆ ಲಾರಿಯಲ್ಲಿ ಬಂದಿರುವ ಅಡಿಕೆಯನ್ನು ರೈತ ಸಂಘದ ಅಮರ್‌ಆಳ್ಳ ಅವರು ಪರಿಶೀಲಿಸಿದಾಗ ಅಡಿಕೆ ಕಳಪೆ ಆಗಿದೆ ಎಂಬುದು ಬೆಳಕಿಗೆ ಬಂದಿದೆ. ಲಾರಿಯವರು ಕೂಡಾ ಹಿಂದಿರುಗಿ ಹೋಗಿದ್ದಾಎ. ಕುರಿತು ಸಿಪಿಸಿಆರ್‌ಐ ಮೂಲಕ ಪರೀಕ್ಷೆಗೊಳಪಡಿಸಿ ಮತ್ತು ಯಾವಭಾಗದಿಂದ ಈ ಅಡಿಕೆ ಬಂದಿರುವುದು ಕುರಿತು ವರದಿ ಮಾಡಬೇಕೆಂದರು.
ಶೋಭ ಕರಂದ್ಲಾಜೆ ಸ್ಪಷ್ಟನೆ ನೀಡಬೇಕು:
ಭೂತಾನ್ ಬಿಟ್ಟು ಬೇರೆ ಯಾವ ದೇಶದೊಂದಿಗೆ ಅಡಿಕೆ ಆಮದಿಗೆ ಒಪ್ಪದಂವಿಲ್ಲ. ಅಡಿಕೆ ಆಮದು ಆಗುತ್ತಿಲ್ಲ ಎಂದ ಕಿದುವಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಆದರೆ ಅವರದ್ದೇ ಸಚಿವಾಲಯದ ಕೆಳಗಿರುವ ಐಸಿಎಆರ್ ಸಂಸ್ಥೆ 2022ರ ಸೆಪ್ಟೆಂಬರ್ ತನಕ 60 ಸಾವಿರ ಟನ್ ಅಡಿಕೆ ಆಮದಾಗಿದೆ ಎಂದು ವರದಿ ಮಾಡಿದೆ. ಅದಲ್ಲದೆ ಶಾರ್ಕ್ ದೇಶಗಳ ಒಪ್ಪಂದಂತೆ ಹಿಂದುಳಿದ ದೇಶಗಳ ಪಟ್ಟಿಯಲ್ಲಿ ಬರ್ಮ, ಬಾಂಗ್ಲದೇಶ್, ಮಾಮ್ನಾರ್ , ಶ್ರೀಲಂಕಾ, ಅಪಘಾನಿಸ್ತಾನದಿಂದ ಭಾರತಕ್ಕೆ ಯಾವುದೇ ಉತ್ಪನ್ನ ತೆರಿಗೆ ಇಲ್ಲದೆ ಭಾರತಕ್ಕೆ ಲೀಗಲ್ ಬರುತ್ತದೆ. ಇದರಲ್ಲಿ ಅಡಿಕೆಯು ಸೇರಿದೆ. ಈ 5 ದೇಶಗಳಿಂದ ಅಡಿಕೆ ಆಮದು ಆಗುತ್ತಿದೆ ಎಂದು ಸಂಸ್ಥೆಯ ವರದಿ ಇದೆ. ಹಾಗಾಗಿ ಇಲ್ಲಿ ಶೋಭಾ ಕರಂದ್ಲಾಜೆ ಅವರು ನೀಡಿದ ಹೇಳಿಕೆ ಸತ್ಯಕ್ಕೆ ದೂರವಾಗಿದೆಯೋ ಅಥವಾ ಅವರ ಸಚಿವಾಲಯದ ಕೆಳಗಿರುವ ಐಸಿಎಆರ್ ನೀಡಿದ ವರದಿ ಸುಳ್ಳಾಗಿದೆಯೋ ಎಂಬುದನ್ನು ಅವರು ಸ್ಪಷ್ಟಪಡಿಸಬೇಕು ಎಂದ ಅವರು ಅವರು ಈ ನಿಟ್ಟಿನಲ್ಲಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ರೈತ ಒಕ್ಕೂಟದ ಮುಖ್ಯಸ್ಥ ಸನ್ನಿ ಡಿಸೋಜ ಅವರು ಆಗ್ರಹಿಸಿದರು. ಒಕ್ಕೂಟದ ಇನ್ನೋವ ಮುಖ್ಯಸ್ಥ ಸುರೇಶ್ ಭಟ್ ಅವರು ಮಾತನಾಡಿ ಭಾರತಕ್ಕೆ ಉಪಯೋಗಕ್ಕೆಯೋಗ್ಯವಲ್ಲದ ಅಡಿಕೆ ಕುರಿತು ಕ್ರಮ ಕೈಗೊಳ್ಳುವ ಕೆಲಸ ಆಗಬೇಕು. ಯಾಕೆಂದರೆ ಬೇರೆಲ್ಲಾ ದೇಶಗಳ ಕಳಪೆ ಅಡಿಕೆ ಐದು ದೇಶಗಳಿಗೆ ಬಂದು ಅಲ್ಲಿಂದ ಭಾರತಕ್ಕೆ ತೆರಿಗೆ ರಹಿತವಾಗಿ ಬರುತ್ತಿವೆ. ಇದರಿಂದ ಭಾರತದ ಆರ್ಥಿಕ ಸ್ಥಿತಿ ಕುಸಿಯುತ್ತಿದೆ. ನಮ್ಮ ಉತ್ಪನ್ನಗಳಿಗೆ ಬೆಲೆ ಇಲ್ಲದಂತಾಗಿದೆ. ಈ ಕುರಿತು ಈಗಾಗಲೇ ಸಹಾಯಕ ಕಮಿಷನರ್, ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿದ್ದೇವೆ. ಇದಕ್ಕೆ ಸೂಕ್ತ ಕಾನುನು ಕ್ರಮ ಕೈಗೊಳ್ಳುವ ಕುರಿತು ಅವರು ಭರವಸೆ ನೀಡಿದ್ದಾರೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ಇಬ್ರಾಹಿಂ ಕಲೀಲ್ ಉಪಸ್ಥಿತರಿದ್ದರು.